sanitary pad : ಉಚಿತ ಸ್ಯಾನಿಟರಿ ಪ್ಯಾಡ್​ ಕೇಳಿ ಅವಮಾನಕ್ಕೊಳಗಾಗಿದ್ದ ವಿದ್ಯಾರ್ಥಿನಿಗೆ ಇನ್ಮುಂದೆ ಉಚಿತ ಪ್ಯಾಡ್​,ಉಚಿತ ಶಿಕ್ಷಣ

ಬಿಹಾರ: Bihar student sanitary pad : ಕೆಲವು ದಿನಗಳ ಹಿಂದೆಯಷ್ಟೇ ಉಚಿತ ಸ್ಯಾನಿಟರಿ ಪ್ಯಾಡ್​ಗಳನ್ನು ಕೇಳಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಕಾಂಡೋಮ್​ ಉಚಿತವಾಗಿ ಬೇಕೆ ಎಂದು ಕೇಳಿ ಮಹಿಳಾ ಅಧಿಕಾರಿಯೊಬ್ಬರು ವ್ಯಾಪಕ ವಿರೋಧವನ್ನು ಎದುರಿಸಿದ್ದು ನೆನಪಿದ್ದಿರಬಹುದು. ಈ ರೀತಿ ಸಭೆಯಲ್ಲಿ ಅಧಿಕಾರಿಯ ಬಳಿ ಉಚಿತ ಸ್ಯಾನಿಟರಿ ಪ್ಯಾಡ್​ ಕೇಳಿ ಅವಮಾನಕ್ಕೊಳಗಾಗಿದ್ದ 20 ವರ್ಷದ ವಿದ್ಯಾರ್ಥಿನಿ ರಿಯಾ ಕುಮಾರಿ ಇನ್ಮುಂದೆ ಒಂದು ವರ್ಷಗಳ ಕಾಲ ಉಚಿತ ಸ್ಯಾನಿಟರಿ ಪ್ಯಾಡ್​ನ್ನು ಪಡೆಯುವುದು ಮಾತ್ರವಲ್ಲದೇ ತನ್ನ ಶಿಕ್ಷಣಕ್ಕಾಗಿ ಧನಸಹಾಯವನ್ನೂ ಪಡೆಯಲಿದ್ದಾಳೆ.

ದೆಹಲಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸ್ತ್ರೀಲಿಂಗ ನೈರ್ಮಲ್ಯ ಸಂಸ್ಥೆಯು ಶುಕ್ರವಾರದಂದು ರಿಯಾ ಕುಮಾರಿ ಪದವಿ ಶಿಕ್ಷಣ ಪೂರೈಸಲು ಧನಸಹಾಯ ಮಾಡುವುದಾಗಿ ಹೇಳಿದೆ. ಪ್ರಸ್ತುತ ರಿಯಾ ಕುಮಾರಿ ವೈಶಾಲಿಯ ಹಾಜಿಪುರದ ರಾಮ್​ ವಿಲಾಸ್​ ರಾಯ್​ ಕಾಲೇಜಿನಲ್ಲಿ ಬಿಎ ವ್ಯಾಸಂಗ ಮಾಡ್ತಿದ್ದಾರೆ. ಇದರ ಜೊತೆಯಲ್ಲಿ ಒಂದು ವರ್ಷಗಳ ಕಾಲ ರಿಯಾ ಕುಮಾರಿಗೆ ಎವರ್ಟೀಸ್​ ಕಂಪನಿಯಿಂದ ಉಚಿತ ಸ್ಯಾನಿಟರಿ ಪ್ಯಾಡ್​ ಪೂರೈಕೆ ಆಗಲಿದೆ.

ಸೆಪ್ಟೆಂಬರ್​ 27ರಂದು ಪಾಟ್ನಾದಲ್ಲಿ ನಡೆದಿದ್ದ ಕಾರ್ಯಾಗಾರದಲ್ಲಿ ಬಿಹಾರದ ಹಿರಿಯ ಐಎಎಸ್​ ಅಧಿಕಾರಿ ಹರ್ಜೋತ್​ ಕೌರ್​ ಭಮ್ರಾ ಬಳಿ ರಿಯಾ ಕುಮಾರಿ ಉಚಿತ ಸ್ಯಾನಿಟರಿ ಪ್ಯಾಡ್​ಗಳನ್ನು ಪೂರೈಸುವಂತೆ ಮನವಿ ಮಾಡಿದ್ದಾರೆ.ಇದಕ್ಕೆ ಕಟುವಾಗಿ ಉತ್ತರಿಸಿದ ಹರ್ಜೋತ್​ ಕೌರ್​ ಇಂದು ಉಚಿತ ಸ್ಯಾನಿಟರಿ ಪ್ಯಾಡ್​ ಕೇಳುತ್ತೀರಿ ಮುಂದಿನ ದಿನಗಳಲ್ಲಿ ಉಚಿತ ಕಾಂಡೋಮ್​ ಕೂಡ ಕೇಳುತ್ತೀರಿ ಎಂದು ನಿಂದಿಸಿದ್ದರು.

ನಾಳೆ ನೀವು ಸರ್ಕಾರದ ಬಳಿ ಜೀನ್ಸ್​ ಸ್ವಲ್ಪ ದಿನದ ಬಳಿಕ ಸುಂದರವಾದ ಜೀನ್ಸ್​ ಉಚಿತವಾಗಿ ನೀಡುವಂತೆ ಸರ್ಕಾರದ ಬಳಿ ಕೇಳುತ್ತೀರಿ. ಇದಾದ ಬಳಿಕ ಫ್ಯಾಮಿಲಿ ಪ್ಲಾನಿಂಗ್​ ಮಾಡಲು ಉಚಿತ ಕಾಂಡೋಮ್​ ನೀಡಿ ಅಂತಲೂ ಸರ್ಕಾರವನ್ನೇ ಕೇಳುತ್ತೀರಿ. ಎಂದು ಕಿಡಿಕಾರಿದ್ದರು. ಮಹಿಳಾ ಅಧಿಕಾರಿ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಗುರುವಾರದಂದು ಕ್ಷಮೆಯಾಚಿಸಿದ್ದರು.

ಇದನ್ನು ಓದಿ : Siraj replaces Jasprit Bumrah: ಗಾಯಾಳು ಜಸ್ಪ್ರೀತ್ ಬುಮ್ರಾ ಬದಲು ಟೀಮ್ ಇಂಡಿಯಾ ಸೇರಿದ ಆರ್‌ಸಿಬಿ ವೇಗಿ ಸಿರಾಜ್

ಇದನ್ನೂ ಓದಿ : Fans angry on Bumrah: “ಐಪಿಎಲ್’ಗೆ ಸದಾ ರೆಡಿ.. ವಿಶ್ವಕಪ್ ಬಂದ್ರೆ ಹೊರ ನಡಿ ; ಬುಮ್ರಾ ವಿರುದ್ಧ ಕ್ರಿಕೆಟ್ ಪ್ರಿಯರು ಫುಲ್ ಗರಂ

Bihar student who raised sanitary pad question gets sponsor for education, pads

Comments are closed.