ಸತ್ತ ತಾಯಿಯ ಮೇಲೆ ಮಲಗಿ ಮರಿ ಲಾಂಗೂರ್ ಕಣ್ಣೀರಿಡುವ ಮನಕಲುಕುವ ವಿಡಿಯೋ ವೈರಲ್‌

(Baby Langur viral video) ಮನುಷ್ಯರಿಗಾಗಲಿ ಅಥವಾ ಪ್ರಾಣಿಗಳಾಗಲಿ ತಾಯಿ ಸತ್ತ ನೋವು ಯಾವಾಗಲೂ ಅಸಹನೀಯವಾಗಿದೆ. ಯಾವುದೇ ಜೀವಿಗಳಿಗೆ ಆಗಲಿ ತಾಯಿಯ ಜೊತೆಗೆ ಅಘಾದವಾದ ನಂಟಿರುತ್ತದೆ. ತಾಯಿ ಮಗುವಿನ ಸಂಬಂಧವನ್ನು ತೋರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಅಗಿದ್ದು, ಅಸ್ಸಾಂನಲ್ಲಿ ವೇಗವಾಗಿ ಬಂದ ಕಾರು ಢಿಕ್ಕಿ ಹೊಡೆದು ಸತ್ತು ಮಲಗಿದ ತಾಯಿಯ ಮೇಲೆ ಮರಿ ಲಾಂಗೂರ್ ಮಲಗಿ ಕಣ್ಣೀರಿಡುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಬಳಕೆದಾರರನ್ನು ಅಸಮರ್ಥಗೊಳಿಸಿದೆ.

ಈ ವೈರಲ್ ವಿಡಿಯೋದಲ್ಲಿ, ನವಜಾತ ಲಾಂಗೂರ್ ಮರಿ ಅಪಘಾತಕ್ಕೊಳಗಾಗಿ ಸತ್ತ ತಾಯಿ ಲಾಂಗೂರ್‌ ಅನ್ನು ತಬ್ಬಿಕೊಂಡು ಅಳುತ್ತಿರುವುದನ್ನು ಕಾಣಬಹುದು. ಇದರಲ್ಲಿ ನವಜಾತ ಲಾಂಗೂರ್‌ ತನ್ನ ತಾಯಿಯ ಮುಖವನ್ನು ಹಿಡಿದಿದ್ದು, ತಾಯಿಯನ್ನು ಎಬ್ಬಿಸಲು ಪ್ರಯತ್ನಿಸುತ್ತಿರುವ ಮನಕಲುಕುವ ದೃಶ್ಯವನ್ನು ಕಾಣಬಹುದು. ತಾಯಿಯನ್ನು ಕಳೆದುಕೊಂಡ ನವಜಾತ ಲಾಂಗೂರ್‌ ಮರಿ ದಿಕ್ಕು ಕಾಣದೇ ತಾಯಿಗೆ ಏನಾಗಿದೆ ಎಂದು ತಿಳಿಯದೇ ಅಸಾಹಯಕತೆಯಿಂದ ಅಳುತ್ತಿದ್ದು, ಜೊತೆಗೆ ತಾಯಿಯನ್ನು ಎಬ್ಬಿಸಲು ಕೂಡ ಪ್ರಯತ್ನಿಸುತ್ತಿದೆ. ತಾಯಿಯನ್ನು ಕಳೆದುಕೊಂಡ ಮಗುವಿನ ದುಃಖದ ಕೂಗು ಹೃದಯ ವಿದ್ರಾವಕವಾಗಿದೆ.

ಈ ವೈರಲ್ ವೀಡಿಯೊವನ್ನು ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಸುಸಂತ ನಂದಾ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ವೈರಲ್ ವೀಡಿಯೊದ ಶೀರ್ಷಿಕೆ ಹೀಗಿದೆ, “ಇದು ನನ್ನನ್ನು ದೀರ್ಘಕಾಲದವರೆಗೆ ಬೇಟೆಯಾಡುತ್ತದೆ. ಅಸ್ಸಾಂನ ರಸ್ತೆಯಲ್ಲಿ ಗೋಲ್ಡನ್ ಲಾಂಗೂರ್ ಹತ್ಯೆ. ತನಗೆ ಏನಾಯಿತು ಎಂದು ತಿಳಿಯದೆ ಮಗು ಇನ್ನೂ ತನ್ನ ತೋಳಿನಲ್ಲಿದೆ. ಮಗುವನ್ನು ಉಳಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ನನಗೆ ತಿಳಿಸಲಾಗಿದೆ.” ಎಂದು ಬರೆದುಕೊಂಡಿದ್ದಾರೆ. ಇನ್ನೂ ಈ ಮನಕಲುಕುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದ್ದು, ಕಾಮೆಂಟ್ ವಿಭಾಗದಲ್ಲಿ ಬಳಕೆದಾರರು ತಮ್ಮ ಕಳವಳ ಮತ್ತು ಕೋಪವನ್ನು ವ್ಯಕ್ತಪಡಿಸಿದ್ದಾರೆ.

ಟ್ವಿಟರ್‌ ಬಳಕೆದಾರರಲ್ಲಿ ಒಬ್ಬರು “ಈ ದುರದೃಷ್ಟಕರ ಮತ್ತು ದುಃಖಕರ ದೃಶ್ಯವನ್ನು ವ್ಯಕ್ತಪಡಿಸಲು ಯಾವುದೇ ಪದಗಳು ಸಾಕಾಗುವುದಿಲ್ಲ. ಮಗುವಿನ ದುಃಖದ ಕೂಗು ಹೃದಯ ವಿದ್ರಾವಕವಾಗಿದೆ.” ಎಂದು ಬರೆದುಕೊಂಡಿದ್ದು, ಮತ್ತೊಬ್ಬ ಬಳಕೆದಾರರು “ಇದು ನನ್ನ ಹೃದಯವನ್ನು ಒಡೆದು ಛಿದ್ರಗೊಳಿಸಿತು” ಎಂದು ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ. ಇನ್ನೋರ್ವ ಬಳಕೆದಾರರು “ಇದು ತುಂಬಾ ಹೃದಯವಿದ್ರಾವಕ ಬಡ ಮಗು ತಾಯಿಯನ್ನು ಕಳೆದುಕೊಂಡಿದೆ” ಎಂದು ಬರೆದಿದ್ದಾರೆ.

https://twitter.com/iakhilparmar/status/1629256040247345153?ref_src=twsrc%5Etfw%7Ctwcamp%5Etweetembed%7Ctwterm%5E1629256040247345153%7Ctwgr%5Eff6430173cee86b5a07987f8dc4df3e42fc90bfa%7Ctwcon%5Es1_&ref_url=https%3A%2F%2Fwww.india.com%2Fviral%2Fviral-video-baby-langur-weeps-over-dead-mother-in-assam-internet-breaks-down-watch-5914857%2F

ಇದೀಗ ಅಳುವ ನವಜಾತ ಲಾಂಗೂರ್‌ನ ವೈರಲ್ ವೀಡಿಯೊ 122K ವೀಕ್ಷಣೆಗಳನ್ನು ಪಡೆದುಕೊಂಡಿದ್ದು, 600 ಕ್ಕೂ ಹೆಚ್ಚು ರೀಟ್ವೀಟ್‌ಗಳು ಮತ್ತು ಸುಮಾರು 2K ಲೈಕ್‌ಗಳನ್ನು ಪಡೆದುಕೊಂಡಿದೆ. ಇತ್ತೀಚಿನ ದಿನಗಳಲ್ಲಿ ರಸ್ತೆ ಅಗಲೀಕರಣ ಹಾಗೂ ಮುಂತಾದ ಅಭಿವೃದ್ದಿ ಕಾರ್ಯಗಳಿಗೋಸ್ಕರ ಮರಗಳನ್ನು ಕಡಿದು ಕಾಡನ್ನು ನಾಶಗೊಳಿಸಲಾಗಿದೆ. ಕಾಡಿನಲ್ಲಿ ವಾಸಿಸುವ ಅದೆಷ್ಟೋ ಪ್ರಾಣಿ ಪಕ್ಷಿಗಳು ವಾಸಿಸಲು ಜಾಗವಿಲ್ಲದೇ ತಿನ್ನಲು ಆಹಾರವಿಲ್ಲದೇ, ಸ್ವತಂತ್ರವಾಗಿ ಓಡಾಡಲು ಜಾಗವಿಲ್ಲದೇ ರಸ್ತೆಗಳಲ್ಲಿ ಓಡಾಡುತ್ತವೆ. ಇದನ್ನು ಗಮನಿಸಿಯೋ ಅಥವಾ ಗಮನಿಸದೆಯೋ ಕೆಲವು ಚಾಲಕರು ಅವುಗಳಿಗೆ ಢಿಕ್ಕಿ ಹೊಡೆದು ಹೋಗುತ್ತಾರೆ.

ಇದನ್ನೂ ಓದಿ : Swiggy Dineout facility: ಸ್ವಿಗ್ಗಿಯಿಂದ ಇನ್ನು ಮುಂದೆ ತಡೆರಹಿತ ಸೌಲಭ್ಯ : ಗ್ರಾಹಕರಿಗೆ ಏನೆಲ್ಲಾ ಪ್ರಯೋಜನ ನೀಡುತ್ತದೆ ಗೊತ್ತಾ?

ಮನುಷ್ಯರಂತೆ ಅವುಗಳಿಗೂ ಕೂಡ ಕುಟುಂಬವಿದೆ ಎನ್ನುವುದನ್ನು ಮರೆತ ಜನರಿಗೆ ಅವುಗಳಿಗೂ ಕುಟುಂಬವಿದೆ, ನಮ್ಮಂತೆಯೇ ಅವುಗಳು ಸತ್ತರೂ ಕೂಡ ಕಣ್ಣೀರಿಡಲು ಜೀವಗಳಿವೆ ಎನ್ನುವುದನ್ನು ಈ ವಿಡಿಯೋ ತೋರಿಸಿಕೊಡುತ್ತದೆ. ತಾಯಿಯನ್ನು ಕಳೆದುಕೊಂಡ ಅನಾಥ ಮಕ್ಕಳಂತೆಯೇ ಈ ಪ್ರಾಣಿಗಳು ಕೂಡ. ಪ್ರಾಣಿಗಳಿಗೆ ಆಹಾರ, ಜಾಗ ಕೊಡದೇ ಇದ್ದರೂ ತೊಂದರೆಯಿಲ್ಲ, ಆದರೆ ಅವುಗಳನ್ನು ಸಾವಿನ ಕೂಪಕ್ಕೆ ತಳ್ಳದಿರಿ ಎನ್ನುವುದು ನಮ್ಮೇಲ್ಲರ ಕಳಕಳೀಯ ಮನವಿ.

Baby Langur viral video: Heartbreaking video of baby langur crying while lying on dead mother goes viral

Comments are closed.