Aryan Khan Drug Case: ಆರ್ಯನ್ ಖಾನ್ ವಿರುದ್ಧದ ಡ್ರಗ್ಸ್ ಕೇಸ್ ಗೆ ಟ್ವಿಸ್ಟ್.. ಟಾರ್ಗೆಟ್ ಆಗಿದ್ನಾ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಪುತ್ರ

ನವದೆಹಲಿ : Aryan Khan Drug Case ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ. ಹಾಗೂ ಬಾಲಿವುಡ್ ಬೆಚ್ಚಿ ಬೀಳಿಸಿದ್ದ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ವಿರುದ್ಧದ ಡ್ರಗ್ಸ್ ಕೇಸ್ ಗೆ ಮಹತ್ವದ ತಿರುವು ಸಿಕ್ಕಿದೆ. ಪ್ರಕರಣದಲ್ಲಿ NCBಯ 7 ರಿಂದ 8  ಅಧಿಕಾರಿಗಳ ವಿರುದ್ಧ ಅನುಮಾನ ವ್ಯಕ್ತವಾಗಿದೆ.

ಮುಂಬೈನ ಕ್ರೂಸ್ ಹಡಗಿನಲ್ಲಿ ನಡೆದ ಪಾರ್ಟಿ ಮೇಲೆ ಸಮೀರ್ ವಾಖೆಂಡೆ ನೇತೃತ್ವದ ಎನ್ ಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿತ್ತು. ಕಳೆದ ವರ್ಷದ ನಡೆದ ಈ ದಾಳಿ ಬಳಿಕ ಸಾಕಷ್ಟು ಸಂಚಲನ ಎದ್ದಿತ್ತು. ಆದ್ರೆ ಬಳಿಕ ನಡೆದ ತನಿಖೆಯಲ್ಲಿ ಆರ್ಯನ್ ಖಾನ್ ಗೆ ಎನ್ ಸಿಎಬಿಯ ವಿಶೇಷ ತನಿಖಾ ತಂಡ ಕ್ಲಿನ್ ಚಿಟ್ ನೀಡಿತ್ತು. ಬಳಿಕ ಎನ್ ಸಿಬಿ ಅಧಿಕಾರಿಗಳ ತನಿಖೆಯ ವಿಚಕ್ಷಣೆಗಾಗಿ ವಿಶೇಷ ತಂಡವನ್ನ ರಚಿಸಲಾಗಿತ್ತು ಇದೀಗಿ ಈ ವಿಚಕ್ಷಣಾ ತನಿಖಾ ತಂಡ ಮೂರು ಸಾವಿರ ಪುಟಗಳ ವರದಿಯನ್ನ ನೀಡಿದ್ದು, ವರದಿಯಲ್ಲಿ ಅಂದು ದಾಳಿ ನಡೆಸಿದ್ದ 7 ರಿಂದ 8 ಅಧಿಕಾರಿಗಳ ವಿರುದ್ಧ ಅನುಮಾನ ವ್ಯಕ್ತಪಡಿಸಿದೆ.

ಎನ್‌ಸಿಬಿ ಮೂಲಗಳ ಪ್ರಕಾರ, ಈ ವಿಷಯದ ತನಿಖೆ ಸರಿಯಾಗಿ ನಡೆದಿಲ್ಲ ಎಂದು ಉಲ್ಲೇಖವಾಗಿದೆ ಎಂದು ಹೇಳಲಾಗ್ತಿದೆ. ಅಲ್ದೆ, ಪ್ರಕರಣದಲ್ಲಿ ಸಾಕಷ್ಟು ಅವ್ಯವಹಾರ ನಡೆದಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಈ ಪ್ರಕರಣದಲ್ಲಿ 65 ಜನರ ಹೇಳಿಕೆಗಳನ್ನು ಎನ್‌ಸಿಬಿ ದಾಖಲಿಸಿಕೊಂಡಿದೆ. ಕೆಲವರು ತಮ್ಮ ಹೇಳಿಕೆಯನ್ನು 3 ರಿಂದ 4 ಬಾರಿ ಬದಲಾಯಿಸಿದ್ದಾರೆ. ಈ ಪ್ರಕರಣದ ತನಿಖೆಯ ವೇಳೆ ಇತರ ಕೆಲವು ಪ್ರಕರಣಗಳ ತನಿಖೆಯಲ್ಲೂ ಲೋಪಗಳು ಕಂಡುಬಂದಿವೆ. ಈ ಎಲ್ಲ ಪ್ರಕರಣಗಳ ವರದಿಯನ್ನು ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣದ ತನಿಖೆಯಲ್ಲಿ ಭಾಗಿಯಾಗಿದ್ದ ಸಮೀರ್ ವಾಂಖೆಡೆ ಸೇರಿ ಕೆಲವು ಎನ್‌ಸಿಬಿ ಅಧಿಕಾರಿಗಳನ್ನು ಚೆನ್ನೈಗೆ ವರ್ಗಾಯಿಸಲಾಗಿತ್ತು. ಎನ್‌ಸಿಬಿ ಮುಂಬೈ ವಲಯದ ಮಾಜಿ ಮುಖ್ಯಸ್ಥ ವಾಂಖೆಡೆ ಅವರನ್ನು ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್‌ನಿಂದ ಚೆನ್ನೈನ ಡಿಜಿ ಟಿಎಸ್‌ಗೆ ವರ್ಗಾಯಿಸಲಾಗಿದೆ.

ಇದನ್ನೂ ಓದಿ : Congress President Election Result: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ಫಲಿತಾಂಶಕ್ಕೆ ಕೌಂಟ್ ಡೌನ್

ಇದನ್ನೂ ಓದಿ : Thyroid : ಥೈರಾಯ್ಡ್‌ ಅಸಮತೋಲನವನ್ನು ಸರಿದೂಗಿಸಿಕೊಳ್ಳಲು 3 ಆಹಾರಗಳ ಸಲಹೆ ಕೊಟ್ಟ ಆಯುರ್ವೇದ ಡಾಕ್ಟರ್‌

Aryan Khan Drug Case NCB report points at ‘selective treatment in drugs on cruise case

Comments are closed.