ಕೊನೆಗೂ ತಲೈವಿ ಎಂಟ್ರಿಗೆ ಮುಹೂರ್ತ ಫಿಕ್ಸ್: ಸಪ್ಟೆಂಬರ್ 10 ರಂದು ಕಂಗನಾ ಸಿನಿಮಾ ರಿಲೀಸ್.

ಸದಾ ವಿವಾದಗಳಿಂದಲೇ ಸುದ್ದಿಯಾಗೋ ಬಾಲಿವುಡ್ ನ ಹಾಟ್ ಆಂಡ್ ಬೋಲ್ಡ್ ನಟಿ ಕಂಗನಾ ರನಾವುತ್ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಕಂಗನಾ ಬಹುನೀರಿಕ್ಷಿತ ಸಿನಿಮಾ ತಲೈವಿ ಕೊನೆಗೂ ತೆರೆಗೆ ಬರಲು ಸಿದ್ಧವಾಗಿದ್ದು, ಗಣೇಶ ಚತುರ್ಥಿಯಂದು ಸಿನಿಮಾ ರಿಲೀಸ್ ಮುಹೂರ್ತ ನಿಗದಿಯಾಗಿದೆ.

ಕಂಗನಾ ರನಾವುತ್ ತಮಿಳುನಾಡಿನ ದೇವತೆಯಂತಿದ್ದ ಜಯಲಲಿತಾ ಜೀವನ ಆಧಾರಿತ ತಲೈವಿ ಸಿನಿಮಾದಲ್ಲಿ ನಟಿಸಿದ್ದಾರೆ. ಜಯಲಲಿತಾ ರೋಲ್ ನಲ್ಲಿ ಕಂಗನಾ ಕಾಣಿಸಿಕೊಂಡು ಈಗಾಗಲೇ ಪೋಸ್ಟರ್, ಟ್ರೇಲರ್ ಮೂಲಕ  ಅಭಿಮಾನಿಗಳ ಮನಗೆದ್ದಿದ್ದಾರೆ.

ಎಲ್ಲ ಅಂದುಕೊಂಡಂತೆ ಆಗಿದ್ದರೇ ತಲೈವಿ ಚಿತ್ರ ಏಪ್ರಿಲ್ ನಲ್ಲಿ ತೆರೆಗೆ ಬರಬೇಕಿತ್ತು. ಆದರೆ ಕೊರೋನಾ ಕಾರಣಕ್ಕೆ ಸಿನಿಮಾ ರಿಲೀಸ್ ವಿಳಂಬವಾಗಿತ್ತು. ಈಗ ಸಪ್ಟೆಂಬರ್ 10 ಗಣೇಶ ಚತುರ್ಥಿಯಂದು ಸಿನಿಮಾ ರಿಲೀಸ್ ಆಗ್ತಿದೆ.

https://www.instagram.com/p/CS6bzkqipAT/?utm_medium=copy_link

ಟ್ವಿಟರ್ ಅಕೌಂಟ್ ಕಳೆದುಕೊಂಡಿರೋ ಕಂಗನಾ ರನಾವುತ್ ಸಿನಿಮಾ ರಿಲೀಸ್ ವಿಚಾರವನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಅಪ್ರತಿಮ ವ್ಯಕ್ತಿಯ ಕತೆಯನ್ನು ಬಿಗ್ ಸ್ಕ್ರೀನ್ ನಲ್ಲಿ ಮಾತ್ರ ನೋಡಲು ಅರ್ಹವಾಗಿದೆ. ಸಪ್ಟೆಂಬರ್ 10 ಕ್ಕೆ ತಲೈವಿ ನಿಮ್ಮ ಹತ್ತಿರದ ಚಿತ್ರಮಂದಿರಕ್ಕೆ ಬರಲಿದೆ ಎಂದಿದ್ದಾರೆ.

ಕೆ.ವಿ.ವಿಜಯೇಂದ್ರ ಪ್ರಸಾದ್ ತಲೈವಿಗೆ ಚಿತ್ರಕತೆ ಬರೆದಿದ್ದು, ಎಲ್.ವಿಜಯ್ ಸಾರಥ್ಯದಲ್ಲಿ ಸಿನಿಮಾ ಮೂಡಿಬಂದಿದೆ. ಸದ್ಯ ಧಾಕಡ್ ಸಿನಿಮಾ ಪೊರೈಸಿದ ಕಂಗನಾ ತೇಜಸ್ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

Comments are closed.