Architect Balkrishna Doshi: ವಿಶ್ವಪ್ರಸಿದ್ಧ ವಾಸ್ತುಶಿಲ್ಪ ತಜ್ಞ ಬಾಲಕೃಷ್ಣ ದೋಶಿ ಇನ್ನಿಲ್ಲ

ನವದೆಹಲಿ: (Architect Balkrishna Doshi) ವಿಶ್ವಪ್ರಸಿದ್ದ ವಾಸ್ತುಶಿಲ್ಪತಜ್ಞ ಶ್ರೀ ಬಾಲಕೃಷ್ಣ ದೋಶಿ ಅವರು ನಮ್ಮನ್ನೆಲ್ಲಾ ಅಗಲಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ತಮ್ಮ 95 ನೇ ವಯಸ್ಸಿನಲ್ಲಿ ನಿಧನರಾದರು. ಇವರ ನಿಧನಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪವನ್ನು ಸೂಚಿಸಿದ್ದಾರೆ.

ವಾಸ್ತುಶಿಲ್ಪ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದ ದೋಶಿ ಅವರು ಐಐಎಂ ಬೆಂಗಳೂರು, ಎನ್‌ ಐ ಎಫ್‌ ಟಿ ದೆಹಲಿ ಮತ್ತು ಅಹಮದಾಬಾದ್‌ನ ಸಿಇಪಿಟಿ ವಿಶ್ವವಿದ್ಯಾಲಯದಂತಹ ದೇಶದ ಕೆಲವು ಅಪ್ರತಿಮ ರಚನೆಗಳನ್ನು ವಿನ್ಯಾಸಗೊಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ರಾಯಲ್‌ ಗೋಲ್ಡ್‌ ಮೆಡಲ್‌ ಹಾಗೂ ಪ್ರಿಟ್ಜ್ಕರ್‌ ಆರ್ಕಿಟೆಕ್ಚರ್‌ ಪ್ರಶಸ್ತಿ ಈ ಎರಡು ಅತ್ಯುನ್ನತ ಪ್ರಶಸ್ತಿಯನ್ನು ಪಡೆದ ಏಕೈಕ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಶ್ರೀ ಬಾಲಕೃಷ್ಣ ದೋಶಿ ಅವರು.

1954 ರಲ್ಲಿ ಗಿರಣಿ ಮಾಲೀಕರ ಸಂಘದ ಕಟ್ಟಡ ಮತ್ತು ೧೯೫೫ ರಲ್ಲಿ ಅಹಮದಾಬಾದ್‌ ನಲ್ಲಿ ವಿಲ್ಲಾ ಸಾರಾಭಾಯಿ ಸೇರಿದಂತೆ ಲೆ ಕಾರ್ಬ್ಯೂಸಿಯರ್‌ ನ ಯೋಜನೆಗಳ ನಿರ್ಮಾಣದ ಮೇಲ್ವಿಚಾರಕರಾಗಿ ಕೆಲಸ ಆರಂಭಿಸಿದ ಇವರು. 1956 ರಲ್ಲಿ ತಮ್ಮದೇ ಆದ ವಾಸ್ತುಶಿಲ್ಪ ಅಧ್ಯಯನ ಕೇಂದ್ರವನ್ನು ಸ್ಥಾಪಿಸಿದರು. ಐಐಎಂ ಅಹಮದಾಬಾದ್‌ ಸೇರಿದಂತೆ ಭಾರತದ ವಿವಿಧೆಡೆ ನೂರಕ್ಕೂ ಹೆಚ್ಚು ಯೋಜನೆಗಳಲ್ಲಿ ಈ ಸಂಸ್ಥೆ ಕೆಲಸ ಮಾಡಿದೆ. 1963 ರಲ್ಲಿ ತಮ್ಮದೇ ಯೋಚನೆಗಳ ಮೂಲಕ ತಮ್ಮ ಸ್ವಂತ ಮನೆಯನ್ನು ವಿನ್ಯಾಸಗೊಳಿಸಿ ಕಮಲಾ ಹೌಸ್‌ ಎಂದು ನಾಮಕರಣ ಮಾಡಿದ್ದು, 1978 ರಲ್ಲಿ ವಾಸ್ತು ಶಿಲ್ಪ ಫೌಂಡೇಶನ್‌ ಅನ್ನು ಸ್ಥಾಪಿಸಿ ಶೈಕ್ಷಣಿಕ ಮತ್ತು ವೃತ್ತಿಪರ ಸಲಹೆಗಾರರ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸುವಂತೆ ಯೋಜನೆಗಳನ್ನು ರೂಪಿಸಿದರು.

ವಾಸ್ತುಶಿಲ್ಪ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆಯನ್ನು ಮಾಡಿದ ಬಾಲಕೃಷ್ಣ ದೋಶಿ ಅವರಿಗೆ ಕೇಂದ್ರ ಸರಕಾರವು 2020 ರಲ್ಲಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಗೌರವ ಪದ್ಮಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಿತು. ಅಲ್ಲದೇ 2022 ರಲ್ಲಿ ವಾಸ್ತುಶಿಲ್ಪಕ್ಕಾಗಿ ನೀಡಲಾಗುವ ವಿಶ್ವದ ಅತ್ಯುನ್ನತ ಗೌರವಗಳಲ್ಲಿ ಒಂದಾದ ರಾಯಲ್‌ ಗೋಲ್ಡ್‌ ಮೆಡಲ್‌ ಅನ್ನು ನೀಡಿ ಗೌರವಿಸಲಾಯಿತು. ಹಾಗೂ ಇವರ ಜೀವಮಾನ ಸಾಧನೆಗಾಗಿ ರಾಣಿ ಎಲಿಜಬೆತ್‌ ಅವರು ಪ್ರಿಟ್ಜ್ಕರ್‌ ಆರ್ಕಿಟೆಕ್ಚರ್‌ ಪ್ರಶಸ್ತಿಯನ್ನು ವೈಯಕ್ತಿಕವಾಗಿ ಅನುಮೋದಿಸಿದ್ದರು. ಈ ಎರಡು ಅತ್ಯುನ್ನತ ಪ್ರಶಸ್ತಿಯನ್ನು ಪಡೆದ ಏಕೈಕ ಭಾರತೀಯ ಎಂಬ ಹೆಗ್ಗಳಿಕೆಗೆ ಶ್ರೀ ಬಾಲಕೃಷ್ಣ ದೋಶಿ ಅವರು ಪಾತ್ರರಾಗಿದ್ದಾರೆ

ಇದನ್ನೂ ಓದಿ : Building collapse-3 dead: 4 ಅಂತಸ್ತಿನ ಕಟ್ಟಡ ಕುಸಿತ: 3 ಸಾವು, 12 ಮಂದಿಯ ರಕ್ಷಣೆ

ಇದನ್ನೂ ಓದಿ : RBI ಹೊಸ ರೂಲ್ಸ್ : ಬ್ಯಾಂಕ್ ಲಾಕರ್ ಸೌಲಭ್ಯ ಬಳಸುತ್ತಿದ್ರೆ ತಪ್ಪದೇ ಈ ಸುದ್ದಿಯನ್ನು ಓದಿ

ಪ್ರಧಾನಿ ನರೇಂದ್ರ ಮೋದಿ ಅವರು ಬಾಲಕೃಷ್ಣ ವಿಠ್ಠಲ್‌ ದಾಸ್‌ ಅವರ ಸಾವಿಗೆ ಸಂತಾಪವನ್ನು ಸೂಚಿಸಿದ್ದು, ” ಡಾ. ಬಿವಿ ದೋಶಿ ಅವರು ಅದ್ಭುತ ವಾಸ್ತುಶಿಲ್ಪಿ ಮತ್ತು ಪ್ರಸಿದ್ದ ಸಂಸ್ಥೆಯ ನಿರ್ಮಾತೃ ಅಗಿದ್ದರು. ,ಮುಂದಿನ ಪೀಳಿಗೆಯವರು ಭಾರತದಾದ್ಯಂತ ಅವರ ಕೆಲಸ ಕಾರ್ಯಗಳನ್ನು ಮೆಚ್ಚುವ ಮೂಲಕ ಅವರ ಶ್ರೇಷ್ಠ ಕೆಲಸಗಳನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾರೆ ಅವರ ಅಗಲಿಕೆ ನೋವು ತಂದಿದೆ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು” ಎಂದು ಟ್ವೀಟ್‌ ಮಾಡಿದ್ದಾರೆ.

Architect Balkrishna Doshi: World renowned architect Balkrishna Doshi is no more

Comments are closed.