Bus Falls In Gorge: ಪ್ರಪಾತಕ್ಕೆ ಬಿದ್ದ ಬಸ್, 25ಕ್ಕೂ ಹೆಚ್ಚು ಬಲಿ, ಮದುವೆ ಖುಷಿಯಲ್ಲಿದ್ದವರು ಮಸಣಕ್ಕೆ

ಪೌರಿ ಗಡ್ವಾಲ್ : Bus Falls In Gorge ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್  500ಮೀಟರ್ ಗೂ ಹೆಚ್ಚು ಆಳದ ಕಂದಕಕ್ಕೆ ಬಿದ್ದು 25ಕ್ಕೂ ಹೆಚು ಮೃತ ಪಟ್ಟಿದ್ದಾರೆ ಎನ್ನಲಾಗಿದೆ. ಉತ್ತರಾಖಂಡನ ಪೌರಿ ಗಡ್ವಾಲ್ ಜಿಲ್ಲೆಯ ಸಿಮ್ಡಿ ಗ್ರಾಮದ ಬಳಿ ಈ ದುರಂತ ಸಂಭವಿಸಿದೆ.

ಬಸ್ ನಲ್ಲಿ ಸುಮಾರು 40 ರಿಂದ 50 ಜನ ಪ್ರಯಾಣಿಸುತ್ತಿದ್ದರು ಅಂತಾ ಗೊತ್ತಾಗಿದ್ದು, ಎಲ್ಲರೂ ಮದುವೆ ಮುಗಿಸಿಕೊಂಡು ಊರಿಗೆ ವಾಪಸ್ ಆಗುತ್ತಿದ್ದರು ಅಂತಾ ಮೂಲಗಳು ತಿಳಿಸಿವೆ. ಮಂಗಳವಾರ ರಾತ್ರಿ ಈ ದುರ್ಘಟನೆ ಸಂಭವಿಸಿದ್ದು, ಕತ್ತಲಿನ ಕಾರಣದಿಂದಾಗಿ ಕಂದಕದಲ್ಲಿ ಸಿಲುಕಿರೋ ರಕ್ಷಣೆಗೆ  ಸಮಸ್ಯೆ ಆಗಿದೆ. ಘಟನೆಯಲ್ಲಿ 25 ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಅಂತಾ ತಿಳಿದು ಬಂದಿದ್ದು, ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್ ಬಿದ್ದ ಜಾಗದಿಂದ ಇದುವರೆಗೂ 15 ಜನರನ್ನ ರಕ್ಷಿಸಿದ್ದು, ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದ್ರೆ ಆಸ್ಪತ್ರೆಯ ಮೂಲಗಳು ಇನ್ನೂ ಮೃತಪಟ್ಟವರ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನ ನೀಡಿಲ್ಲ.

ಸ್ಥಳಕ್ಕೆ ಧಾವಿಸಿದ ಎನ್​ಡಿಆರ್​ಎಫ್​ ತಂಡ ಸ್ಥಳೀಯರ ನೆರವಿನಿಂದ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು. ಈವರೆಗೆ 9 ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಡಿಜಿಪಿ ಅಶೋಕ್ ಕುಮಾರ್ ಮಾಹಿತಿ ನೀಡಿದ್ದಾರೆ. ಈ ಪೈಕಿ ಆರು ಮಂದಿಯ ಆರೋಗ್ಯ ಸ್ಥಿತಿ ಗಂಭೀರ ವಾಗಿದ್ದಾರೆ ಎಂದು ತಿಳಿಸಿದ್ದಾರೆ. ಇದುವರೆಗೂ 10 ಶವಗಳನ್ನು ಪತ್ತೆ ಮಾಡಲಾಗಿದ್ದು, 6 ಶವಗಳನ್ನು ಮಾತ್ರವೇ ಮೇಲಕ್ಕೆ ತರಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

‘ಅಪಘಾತದ ಸ್ಥಳಕ್ಕೆ ಅಗತ್ಯವಿರುವ ಪರಿಕರಗಳನ್ನು ರವಾನಿಸಲು, ಕೊಂಡೊಯ್ಯಲು ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ. ಅಕ್ಕಪಕ್ಕದ ಹಳ್ಳಿಗಳ ಜನರೂ ಅಧಿಕಾರಿಗಳಿಗೆ ಸಹಕರಿಸುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದರು. ಪರಿಹಾರ ಕಾರ್ಯಾಚರಣೆಯ ಬಗ್ಗೆ ಮಾಹಿತಿ ಪಡೆಯಲು ವಿಪತ್ತು ನಿರ್ವಹಣಾ ಪ್ರಾಧಿಕಾರ ಕಚೇರಿಗೂ ಮುಖ್ಯಮಂತ್ರಿ ಭೇಟಿ ನೀಡಿದ್ದರು.

ಅಪಘಾತದ ಸ್ಥಳದಲ್ಲಿ ಬೆಳಕಿನ ವ್ಯವಸ್ಥೆಯಿಲ್ಲ. ಹೀಗಾಗಿ ಅಕ್ಕಪಕ್ಕದ ಗ್ರಾಮಸ್ಥರು ಮೊಬೈಲ್ ಫೋನ್​ಗಳ ಬ್ಯಾಟರಿ ಬೆಳಕಿನಲ್ಲಿ ಬಸ್​ನಲ್ಲಿ ಸಿಲುಕಿದವರನ್ನು ಕಾಪಾಡಲು ಯತ್ನಿಸುತ್ತಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರ ಹೇಳಿಕೆಯನ್ನು ಎಎನ್​ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ : CT Ravi : ‘ಪರೇಶ್​ ಮೇಸ್ತಾ ಕುಟುಂಬಸ್ಥರ ಪರವಾಗಿ ನಾವು ಎಂದಿಗೂ ನಿಲ್ಲುತ್ತೇವೆ’ :ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅಭಯ

ಇದನ್ನೂ ಓದಿ : Kodi mutt sree:ರಾಜ್ಯಕ್ಕೆ ಕಾದಿದೆ ದೊಡ್ಡ ಅವಘಡ,ಕುಡಿಯೋಕೆ ನೀರು ಸಿಗದ ಪರಿಸ್ಥಿತಿ ಬರುತ್ತೆ : ಕೋಡಿಮಠದ ಸ್ವಾಮೀಜಿ ಭವಿಷ್ಯ

ಇದನ್ನೂ ಓದಿ : KS Eshwarappa :‘ಆರ್​ಎಸ್​ಎಸ್​​ಗೆ ಬುದ್ಧಿ ಕಲಿಸಲು ಯಾರಪ್ಪನಿಂದಲೂ ಸಾಧ್ಯವಿಲ್ಲ’ : ಕೆ.ಎಸ್​ ಈಶ್ವರಪ್ಪ ಗುಡುಗು

Bus Falls In Gorge A bus carrying 45 to 50 people fell into a 500-meter ditch in Uttarakhand

Comments are closed.