illegal loan apps :ಅಕ್ರಮ ಲೋನ್ ಆ್ಯಪ್ ಗಳಿಗೆ ಕೇಂದ್ರ ಸರ್ಕಾರದಿಂದ ಅಂಕುಶ

ದೆಹಲಿ : illegal loan apps : ದೇಶಾದ್ಯಂತ ಆನ್ ಲೈನ್ ಲೋನ್ ಆ್ಯಪ್ ನಿಂದ ಸಾಕಷ್ಟು ಮಂದಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೆಲ ಮಂದಿ ಲೋನ್ ಆ್ಯಪ್ ನವರ ಕಿರುಕುಳದಿಂದ ಆತ್ಮಹತ್ಯೆಯಂತಹ ದಾರಿ ಹಿಡಿದು ಪ್ರಾಣವನ್ನೆ ಕಳೆದುಕೊಂಡಿದ್ದಾರೆ. ಇದೀಗ ಕೊನೆಗೂ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಲೋನ್ ಆ್ಯಪ್ ಗಳಿಗೆ ಅಂಕುಶ ಹಾಕುವ ನಿರ್ಧಾರವನ್ನು ಮಾಡಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತ್ರತ್ವದಲ್ಲಿ ನಡೆದ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ಲೋನ್ ಆ್ಯಪ್ ಗಳ ವೈಟ್ ಲೀಸ್ಟ್ ರೆಡಿ ಮಾಡುವಂತೆ ವಿತ್ತ ಸಚಿವರು ರಿಸರ್ವ್ ಬ್ಯಾಂಕ್ ಗೆ ಸೂಚಿಸಿದ್ದಾರೆ. ಹೀಗಾಗಿ ಇನ್ನು ಮುಂದೆ ಆ ಪಟ್ಟಿಯಲ್ಲಿರುವ ಕಾನೂನುಬದ್ಧ ಆ್ಯಪ್ ಗಳಷ್ಟೇ ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಆ್ಯಪ್ ಸ್ಟೋರ್ ನಲ್ಲಿ ಉಳಿಯಲಿದೆ. ಈ ರೀತಿ ಮಾಡುವುದರಿಂದ ಅಕ್ರಮ ಮತ್ತು ಕಾನೂನುಬದ್ಧ ಆ್ಯಪ್ ಗಳನ್ನು ಗುರುತಿಸಲು ಮತ್ತು ಅವುಗಳಿಂದ ಎಚ್ಚರದಿಂದಿರಲೂ ಸಾಧ್ಯವಾಗುತ್ತದೆ.

ಸುಲಭವಾಗಿ ಸಾಲ ನೀಡಿ ಹೆಚ್ಚಿನ ಬಡ್ಡಿ ಹೊರೆಯನ್ನು ವಿಧಿಸಿ ಗ್ರಾಹಕರನ್ನು ಪೀಡಿಸುತ್ತಿದ್ದ ಈ ಅಕ್ರಮ ಲೋನ್ ಆ್ಯಪ್ ಗಳನ್ನು ತೆರವುಗೊಳಿಸುವ ಹೊಣೆಗಾರಿಕೆಯನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿರಿ ತಂತ್ರಜ್ಞಾನ ಸಚಿವಾಲಯಕ್ಕೆ ಒಪ್ಪಿಸಲಾಗಿದೆ. ಆನ್ ಲೈನ್ ನಲ್ಲಿ ವಂಚನೆ ಮಾಡಲು ಬಳಕೆಯಾಗುವ ಇಂಟರ್ ನೆಟ್ ಪ್ರೋಟೋಕಾಲ್ ವಿಳಾಸ ಮತ್ತು ಪೋನ್ ನಂಬರ್ ಸಂಗ್ರಹಿಸಿ ಅವುಗಳನ್ನು ಬ್ಲ್ಯಾಕ್ ಲೀಸ್ಟ್ ಗೆ ಸೇರಿಸಲು‌ ಸರ್ಕಾರ ಮುಂದಾಗಿದೆ.

ಈ ಅಕ್ರಮ ಲೋನ್ ಆ್ಯಪ್ ಗಳು ಸಾಲ ವಸೂಲಿಗೆ ಬ್ಯ್ಯಾಕ್ ಮೇಲಿಂಗ್, ಕ್ರಿಮಿನಲ್ ಬೆದರಿಕೆ ಇತ್ಯಾದಿಗಳನ್ನು ಮಾಡುತ್ತಿದೆ‌. ಕೆಲ ಮಂದಿ ಮರ್ಯಾದೆಗೆ ಅಂಜಿ‌ ಲಕ್ಷ ಹಣವನ್ನು ಕಳೆದುಕೊಂಡಿದ್ದಾರೆ.‌ಕೊನೆಗೆ ನೀಡಲು ಹಣವಿಲ್ಲದೇ ಹೋದಾಗ ಪ್ರಾಣ ಕಳೆದುಕೊಳ್ಳುವ ನಿರ್ಧಾರವನ್ನು ಮಾಡಿದ್ದಾರೆ. ಹೀಗಾಗಿ ಅಕ್ರಮ ಲೋನ್ ಆ್ಯಪ್ ಗಳನ್ನು ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಬಾರದು. ಸಾಲ ಪಡೆಯುವ ಮೊದಲು ಬಡ್ಡಿ ಎಷ್ಟು, ಯಾವ ಯಾವ ಶುಲ್ಕಗಳಿವೆ ಎಂಬ ವಿವರಗಳನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ಒಂದು ವೇಳೆ ಲೋನ್ ಆ್ಯಪ್ ಗಳಿಂದ ಬ್ಲ್ಯಾಕ್ ಮೇಲ್ ಶುರುವಾದರೆ ಪೊಲೀಸರಿಗೆ ದೂರು ನೀಡಬೇಕು. ಒಟ್ಟಿನಲ್ಲಿ ಇನ್ಮುಂದೆಯಾದರೂ ಈ ಅಕ್ರಮ ಲೋನ್ ಆ್ಯಪ್ ಗಳಿಗೆ ಕಡಿವಾಣ ಬೀಳುತ್ತಾ ಎಂದು ಕಾದುನೋಡಬೇಕಾಗಿದೆ.

ಇದನ್ನು ಓದಿ : Virat Kohli high-level mask : ಹೈ-ಲೆವೆಲ್ ಸ್ಪೆಷಲ್ ಮಾಸ್ಕ್ ಧರಿಸಿ ಕೊಹ್ಲಿ ಟ್ರೈನಿಂಗ್, ಏನಿದರ ವಿಶೇಷತೆ ಗೊತ್ತಾ ?

ಇದನ್ನೂ ಓದಿ : Comeback Ajinkya Rahane: “ಆಯ್ಕೆಗಾರರೇ ಈಗೆನ್ನುತ್ತೀರಿ..” ನನ್ನನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲು ಈ ದ್ವಿಶತಕ ಸಾಕಲ್ಲವೇ?

Central government crackdown on illegal loan apps

Comments are closed.