ಹುಟ್ಟುಹಬ್ಬದ ಸಂಭ್ರಮಾಚರಣೆ ವೇಳೆ ಕಟ್ಟಡ ಕುಸಿತ : 2 ಸಾವು, 15 ಮಂದಿಗೆ ಗಂಭೀರ ಗಾಯ

ಉತ್ತರಪ್ರದೇಶ : ಹುಟ್ಟು ಹಬ್ಬದ ಸಂಭ್ರಮಾಚರಣೆಯ ವೇಳೆಯಲ್ಲಿ ವಸತಿ ಕಟ್ಟಡವೊಂದು ಕುಸಿದು 2 ಸಾವನ್ನಪ್ಪಿ15 ಮಂದಿಗೆ ಗಂಭೀರ ಗಾಯಗೊಂಡಿರುವ ಘಟನೆ ಉತ್ತರದ ಪ್ರದೇಶದ ಆಗ್ರಾದ ತಾಜ್‌ಗಂಜ್ ಪ್ರದೇಶದಲ್ಲಿ ನಡೆದಿದೆ.

ವಸತಿ ಕಟ್ಟಡದಲ್ಲಿ ಹುಟ್ಟುಹಬ್ಬದ ಸಂಭ್ರಮಾಚರಣೆ ನಡೆಯುತ್ತಿತ್ತು. ಈ ವೇಳೆಯಲ್ಲಿ ಒಮ್ಮಿಂದೊಮ್ಮೆಲೆ ಕಟ್ಟಡ ಕುಸಿತವಾಗಿದೆ. ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದು, ಗಾಯ ಗೊಂಡಿರುವ ಹದಿನೈದು ಮಂದಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕಟ್ಟಡದಲ್ಲಿ ಎಷ್ಟು ಮಂದಿ ಇದ್ದರೂ ಅನ್ನೋದು ಇನ್ನು ಖಚಿತವಾಗಿಲ್ಲ. ಬದುಕುಳಿದವರಿಗಾಗಿ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ ಎಂದು ಆಗ್ರಾ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಪ್ರಭು ಎನ್ ಸಿಂಗ್ ಹೇಳಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ : ಬೆಂಗಳೂರಲ್ಲಿ ಸೀಜ್ ಆಯ್ತು ಬಚ್ಚನ್ ಕಾರು! ಬಿಗ್ ಬೀ ಗೆ ಶಾಕ್ ಕೊಟ್ರಾ ಆರ್.ಟಿ.ಓ ಅಧಿಕಾರಿಗಳು?!

ಇದನ್ನೂ ಓದಿ : Heavy Rain Alert : ಅಗಸ್ಟ್‌ 27ರ ವರೆಗೆ ಭಾರೀ ಮಳೆ : ಐಎಂಡಿ ಮುನ್ಸೂಚನೆ

Comments are closed.