SIIMA 2022 : ಪುನೀತ್‌ ರಾಜ್ ಕುಮಾರ್‌ ಗೆ ಸೈಮಾ ಅತ್ಯುತ್ತಮ ನಾಯಕ ನಟ ಪ್ರಶಸ್ತಿ

ಬೆಂಗಳೂರು : (SIIMA 2022) ದೊಡ್ಮನೆ ಹುಡುಗ ಪುನೀತ್‌ ರಾಜ್‌ ಕುಮಾರ್‌ (Puneeth Rajkumar ) ಬಾರದ ಲೋಕಕ್ಕೆ ಪಯಣಿಸಿ ವರ್ಷ ಕಳೆಯುತ್ತಾ ಬಂದಿದೆ. ಆದ್ರೆ ಈ ಬಾರಿಯ ಪುನೀತ್‌ ರಾಜ್‌ ಕುಮಾರ್‌ ಅವರಿಗೆ ಸೈಮಾ ಅತ್ಯುತ್ತಮ ನಾಯಕನಟ ಪ್ರಶಸ್ತಿ (SIIMA Best Actor Award) ದೊರೆತಿದೆ. ಅಲ್ಲದೇ ಕಾರ್ಯಕ್ರಮದಲ್ಲಿ ಪುನೀತ್ ರಾಜ್‌ಕುಮಾರ್ ಅವರಿಗೆ ವಿಶೇಷ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ. ಸೈಮಾ 2022 ಪ್ರಶಸ್ತಿ ಪ್ರಧಾನ ಅದ್ಧೂರಿ ಕಾರ್ಯಕ್ರಮವು ಬೆಂಗಳೂರಿನ ಅರಮನೆ ಮೈದಾನದಲ್ಲಿ ನೆಡೆಯುತ್ತಿದೆ. ಇದು ಎರಡು ದಿನದ ಅದ್ಧೂರಿ ಕಾರ್ಯಕ್ರಮವಾಗಿದೆ. ಸೈಮಾ 2022ರ ಕಾರ್ಯಕ್ರಮವು ಈಗಾಗಲೇ ಆರಂಭವಾಗಿದ್ದು, ಯಶ್ ಸೇರಿದಂತೆ ಹಲವು ಗಣ್ಯರು ಅತಿಥಿಗಳಾಗಿ ಆಗಮಿಸುತ್ತಿದ್ದಾರೆ.

ಸೌತ್ ಇಂಡಿಯನ್ ಇಂಟರ್‌ನ್ಯಾಶನಲ್ ಮೂವೀ ಅವಾರ್ಡ್ಸ್’ 2012ರಿಂದ ಆರಂಭವಾಗಿದೆ. ಹೀಗಾಗಿ, SIIMA ಈ ಬಾರಿ 10ನೇ ವರ್ಷದ ಸಂಭ್ರಮವನ್ನು ಆಚರಿಸುತ್ತಿದೆ. ಇದಕ್ಕಾಗಿಯೇ ಈ ವರ್ಷದ SIIMA ಕಾರ್ಯಕ್ರಮವು ಬಹಳ ವಿಶೇಷವಾಗಿದೆ. ಸೈಮಾ ಪ್ರಶಸ್ತಿ ಅಡಿಯಲ್ಲಿ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಚಲನಚಿತ್ರರಂಗದ ಸಾಧಕರಿಗೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಪ್ರತಿ ಭಾಷೆಯಲ್ಲಿ ಒಟ್ಟು 19 ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

ಪ್ರತಿ ಬಾರಿಯೂ SIIMA ಕಾರ್ಯಕ್ರಮವನ್ನು ಅದ್ದೂರಿಯಾಗಿ ಕಾರ್ಯಗತಗೊಳಿಸಲಾಗುತ್ತದೆ. ಈ ಬಾರಿಯೂ SIIMA ಅದ್ಧೂರಿಯಾಗಿ ನಡೆಸಲು ನಿರ್ಧರಿಸಲಾಗಿದೆ. ಈ ಬಾರಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾರ್ಯಕ್ರಮ ನಡೆಯುತ್ತಿರುವುದು ಕನ್ನಡಿಗರ ಪಾಲಿಗೆ ವಿಶೇಷವಾಗಿದೆ.

ಸೈಮಾದಲ್ಲಿ 2021ರಲ್ಲಿ ತೆರೆಕಂಡ ಸಿನಿಮಾಗಳಿಗೆ ಈ ವರ್ಷ ಪ್ರಶಸ್ತಿ ಪ್ರಧಾನ ಮಾಡುತ್ತಾರೆ. ಈ ಸಲ ಕನ್ನಡ ಸಿನಿರಂಗದಲ್ಲಿ 2021ರಲ್ಲಿ ತೆರೆಕಂಡ ತರುಣ್‌ ನಿರ್ದೇಶನದ ರಾರ್ಬಟ್ ಚಿತ್ರದ ಸುಧಾಕರ್‌ರವರ ಸಿನಿಮಾಟೋಗ್ರಫಿಗೆ “ಬೆಸ್ಟ್‌ ಸಿನಿಮಾಟೋಗ್ರಫಿ” ಪ್ರಶಸ್ತಿ ಪಡೆದುಕೊಂಡಿದ್ದಾರೆ. ವಾಸುಕಿ ವೈಭವ್‌ರವರಿಗೆ “ನಿನ್ನ ಸನಿಹಕೆ” ಸಿನಿಮಾದ “ನೀ ಪರಿಚಯ…” ಹಾಡಿಗೆ “ಅತ್ಯುತ್ತಮ ಗೀತೆ ರಚನಕಾರ” ಎನ್ನುವ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ‌

ಸೈಮಾ 2022ರಲ್ಲಿ ಕನ್ನಡ ಸಿನಿಮಾರಂಗಕ್ಕೆ ಈಕೆಳಗಿನಂತೆ ಪ್ರಶಸ್ತಿಗಳು ಲಭಿಸಿವೆ

ಅತ್ಯುತ್ತಮ ನಟ : ಪುನೀತ್‌ ರಾಜ್‌ಕುಮಾರ್‌ (ಯುವರತ್ನ)
ಅತ್ಯುತ್ತಮ ನಟಿ : ಆಶಿಕಾ ರಂಗನಾಥ್‌ (ಮದಗಜ)
ಅತ್ಯುತ್ತಮ ನಟಿ ಕ್ರಿಟಿಕ್ಸ್‌ : ಅಮೃತಾ ಅಯ್ಯಂಗರ್‌ (ಬಡವ ರಾಸ್ಕಲ್)‌
ಅತ್ಯುತ್ತಮ ಹಾಸ್ಯನಟ : ಚಿಕ್ಕಣ್ಣ (ಪೊಗರು)
ಅತ್ಯುತ್ತಮ ನಿರ್ದೇಶನ : ತರುಣ್‌ ಸುಧೀರ್‌ (ರಾಬರ್ಟ್)‌
ಅತ್ಯುತ್ತಮ ಪೋಷಕನಟ : ಪ್ರಮೋದ್‌ (ರತ್ನನ್‌ ಪ್ರಪಂಚ)
ಅತ್ಯುತ್ತಮ ಪೋಷಕನಟಿ : ಆರೋಹಿ ನಾರಾಯಣ್‌ (ದೃಶ್ಯ 2)
ಅತ್ಯುತ್ತಮ ಹಿನ್ನಲೆ ಗಾಯಕಿ : ಚೈತ್ರಾ ಆಚಾರ್‌ (“ಗರುಡ ಗಮನ ವೃಷಭ ವಾಹನ” ಚಿತ್ರದ “ಸೋಜುಗಾದ ಸೂಜುಮಲ್ಲಿಗೆ ಹಾಡು”)
ಅತ್ಯುತ್ತಮ ಸಂಗೀತ ನಿರ್ದೇಶಕ : ಅರ್ಜುನ್‌ ಜನ್ಯ (ರಾಬರ್ಟ್)

ಇದನ್ನೂ ಓದಿ : ಹೊಯ್ಸಳ ಕ್ಕೆ ಬಂದ್ರು ಮೇಘನಾ ಸರ್ಜಾ: ಡಾಲಿ ಅಡ್ಡಾದಿಂದ ಹೊರಬಿತ್ತು ಅಪ್ಡೇಟ್

ಇದನ್ನೂ ಓದಿ : Uppalapathy Venkata Krishnamraju:ಟಾಲಿವುಡ್‌ ರೆಬಲ್‌ ಸ್ಟಾರ್‌ ಉಪ್ಪಲಪತ್ತಿ ವೆಂಕಟ ಕೃಷ್ಣಂರಾಜು ನಿಧನ

SIIMA 2022: Puneeth Rajkumar wins SIIMA Best Actor Award

Comments are closed.