Nikhil Kumaraswamy :2023 ನಮ್ಮ ಪಾಲಿಗೆ ಕೊನೆ ಚುನಾವಣೆ : ನಿಖಿಲ್​ ಕುಮಾರಸ್ವಾಮಿ ಹೊಸ ಬಾಂಬ್​​

ತುಮಕೂರು : Nikhil Kumaraswamy :2023ನೇ ಚುನಾವಣೆ ನಮ್ಮ ಪಾಲಿಗೆ ಒಂದು ರೀತಿ ಕೊನೆ ಚುನಾವಣೆ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಹೋಬಳಿ ಅಂಚೆಪಾಳ್ಯದಲ್ಲಿ ತಾಲೂಕು ಜೆಡಿಎಸ್ ಕಾರ್ಯಕರ್ತರ ಸಭೆಯನ್ನ ಉದ್ದೇಶಿಸಿ ಮಾತನಾಡುವಾಗ ನಿಖಿಲ್ ಕುಮಾರಸ್ವಾಮಿ ಈ ಹೇಳಿಕೆ ನೀಡಿದ್ದಾರೆ. ಇದೇ ಸಂಧರ್ಭ ಕುಮಾರಸ್ವಾಮಿ ಅವರನ್ನ ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡ್ಬೇಕು ಎಂದು ಕಾರ್ಯಕರ್ತರಲ್ಲಿ ಕೇಳಿಕೊಂಡಿದ್ದಾರೆ.

ಹೆಚ್ ಡಿ ದೇವೆಗೌಡರಿಗೆ 89 ವರ್ಷ ವಯಸ್ಸಾಗಿದೆ. ಕಳೆದ ಎರಡುವರೆ ತಿಂಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿಲ್ಲ. ಹಲವು ಕಾರ್ಯಕರ್ತರಲ್ಲಿ ಒಂದು ರೀತಿಯ ಗೊಂದಲ ಸೃಷ್ಟಿಯಾಗಿತ್ತು. ಆದ್ರೆ ಎರಡು ತಿಂಗಳ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ದೇವೆಗೌಡರು ನಮ್ಮ‌ಜೊತೆ ನೂರಾರು ವರ್ಷಗಳ‌ ಕಾಲ ಬದುಕ್ತಾರೆ. ಆದರೆ 2023 ನೇ ಚುನಾವಣೆ ನಮ್ಮ ಪಾಲಿಗೆ ಒಂದು ರೀತಿ ಕೊನೆಯ ಚುನಾವಣೆ. ಜೆಡಿಎಸ್ ಒಂದು ಹೊಸ ಅಧ್ಯಾಯ ಪ್ರಾರಂಭವಾಗಬೇಕು‌ ಎಂದು ನಿಖಿಲ್ ಕುಮಾರಸ್ವಾಮಿ ಮಾರ್ಮಿಕವಾಗಿ ನುಡಿದಿದ್ದಾರೆ.

ಎಚ್.ಡಿ ಕುಮಾರಸ್ವಾಮಿಯವರಿಗೆ ಹೃದಯದ ತೊಂದರೆಯಿದ್ದು 2017 ರಲ್ಲಿ ಹೃದಯಕ್ಕೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಯು ನಡೆದಿತ್ತು. ಈ ಬಗ್ಗೆಯು ಇದೇ ಸಂದರ್ಭ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ನಮ್ಮ ತಂದೆ ಉಳಿದಿದ್ದೆ ಹೆಚ್ಚು, ನಮ್ಮ ತಂದೆಯನ್ನ ಉಳಿಸಿರೋದು ಆ ಭಗವಂತ ಎಂದು ಹೇಳಿದ್ದಾರೆ. ಕುಮಾರಣ್ಣನಿಗೆ ಏನು ಆಗಬಾರದು ಎಂದು ಎಷ್ಟು ಜನ ಹೆಣ್ಮಕ್ಕಳು ಮನೆಗಳಲ್ಲಿ ದೀಪ ಹಚ್ಚಿದ್ದಾರೆ. ನಿಮ್ಮೆಲ್ಲರ ಆಶಿರ್ವಾದದಿಂದ ಅವರು ಆರೋಗ್ಯವಾಗಿದ್ದಾರೆ. ನೂರಾರು ವರ್ಷಗಳ ಕಾಲ ಬದುಕಬೇಕು. ಜನ ಏನು ಅಪೇಕ್ಷೆ ಪಡದೇ ಅವರು ಮುಖ್ಯಮಂತ್ರಿ ಆಗಬೇಕು ಎಂಬ ‌ಆಸೆ ಪಟ್ಟಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.

2023ರ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬರುವುದಿಲ್ಲ ಎಂದು ರಾಜ್ಯದ ಎಲ್ಲಾ ಕಡೆ ಚರ್ಚೆ ಪ್ರಾರಂಭವಾಗಿದೆ ಎಂದು ಹೇಳಿದ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಅನ್ನು ನಂಬರ್ ಒನ್ ಸ್ಥಾನಕ್ಕೆ ಗುರಿ ಇಟ್ಟುಕೊಂಡು ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಕರೆ ನೀಡಿದರು. ಇನ್ನು ಕಳೆದ ವರ್ಷವೇ ಮಾಜಿ‌ ಸಿ.ಎಂ ಎಚ್.ಡಿ‌ ಕುಮಾರಸ್ವಾಮಿ 2023ರ ಚುನಾವಣೆ ನನ್ನ ಕೊನೆಯ ಹೋರಾಟ ಎಂದಿದ್ದರು. ಇದೀಗ ನಿಖಿಲ್ ಕುಮಾರಸ್ವಾಮಿಯು 2023 ನೇ ಚುನಾವಣೆ ನಮ್ಮ ಪಾಲಿಗೆ ಒಂದು ರೀತಿ ಕೊನೆ ಚುನಾವಣೆ ಎಂದು ಹೇಳಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಇದನ್ನು ಓದಿ : ICC T20 World Cup India Squad : ಸೆಪ್ಟೆಂಬರ್ 16ಕ್ಕೆ ಟೀಮ್ ಇಂಡಿಯಾ ಆಯ್ಕೆ, ವರ್ಲ್ಡ್ ಕಪ್‌ನಲ್ಲಿ ಆಡಲಿರುವ 15 ಮಂದಿ ಆಟಗಾರರು ಇವರೇ..!

ಇದನ್ನೂ ಓದಿ : Virat Kohli high-level mask : ಹೈ-ಲೆವೆಲ್ ಸ್ಪೆಷಲ್ ಮಾಸ್ಕ್ ಧರಿಸಿ ಕೊಹ್ಲಿ ಟ್ರೈನಿಂಗ್, ಏನಿದರ ವಿಶೇಷತೆ ಗೊತ್ತಾ ?

2023 election is the last election for us: Nikhil Kumaraswamy

Comments are closed.