Azadi Ka Amrit Mahotsav: ಸ್ವಾತಂತ್ರೋತ್ಸವ ನೆನಪಿಗಾಗಿ ಆಜಾದಿ ಕಾ ಅಮೃತ್ ಮಹೋತ್ಸವ ರೈಲು ಸಂಚಾರ ಪ್ರಾರಂಭ

ಭಾರತ ಸರ್ಕಾರವು 12ನೇ ಮಾರ್ಚ್ 2021 ರಂದು 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸಲು ಮತ್ತು ಸ್ಮರಣಾರ್ಥವಾಗಿ ವಿಶೇಷ ‘ಆಜಾದಿ ಕಾ ಅಮೃತ್ ಮಹೋತ್ಸವ'(Azadi Ka Amrit Mahotsav) ಉಪಕ್ರಮವನ್ನು ಪ್ರಾರಂಭಿಸಿತ್ತು. ಕೇಂದ್ರ ಸರ್ಕಾರದ ಸಚಿವಾಲಯಗಳು ಆಜಾದಿ ಕಾ ಅಮೃತ್ ಮಹೋತ್ಸವಕ್ಕೆ ಕೊಡುಗೆ ನೀಡಲು ಪ್ರಯತ್ನಗಳನ್ನು ಕೈಗೊಳ್ಳುತ್ತಿವೆ.’ಆಜಾದಿ ಕಾ ಅಮೃತ್ ಮಹೋತ್ಸವ’ದ ನೆನಪಿಗಾಗಿ ಭಾರತೀಯ ರೈಲ್ವೆ ವಿಶೇಷ ರೈಲುಗಳನ್ನು ಪ್ರಾರಂಭಿಸಿದೆ. ಈ ವಿಶೇಷ ರೈಲುಗಳು ಸ್ವಾತಂತ್ರ್ಯ ಹೋರಾಟಕ್ಕೆ ಮೀಸಲಾಗಿವೆ. ಈ ವಿಶೇಷ ರೈಲುಗಳಲ್ಲಿ ಒಂದಾದ ಪ್ರಥಮ ಸ್ವತಂತ್ರತಾ ಸಂಗ್ರಾಮ್ ಎಕ್ಸ್‌ಪ್ರೆಸ್ 1857 ರ ಸ್ವಾತಂತ್ರ್ಯ ಹೋರಾಟಕ್ಕೆ ಮೀಸಲಾಗಿದೆ.

ಈ ವಿಶೇಷ ರೈಲು ವಿರಂಗನ ಲಕ್ಷ್ಮೀಬಾಯಿ ರೈಲು ನಿಲ್ದಾಣ ಮತ್ತು ಕೋಲ್ಕತ್ತಾ ರೈಲು ನಿಲ್ದಾಣದ ನಡುವೆ ಸಂಚರಿಸಲಿದೆ. ರೈಲು ಸಂಖ್ಯೆ 22198 ಪ್ರಥಮ ಸ್ವತಂತ್ರತಾ ಸಂಗ್ರಾಮ್ ಎಕ್ಸ್‌ಪ್ರೆಸ್ ಶುಕ್ರವಾರ ಝಾನ್ಸಿ ನಿಲ್ದಾಣದಿಂದ ಹೊರಟು ಶನಿವಾರ ಕೋಲ್ಕತ್ತಾ ತಲುಪುತ್ತದೆ. ಏತನ್ಮಧ್ಯೆ, ರೈಲು ಸಂಖ್ಯೆ 22197 ಪ್ರಥಮ ಸ್ವತಂತ್ರತಾ ಸಂಗ್ರಾಮ್ ಎಕ್ಸ್‌ಪ್ರೆಸ್ ಭಾನುವಾರ ಕೋಲ್ಕತ್ತಾದಿಂದ ಹೊರಟು ಸೋಮವಾರ ಝಾನ್ಸಿ ನಿಲ್ದಾಣವನ್ನು ತಲುಪುತ್ತದೆ.

ಆಜಾದಿ ಕಾ ಅಮೃತ್ ಮಹೋತ್ಸವದ ಸಂದರ್ಭದಲ್ಲಿ ಭಾರತೀಯ ಸ್ವಾತಂತ್ರ್ಯ ಹೋರಾಟದ ನೆನಪಿಗಾಗಿ ವಿವಿಧ ರೈಲುಗಳನ್ನು ಓಡಿಸಲಾಗುತ್ತಿದೆ ಎಂದು ಉತ್ತರ ಮಧ್ಯ ರೈಲ್ವೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಶಿವಂ ಶರ್ಮಾ ಹೇಳಿದ್ದಾರೆ. 1857 ರ ಮೊದಲ ಸ್ವಾತಂತ್ರ್ಯ ಹೋರಾಟವನ್ನು ಆಚರಿಸಲು ಭಾರತೀಯ ರೈಲ್ವೇಯು ಪ್ರಥಮ ಸ್ವತಂತ್ರತಾ ಸಂಗ್ರಾಮ್ ಎಕ್ಸ್‌ಪ್ರೆಸ್ ಅನ್ನು ಪ್ರಾರಂಭಿಸಿದೆ ಎಂದು ಅವರು ಹೇಳಿದರು. ಈ ರೈಲು ಓರೈ, ಕಲ್ಪಿ, ಪ್ರಯಾಗರಾಜ್, ಬಕ್ಸರ್ ಮತ್ತು ಪಾಟ್ನಾದಂತಹ ನಗರಗಳ ಮೂಲಕ ಹಾದುಹೋಗುತ್ತದೆ. ರೈಲ್ವೇ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಈ ರೈಲಿನ ಬಗ್ಗೆ ಟ್ವೀಟ್ ಮಾಡಿದೆ.

ಝಾನ್ಸಿಯಲ್ಲಿ ಸ್ವಾತಂತ್ರ್ಯ ಸಂಗ್ರಾಮ ಪ್ರಾರಂಭವಾಯಿತು ಎಂಬುದು ಗಮನಿಸಬೇಕಾದ ಸಂಗತಿ. ರಾಣಿ ಲಕ್ಷ್ಮೀಬಾಯಿ ಕಲ್ಪಿ ಮತ್ತು ಓರೈನಲ್ಲಿ ತಂಗಿದ್ದರು. ಆದ್ದರಿಂದ, ಪ್ರಥಮ ಸ್ವತಂತ್ರತಾ ಸಂಗ್ರಾಮ್ ಎಕ್ಸ್‌ಪ್ರೆಸ್ ಸ್ವಾತಂತ್ರ್ಯ ಹೋರಾಟದಲ್ಲಿ ವಿಶೇಷ ಸ್ಥಾನವನ್ನು ಹೊಂದಿರುವ ಎಲ್ಲಾ ಐತಿಹಾಸಿಕ ನಗರಗಳ ಮೂಲಕ ಹಾದುಹೋಗುತ್ತದೆ.

ಇದನ್ನೂ ಓದಿ : Raw Banana Benefits: ಬಾಳೆಹಣ್ಣಷ್ಟೆ ಅಲ್ಲಾ , ಬಾಳೆಕಾಯಿಯೂ ಆರೊಗ್ಯಕ್ಕೆ ಉತ್ತಮ;ಬಾಳೆಕಾಯಿಯ ಪ್ರಯೋಜನಗಳೇನು ಗೊತ್ತಾ !

(Azadi Ka Amrit Mahotsav train on independence day)

Comments are closed.