Bipin Rawat’s Helicopter Crash :ತಮಿಳುನಾಡಿನ ಕುನೂರಿನಲ್ಲಿ ಪತನಗೊಂಡ ಸೇನಾ ಹೆಲಿಕಾಪ್ಟರ್​ನ ವಿಡಿಯೋ ವೈರಲ್​..!

ಸಿಡಿಎಸ್​ ಜನರಲ್​ ಬಿಪಿನ್​ ರಾವತ್​(Bipin Rawat’s Helicopter Crash) ಹಾಗೂ ಇತರೆ 13 ಮಂದಿಯನ್ನು ಹೊತ್ತು ಸಾಗುತ್ತಿದ್ದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್​ ತಮಿಳುನಾಡಿನ ಕುನೂರ್​ನಲ್ಲಿ ಪತನಗೊಳ್ಳುತ್ತಿರುವ 19 ಸೆಕೆಂಡ್​ಗಳ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ.


ಈ ವಿಡಿಯೋದಲ್ಲಿ ರೈಲ್ವೆ ಹಳಿ ಬಳಿ ಇರುವ ಜನರ ಗುಂಪು ಕೆಳಗೆ ಬರುತ್ತಿದ್ದ ಹೆಲಿಕಾಪ್ಟರ್​ನ್ನು ಕುತೂಹಲದಿಂದ ವೀಕ್ಷಿಸುತ್ತಿರೋದನ್ನು ಕಾಣಬಹುದಾಗಿದೆ. ಜನರು ನೋಡ ನೋಡುತ್ತಿದ್ದಂತೆಯೇ ಎಂಐ 17 ಚಾಪರ್​​​ ದಟ್ಟವಾದ ಮಂಜಿನ ಒಳಗೆ ಕಣ್ಮರೆಯಾಗಿದೆ. ಚಾಪರ್​ನ ಎಂಜಿನ್​ ಶಬ್ಧ ಕೂಡ ಮೌನವಾಗಿದೆ. ಬಹುಶಃ ಈ ಹೊತ್ತಿಗೆ ಚಾಪರ್​​​ನ ಪತನವಾಗಿರುವ ಸಾಧ್ಯತೆ ಇರಬಹುದು.


ವಿಡಿಯೋದಲ್ಲಿರುವ ಜನರು ಏನಾಯ್ತು..? ಹೆಲಿಕಾಪ್ಟರ್​ ಪತನಗೊಂಡಿತೇ..? ಎಂದು ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುತ್ತಿರೋದನ್ನು ಗಮನಿಸಬಹುದಾಗಿದೆ.ಆದರೆ ಈ ವಿಡಿಯೋ ನಿಜವಾಗಿಯೂ ನಿನ್ನೆ ನಡೆದ ಘಟನೆಗೆ ಸಂಬಂಧಿಸಿದ್ದೇ ಎಂಬುದರ ಬಗ್ಗೆ ಇನ್ನೂ ಭಾರತೀಯ ವಾಯುಪಡೆ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ.


63 ವರ್ಷದ ಸಿಡಿಎಸ್​ ಜನರಲ್​ ಬಿಪಿನ್​ ರಾವತ್​​ ತಮ್ಮ ಪತ್ನಿ ಹಾಗೂ ಭದ್ರತಾ ಸಿಬ್ಬಂದಿ ಜೊತೆಯಲ್ಲಿ ವೆಲ್ಲಿಂಗ್ಟನ್​ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ವೇಳೆಯಲ್ಲಿ ಕುನೂರ್​ನ ನೀಲಗಿರಿ ಅರಣ್ಯ ಪ್ರದೇಶದ ಬಳಿ ಈ ಅವಘಡ ಸಂಭವಿಸಿದೆ. ಮರಕ್ಕೆ ಡಿಕ್ಕಿ ಹೊಡೆದ ಕಾಪ್ಟರ್​ ಬಳಿಕ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಿಪಿನ್​ ರಾವತ್​​ರನ್ನು ವೆಲ್ಲಿಂಗ್ಟನ್​ ಮಿಲಿಟರಿ ಆಸ್ಪತ್ರೆಗೆ ದಾಖಲು ಮಾಡಲಾಯ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ರಾವತ್​ ಹುತಾತ್ಮರಾಗಿದ್ದಾರೆ. ಈ ದುರ್ಘಟನೆಯಲ್ಲಿ ಬಿಪಿನ್​ ರಾವತ್​ ಪತ್ನಿ ಮಧುಲಿಕಾ ರಾವತ್​ ಸೇರಿದಂತೆ 13 ಮಂದಿ ಹುತಾತ್ಮರಾಗಿದ್ದಾರೆ. ಗ್ರೂಪ್​ ಕ್ಯಾಪ್ಟನ್​​​ ವರುಣ್​ ಸಿಂಗ್​ ಬೆಂಗಳೂರಿನ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

Video Captures CDS Gen Bipin Rawat’s Helicopter Moments Before The Crash | Watch

ಇದನ್ನು ಓದಿ : Mettupalayam : ಸೇನಾ ಕಾಪ್ಟರ್​ ದುರಂತ: ಅಪಘಾತಕ್ಕೀಡಾದ ಹುತಾತ್ಮ ಯೋಧರ ಪಾರ್ಥೀವ ಶರೀರ ಸಾಗಿಸುತ್ತಿದ್ದ ಶವವಾಹನ

ಇದನ್ನೂ ಓದಿ : Varun Singh : ವೆಲ್ಲಿಂಗ್ಟನ್​ನಿಂದ ಬೆಂಗಳೂರಿನ ಆಸ್ಪತ್ರೆಗೆ ವರುಣ್​ ಸಿಂಗ್​ ಶಿಫ್ಟ್​: ತಂದೆಯಿಂದ ಅಧಿಕೃತ ಮಾಹಿತಿ

Comments are closed.