ಡ್ರಿಂಕ್ ಅಂಡ್ ಡ್ರೈವ್ ಮಾಡಿ ಸಿಕ್ಕಿ ಬಿದ್ರೆ ಇನ್ಮುಂದೆ ಆಸ್ಪತ್ರೆ ಸೇರೋದು ಗ್ಯಾರಂಟಿ !

0

ಬೆಂಗಳೂರು : ಲಾಕ್ ಡೌನ್ ಆದೇಶ ಸಡಿಲವಾಗುತ್ತಿದ್ದಂತೆಯೇ ಸಾವಿರಾರು ವಾಹನಗಳು ರಸ್ತೆಗೆ ಇಳಿಯುತ್ತಿವೆ. ಸಂಚಾರ ನಿಯಂತ್ರಣ ಮಾಡೋದು ಪೊಲೀಸರಿಗೆ ಕಷ್ಟಕರವಾಗ್ತಿದೆ. ಇದರ ನಡುವಲ್ಲೇ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿರುವುದರಿಂದಾಗಿ ಡ್ರಿಂಕ್ ಆಂಡ್ ಡ್ರೈವ್ ಪ್ರಕರಣ ಪತ್ತೆ ಹಚ್ಚೋದೆ ಪೊಲೀಸರಿಗೆ ಹೊಸ ತಲೆವೋವು ತರಿಸಿದೆ. ಒಂದೊಮ್ಮೆ ಡ್ರಿಂಕ್ ಆಂಡ್ ಡ್ರೈವ್ ಮಾಡಿ ಸಿಕ್ಕಿ ಬಿದ್ರೆ ಪೊಲೀಸರು ನಿಮ್ಮನ್ನು ಆಸ್ಪತ್ರೆಗೆ ದಾಖಲಿಸೋದು ಗ್ಯಾರಂಟಿ.

ರಾಜ್ಯದಾದ್ಯಂತ ಇನ್ನೂ ಕೊರೊನಾ ವೈರಸ್ ಸೋಂಕು ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ. ಆದರೂ ಸರಕಾರ ಲಾಕ್ ಡೌನ್ ಆದೇಶವನ್ನು ಸಡಿಲಗೊಳಿಸಿದೆ. ಒಂದೆಡೆ ಸಾಲು ಸಾಲು ವಾಹನಗಳು ರಸ್ತೆಗೆ ಇಳಿಯುತ್ತಿದ್ರೆ, ಇನ್ನೊಂದೆಡೆ ಜನರು ಎಣ್ಣೆ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಮದ್ಯ ಖರೀದಿ ಮಾಡುತ್ತಿದ್ದಾರೆ.

ಹಲವು ಖರೀದಿ ಮಾಡಿದ ಎಣ್ಣೆಯನ್ನು ಸೀದಾ ಮನೆಗೆ ಕೊಂಡೊಯ್ಯುತ್ತಿದ್ರೆ, ಮದ್ಯ ಸೇವನೆ ಮಾಡಿ ವಾಹನ ಸವಾರಿ ಮಾಡುವವರ ಸಂಖ್ಯೆಯೂ ಹೆಚ್ಚಿದೆ. ಕೊರೊನಾ ಅಟ್ಟಹಾಸ ಹೆಚ್ಚುತ್ತಿರೋ ಬೆನ್ನಲ್ಲೇ ಡ್ರಿಂಕ್ಸ್ ಮಾಡಿ ಡ್ರೈವ್ ಮಾಡುವವರನ್ನು ಚೆಕ್ ಮಾಡೋದಕ್ಕೆ ಪೊಲೀಸರು ಭಯ ಬೀಳುತ್ತಿದ್ದಾರೆ. ಡ್ರಿಂಕ್ ಆಂಡ್ ಡ್ರೈವ್ ಚೆಕ್ ಮಾಡಿದ್ರೆ ಎಲ್ಲಿ ಕೊರೊನಾ ಒಕ್ಕರಿಸುತ್ತೋ ಅನ್ನೋ ಆತಂಕ ಪೊಲೀಸರಿಗೆ ಎದುರಾಗಿದೆ.

ಸಾಮಾನ್ಯವಾಗಿ ಪೊಲೀಸರು ಆಲ್ಕೋ ಮೀಟರ್ ಮೂಲಕ ಡ್ರಿಂಕ್ ಆಂಡ್ ಡ್ರೈವ್ ಪತ್ತೆ ಪತ್ತೆ ಹಚ್ಚಲಾಗುತ್ತಿದೆ. ಯಾರು ಎಷ್ಟು ಪ್ರಮಾಣದಲ್ಲಿ ಎಣ್ಣೆ ಸೇವನೆ ಮಾಡಿದ್ದಾರೆ ಅನ್ನೋದನ್ನು ತಿಳಿಸುತ್ತೆ. ಆದರೆ ಆಲ್ಕೋ ಮೀಟರ್ ಬಳಕೆಯಿಂದ ಕೊರೊನಾ ವೈರಸ್ ಸೋಂಕು ವ್ಯಾಪಿಸುವ ಸಾಧ್ಯತೆಯೂ ಇದೆ. ಜೊತೆಗೆ ಈಗಾಗಲೇ ಪೊಲೀಸ್ ಇಲಾಖೆಗೂ ಕೊರೊನಾ ಸೋಂಕು ವ್ಯಾಪಿಸಿದೆ. ಪೇದೆಯೋರ್ವರಿಗೆ ಈಗಾಗಲೇ ಕೊರೊನಾ ಪಾಸಿಟಿವ್ ವರದಿ ಬಂದ ಬೆನ್ನಲ್ಲೇ ಪೊಲೀಸರ ಆತಂಕ ಹೆಚ್ಚಾಗಿದೆ. ಹೀಗಾಗಿಯೇ ಪೊಲೀಸ್ ಸಿಬ್ಬಂಧಿಗಳು ಆಲ್ಕೋ ಮೀಟರ್ ಬಳಸಿ ಡ್ರಿಂಕ್ ಆಂಡ್ ಡ್ರೈವ್ ಪತ್ತೆ ಹಚ್ಚೋದಕ್ಕೆ ಹಿಂದೇಟು ಹಾಕುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿಯೇ ಬೆಂಗಳೂರು ಪೊಲೀಸರು ಮಾಸ್ಟರ್ ಪ್ಲ್ಯಾನ್ ವೊಂದನ್ನು ರೂಪಿಸಿದ್ದಾರೆ. ಈ ಕುರಿತು ಮಾತನಾಡಿರುವ ಬೆಂಗಳೂರು ಟ್ರಾಫಿಕ್ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿರುವ ರವಿಕಾಂತೇ ಗೌಡ, ಅವರು ಮುನ್ನೆಚ್ಚರಿಕೆಯಾಗಿ ಸದ್ಯ ನಗರ ಪೊಲೀಸ್ ಆಯುಕ್ತರು ಮುಂಜಾನೆ 9 ಸಂಜೆ 6ರ ವರೆಗೆ ಮಾತ್ರವೇ ಮದ್ಯ ಮಾರಾಟ ಮಾಡಲಷ್ಟೇ ಅವಕಾಶ ಕಲ್ಪಿಸಲಾಗುತ್ತಿದೆ. ಮದ್ಯ ಖರೀದಿ ಮಾಡುವ ವ್ಯಕ್ತಿ ರಸ್ತೆ ಫುಟ್ ಪಾತ್, ಪಾರ್ಕ್, ಮೈದಾನಗಳಲ್ಲಿ ಯಾವುದೇ ಕಾರಣಕ್ಕೂ ಕುಡಿಯುವಂತಿಲ್ಲ.

ಒಂದೊಮ್ಮೆ ಹಗಲಿನ ಹೊತ್ತಲ್ಲಿ ಕುಡಿದು ವಾಹನ ಸವಾರಿ ಮಾಡಿದರೆ ಚೆಕ್ಕಿಂಗ್ ಮಾಡಲು ಬಹಳ ಸಮಸ್ಯೆಯಾಗುತ್ತೆ. ರಾತ್ರಿ ಸಂಪುರ್ಣವಾಗಿ ಸಿಟಿ ಕರ್ಪೂ ಮಾದರಿ ಇರಬೇಕು ಯಾರು ಮನೆಯಿಂದ ಹೊರಗೆ ಬರುವಂತಿಲ್ಲ. ಸದ್ಯದ ಸ್ಥಿತಿಯಲ್ಲಿ ಪೊಲೀಸ್ ಸಿಬ್ಬಂದಿಗಳಿಗೂ ಭಯವಿದೆ. ಆದರೂ ಭಯದಲ್ಲಿಯೇ ಅನಿವಾರ್ಯವಾಗಿ ಡ್ರಿಂಕ್ ಆಂಡ್ ಡ್ರೈವ್ ತಪಾಸಣೆ ಮಾಡಬೇಕಿದೆ. ಒಂದೊಮ್ಮೆ ಡ್ರಿಂಕ್ ಆಂಡ್ ಡ್ರೈವ್ ಮಾಡಿ ಸಿಕ್ಕಿಬಿದ್ರೆ ಅಂತವರನ್ನು ಆಸ್ಪತ್ರೆಗೆ ಕರೆದೊಯ್ದು ಚೆಕ್ ಮಾಡಿಸಲಾಗುತ್ತದೆ ಎಂದಿದ್ದಾರೆ.

ಒಟ್ಟಿನಲ್ಲಿ ಕೊರೊನಾ ಮಹಾಮಾರಿಗೆ ಪೊಲೀಸ್ ಇಲಾಖೆಯೂ ಬೆಚ್ಚಿಬಿದ್ದಿದೆ. ಡ್ರಿಂಕ್ ಆಂಡ್ ಡ್ರೈವ್ ಮಾಡಿ ವಾಹನ ಚಾಲನೆ ಮಾಡೋ ಮೊದಲು ಒಮ್ಮೆ ಯೋಚಿಸಿ. ಒಂದೊಮ್ಮೆ ಡ್ರಿಂಕ್ ಆಂಡ್ ಡ್ರೈವ್ ಮಾಡಿ ಸಿಕ್ಕಿಬಿದ್ರೆ ಆಸ್ಪತ್ರೆಗೆ ದಾಖಲಾಗೋದು ಗ್ಯಾರಂಟಿ. ಮಾತ್ರವಲ್ಲ ಆಸ್ಪತ್ರೆಯ ಬಿಲ್ ಕೂಡ ನೀವೇ ಪಾವತಿಸಬೇಕಾದಿತೂ ಯಾವುದಕ್ಕೂ ಹುಷಾರ್.

Leave A Reply

Your email address will not be published.