Tips for Better Sleep : ಸರಿಯಾದ ನಿದ್ದೆಯಿಲ್ಲದೆ ದಿನಪೂರ್ತಿ ಆಲಸ್ಯವೇ? ಉತ್ತಮ ನಿದ್ದೆಗೆ ಹೀಗೆ ಮಾಡಿ

ನಿದ್ದೆ ಬರದೇ ಇರುವುದು ಅಥವಾ ನಿದ್ದೆಯ ಕೊರತೆ (Sleeplessness) ಇದು ಆರೋಗ್ಯಕ್ಕೆ ಸಂಬಂಧ ಪಟ್ಟ ಗಂಭೀರ ಸಮಸ್ಯೆಗಳಲ್ಲಿ ಒಂದಾಗಿದೆ. ಜಗತ್ತಿನಲ್ಲಿ ನಿದ್ರಾಹೀನತೆಯಿಂದ (Insomnia) ಲಕ್ಷಗಟ್ಟಲೆ ಜನರು ಬಳಲುತ್ತಿದ್ದಾರೆ. ಅವರಲ್ಲಿ ಎಷ್ಟೋ ಜನರಿಗೆ ಗೊತ್ತೇ ಇರುವುದಿಲ್ಲ, ಇದು ಒಂದು ಗಂಭೀರ ಆರೋಗ್ಯ ಸಮಸ್ಯೆ ಎಂದು. ಇದೇ ಕಾರಣದಿಂದಾಗಿ ಹೆಚ್ಚಿನವರು ವೈದ್ಯರ ಬಳಿಹೋಗದೇ ನಿರ್ಲಕ್ಷ್ಯ ಮಾಡಿಬಿಡುತ್ತಾರೆ (Tips for Better Sleep). ಈ ಸಮಸ್ಯೆಯಿಂದ ಹೊರಬರಲಾಗದೇ ಅನೇಕ ತೊಂದರೆಗಳನ್ನು ಅನುಭವಿಸುತ್ತಾರೆ. ನಿದ್ದೆಯ ಕೊರತೆಯು ಓದು, ಕರಿಯರ್‌, ಫ್ಯಾಮಿಲಿ ಮತ್ತು ಕೆಲಸಗಳ ಮೇಲೆ ನೇರಪರಿಣಾಮ ಬೀರುತ್ತದೆ.

ನಿದ್ದೆ ಬರದಿರಲು ಕಾರಣವೇನು?
ನ್ಯಾಷನಲ್‌ ಹೆಲ್ತ್‌ ಇನ್‌ಸ್ಟಿಟ್ಯೂಟ್‌ನ ಪ್ರಕಾರ ಪ್ರಾಥಮಿಕವಾಗಿ ನಿದ್ದೆ ಕೊರತೆಯ ಗಂಭೀರ ಸಮಸ್ಯೆಯ ಹಿಂದೆ ಮಾನಸಿಕ ಕಾರಣ, ಹಳೆಯ ರೋಗಗಳಿಗೆ ತೆಗೆದುಕೊಳ್ಳುತ್ತಿರುವ ದೀರ್ಘಕಾಲದ ಔಷಧಿ ಅಥವಾ ಹಾರ್ಮೋನ್‌ಗಳ ಅಸಮತೋಲನ ಮುಂತಾದವುಗಳು ಕಾರಣವಾಗುತ್ತದೆ. ನಿದ್ದೆ ಸರಿಯಾಗಿರದಿದ್ದರೆ ಅದು ಮಾನಸಿಕ ಮತ್ತು ದೈಹಿಕ ಆರೋಗ್ಯದೆ ಮೇಲೆ ಪರಿಣಾಮ ಬೀರುತ್ತದೆ.

ನಿದ್ದೆ ಕೊರತೆಯ ಲಕ್ಷಣಗಳು :

  • ದಿನವಿಡೀ ಸುಸ್ತು ಅಥವಾ ಆಲಸ್ಯ ಇರುವುದು.
  • ಶರೀರ ಭಾರ ಎನಿಸುವುದು.
  • ಯಾವುದೇ ಕೆಲಸಗಳನ್ನು ಗಮನವಿಟ್ಟು ಮಾಡದೇ ಇರುವುದು.
  • ಕಿರಿಕಿರಿಯ ಅನುಭವ
  • ಮೂಡ್‌ ಸ್ವಿಂಗ್‌
  • ಅತಿಯಾದ ಸಿಟ್ಟು

ರಾತ್ರಿಯ ಉತ್ತಮ ನಿದ್ದೆಗಾಗಿ ಏನು ಮಾಡಬೇಕು?

  • ಚಹಾ ಮತ್ತು ಕಾಫಿಯ ಸೇವನೆ ಕಡಿಮೆ ಮಾಡಿ. ಅದರಲ್ಲೂ ರಾತ್ರಿಯ ಸಮಯದಲ್ಲಿ ಕೇಫಿನ್‌ ಸೇವಿಸಲೇಬೇಡಿ.
  • ದಿನಕ್ಕೆ ಕಡಿಮೆ ಎಂದರೂ 45 ನಿಮಿಷಗಳ ವಾಕ್‌ ಮಾಡಿ. ಎಕ್ಸಸೈಜ್‌, ಯೋಗ ಮಾಡುತ್ತಿದ್ದರೂ ವಾಕ್‌ ಮಾಡಿ.
  • ನಿದ್ದೆ ಮಾಡುವ ಅರ್ಧ ಗಂಟೆಯ ಮೊದಲು ಟಿವಿ ಅಥವಾ ಮೊಬೈಲ್‌ ಬಳಸಬೇಡಿ.
  • ನಿದ್ದೆ ಮಾಡುವು ಮೊದಲು ಉತ್ತಮ ಪುಸ್ತಕ ಅಥವಾ ಸಂಗೀತ ಕೇಳಿ.
  • ನಿದ್ದೆಯ ಕೊರತೆ ಸಮಸ್ಯೆ ಹೆಚ್ಚಾಗಿದ್ದರೆ, ರಾತ್ರಿ ಮಲಗುವ ಮೊದಲು ಬಿಸಿನೀರಿನ ಸ್ನಾನ ಮಾಡಿ. ಇದರಿಂದ ಒಳ್ಳೆಯ ನಿದ್ದೆ ಬರುತ್ತದೆ.

ಇದನ್ನೂ ಓದಿ : Iodine Deficiency : ಅಯೋಡಿನ್‌ ಕೊರತೆ ನಿವಾರಿಸುವ 5 ಸೂಪರ್‌ ಫುಡ್‌ಗಳು ಯಾವುದು ಗೊತ್ತಾ

ಇದನ್ನೂ ಓದಿ : Relief From Joint Pain: ಚಳಿಗಾಲದಲ್ಲಿ ಗಂಟುನೋವೇ? ಇಲ್ಲಿದೆ ಪರಿಹಾರೋಪಾಯ

(Tips for Better Sleep, reasons of insomnia, how to get better sleep)

Comments are closed.