Congress in Shock: ಸಂಸದೀಯ ಸಮಿತಿಯ ಪ್ರಮುಖ ಸ್ಥಾನ ಕಳೆದುಕೊಂಡ ಕಾಂಗ್ರೆಸ್

ನವದೆಹಲಿ : Congress in Shock ಪ್ರತಿ ವರ್ಷ ಪುನಾರಚನೆಯಾಗೋ ಸಂಸದೀಯ ಸಮಿತಿಯಲ್ಲಿ ಕಾಂಗ್ರೆಸ್ ಪ್ರಮುಖ ಸ್ಥಾನಗಳನ್ನ ಕಳೆದುಕೊಂಡಿದೆ. ಸುಮಾರು ಮೂರು ದಶಕಗಳಲ್ಲೇ ಕಾಂಗ್ರೆಸ್ ಈ ರೀತಿಯಾಗಿ ಸಂಸದೀಯ ಸಮಿತಿಯಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಸ್ಥಾನಗಳನ್ನ ಕಳೆದುಕೊಂಡಿದೆ.

ಕೇಂದ್ರ ಸರ್ಕಾರ ಮಂಗಳವಾರ ಸಂಸದೀಯ ಸಮಿತಿಯನ್ನ ಪುನಾರಚನೆ ಮಾಡಿದ್ದು. ಪ್ರಮುಖ ನಾಲ್ಕು ಸಂಸದೀಯ ಸಮಿತಿಯ ಅಧ್ಯಕ್ಷ ಸ್ಥಾನವನ್ನ ವಿಪಕ್ಷ ಕಾಂಗ್ರೆಸ್ ಗೆ ನೀಡಲಾಗಿಲ್ಲ. ಮಾಹಿತಿ ತಂತ್ರಜ್ಞಾನ ಸಮಿತಿಯ ಮುಖ್ಯಸ್ಥರಾಗಿದ್ದ ಕಾಂಗ್ರೆಸ್ ಸಂಸದ ಶಶಿ ತರೂರ್ ಬದಲಿಗೆ ಶಿವಸೇನೆಯ ಶಿಂಧೆ ಬಣದ ಸಂಸದರನ್ನು ನೇಮಿಸಲಾಗಿದೆ. ಕಾಂಗ್ರೆಸ್ ಜೊತೆಗಿದ್ದ ಗೃಹ ವ್ಯವಹಾರಗಳ ಸಮಿತಿಯೂ ಕೈ ತಪ್ಪಿದೆ. ಆದಾಗ್ಯೂ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಅವರನ್ನು ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಮಿತಿಯ ಅಧ್ಯಕ್ಷರನ್ನಾಗಿ ಮುಂದುವರಿಸಲಾಗಿದೆ. ಇದರೊಂದಿಗೆ, ಆರು ಪ್ರಮುಖ ಸಂಸದೀಯ ಸಮಿತಿಗಳ ಅಧ್ಯಕ್ಷ ಸ್ಥಾನ ಅಂದ್ರೆ ಗೃಹ, ಐಟಿ, ರಕ್ಷಣೆ, ವಿದೇಶಾಂಗ ವ್ಯವಹಾರಗಳು, ಹಣಕಾಸು ಮತ್ತು ಆರೋಗ್ಯ ಎಲ್ಲವೂ ಈಗ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಬಳಿ ಇವೆ.

ಕಾಂಗ್ರೆಸ್ ಸಂಸದ ಅಭಿಷೇಕ್ ಮನು ಸಿಂಘ್ವಿ ಬದಲಿಗೆ ಬಿಜೆಪಿ ಸಂಸದ ಮತ್ತು ನಿವೃತ್ತ ಐಪಿಎಸ್ ಅಧಿಕಾರಿ ಬ್ರಿಜ್ ಲಾಲ್ ಅವರನ್ನು ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರುವ ಶಶಿ ತರೂರ್ ಅವರ ಸ್ಥಾನಕ್ಕೆ ಶಿಂಧೆ ಬಣದ ಶಿವಸೇನೆ ಸಂಸದ ಪ್ರತಾಪ್ರಾವ್ ಜಾಧವ್ ಅವರನ್ನು ಆಯ್ಕೆ ಮಾಡಲಾಗಿದೆ.

ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಕಳೆದ ತಿಂಗಳು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದು, ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರಿಂದ ಸಭಾಪತಿ ಪಾತ್ರದ ಹಂಚಿಕೆಯನ್ನು ಹಿಂತೆಗೆದುಕೊಳ್ಳುವ ನಿರ್ಧಾರ ಮಾಡಿರೋದಕ್ಕೆ ನಿರಾಶೆಗೊಂಡಿದ್ದೇನೆ ಎಂದು ತಿಳಿಸಿದ್ರು.

ಮೂಲಗಳ ಪ್ರಕಾರ, ಗೃಹ ವ್ಯವಹಾರಗಳ ಸಂಸದೀಯ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್‌ನಿಂದ “ತೆಗೆದುಕೊಳ್ಳುವ” ಸರ್ಕಾರದ ಕ್ರಮವನ್ನು ವಿರೋಧಿಸಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸಭಾನಾಯಕ ಪಿಯೂಷ್ ಗೋಯಲ್ ಅವರಿಗೆ ಪತ್ರ ಬರೆದಿದ್ದಾರೆ. 2019 ರ ಸಾರ್ವತ್ರಿಕ ಚುನಾವಣೆಯ ನಂತರ ವಿರೋಧ ಪಕ್ಷವು ಬಾಹ್ಯ ವ್ಯವಹಾರಗಳು ಮತ್ತು ಹಣಕಾಸು ಕುರಿತು ಹೌಸ್ ಪ್ಯಾನೆಲ್‌ಗಳ ಅಧ್ಯಕ್ಷ ಸ್ಥಾನವನ್ನು ಕಳೆದುಕೊಂಡಿತ್ತು. ಆಹಾರ ಮತ್ತು ಗ್ರಾಹಕರ ವ್ಯವಹಾರಗಳ ಸಂಸದೀಯ ಸಮಿತಿಯ ಅಧ್ಯಕ್ಷರಾಗಿದ್ದ ತೃಣಮೂಲ ಕಾಂಗ್ರೆಸ್‌ಗೆ ಪುನರ್ ರಚನೆಯ ವೇಳೆ ಯಾವುದೇ ಸಂಸದೀಯ ಸಮಿತಿಯ ಅಧ್ಯಕ್ಷ ಸ್ಥಾನವನ್ನು ನೀಡಲಾಗಿಲ್ಲ.

TMC ಸಂಸತ್ತಿನಲ್ಲಿ ಮೂರನೇ ಅತಿದೊಡ್ಡ ಪಕ್ಷವಾಗಿದೆ, ಎರಡನೇ ಅತಿದೊಡ್ಡ ವಿರೋಧ ಪಕ್ಷ ಒಂದೇ ಅಧ್ಯಕ್ಷ ಸ್ಥಾನವನ್ನು ಪಡೆಯುವುದಿಲ್ಲ ಅಂದ್ರೆ, ಅತಿದೊಡ್ಡ ವಿರೋಧ ಪಕ್ಷವು ಸ್ಥಾಯಿ ಸಮಿತಿಗಳ ಎರಡು ನಿರ್ಣಾಯಕ ಅಧ್ಯಕ್ಷ ಸ್ಥಾನಗಳನ್ನು ಕಳೆದುಕೊಳ್ಳುತ್ತದೆ ಎಂದರೆ ಇದು ನವ ಭಾರತದ ಕಟು ವಾಸ್ತವವಾಗಿದೆ ಎಂದು ಟಿಎಂಸಿ ರಾಜ್ಯ ಸಭಾ ಸದಸ್ಯ ಡೆರೆಕ್ ಒಬ್ರಿಯಾನ್ ಟೀಕಿಸಿದ್ದಾರೆ.

ಸಮಾಜವಾದಿ ಪಕ್ಷದ ನಾಯಕ ರಾಮಗೋಪಾಲ್ ಯಾದವ್ ಅವರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಅಲ್ಲದೆ, ಇಲ್ಲಿಯವರೆಗೆ ಟಿಆರ್‌ಎಸ್‌ನಲ್ಲಿದ್ದ ಉದ್ಯಮದ ಸಂಸದೀಯ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಡಿಎಂಕೆಗೆ ನೀಡಲಾಗಿದೆ. ಒಟ್ಟು 24 ಸಂಸದೀಯ ಸ್ಥಾಯಿ ಸಮಿತಿಗಳಿದ್ದು, ಅವುಗಳಲ್ಲಿ 16 ಲೋಕಸಭಾ ಸದಸ್ಯರು ಮತ್ತು ಎಂಟು ರಾಜ್ಯಸಭಾ ಸದಸ್ಯರು ಮುಖ್ಯಸ್ಥರಾಗಿರುತ್ತಾರೆ. ಪ್ರತಿವರ್ಷ  ಈ ಸ್ಥಾಯಿ ಸಮಿತಿಗಳನ್ನ ಪುನಾರಚನೆ ಮಾಡಲಾಗುತ್ತದೆ.

ಇದನ್ನೂ ಓದಿ: Bus Falls In Gorge: ಪ್ರಪಾತಕ್ಕೆ ಬಿದ್ದ ಬಸ್.. 25ಕ್ಕೂ ಹೆಚ್ಚು ಬಲಿ.. ಮದುವೆ ಖುಷಿಯಲ್ಲಿದ್ದವರು ಮಸಣಕ್ಕೆ

Congress in Shock No seat for Opposition at helm of key Parliamentary committees

Comments are closed.