Cheetah’s big challenge: ಚೀತಾಗಳೇನೋ ಬಂದ್ವು, ಈಗ ಚಿಂತೆ ಶುರು

ಗ್ವಾಲಿಯರ್,ಮಧ್ಯ ಪ್ರದೇಶ : Cheetah’s big challenge ಕಾಡು ಪ್ರಾಣಿಗಳ ಐತಿಹಾಸಿಕ ಮರುಪರಿಚಯದ ಭಾಗವಾಗಿ ಆಫ್ರಿಕಾದಿಂದ ಎಂಟು ಚೀತಾಗಳಗಳನ್ನ  ನಮಿಬಿಯಾದಿಂದ ತರಲಾಗಿದೆ. 70 ವರ್ಷದ ಹಿಂದೆ ನಶಿಸಿ ಹೋಗಿದ್ದ ಚಿತಾ ಪ್ರಭೇದಗಳನ್ನ ಮತ್ತೆ ದೇಶದಲ್ಲಿ ಬೆಳೆಸುವುದು, ಉಳಿಸುವುದು ಇದರ ಉದ್ದೇಶವಾಗಿದೆ. ಚೀತಾಗಳು ದೇಶಕ್ಕೆ ಬಂದ ಬೆನ್ನಲ್ಲೆ ಹೊಸ ಚಿಂತೆ ಶುರುವಾಗಿದೆ. ವಣ್ಯ ಜೀವಿ ಸಂರಕ್ಷಣಾ ಕಾರ್ಯಕರ್ತ ವಾಲ್ಮಿಕ್ ಥಾಪರ್ ಚೀತಾಗಳಿಗೆ ಹಾಗೂ ಚೀತಾದಿಂದ ಎದುರಾಗೋ ಸವಾಲುಗಳನ್ನ ಪಟ್ಟಿಮಾಡಿದ್ದಾರೆ.

ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರೋ ವಾಲ್ಮಿಕ್ ಥಾಪರ್, ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾಗಳನ್ನ ಬಿಡಲಾಗಿದೆ. ಆದ್ರೆ ಸದ್ಯ ಈ ಉದ್ಯಾನವನ ಸ್ಥಳದ ಕೊರತೆ ಮತ್ತು ಚೀತಾಗಳಿಗೆ ಬೇಟೆಯಾಡಲು ಇಲ್ಲಿ ಸಮಸ್ಯೆಗಳು ಇವೆ ಅಂತಾ ಥಾಪರ್ ಹೇಳಿದ್ದಾರೆ. ಕುನೋ ರಾಷ್ಟ್ರೀಯ ಉದ್ಯಾನವನದ ಪ್ರದೇಶ ಹೆಚ್ಚಾಗಿ ಕತ್ತೆ ಕಿರುಬ ಮತ್ತು ಚಿರತೆಗಳಿಂದ ಕೂಡಿದೆ. ಇವುಗಳು ಚೀತಾಗಳ ಪರಮ ಶತ್ರುಗಳು. ಚೀತಾ ಬೇಟೆಯಾಡೋದ್ರಲ್ಲಿ ಕ್ರೂರಿಯಾದ್ರೂ, ಸ್ವಭಾವತಃ ಬೆಕ್ಕಿನ ರೀತಿ ಸೌಮ್ಯ ಸ್ವಭಾವದಿಂದ ಕೂಡಿದೆ. ಆಫ್ರಿಕಾದಲ್ಲಿ ಕತ್ತೆ ಕಿರುಬಗಳೇ ಚೀತಾಗಳನ್ನ ಬೇಟೆಯಾಡಿದ ಉದಾಹರಣೆಗಳು ದೃಶ್ಯಗಳು ನಮಗೆ ನೋಡಲು ಸಿಗುತ್ವೆ ಹೀಗಾಗಿ ಈಗ ಬಂದಿರೋ ಚೀತಾಗಳಿಗೆ ಇಲ್ಲಿ ಸಮಸ್ಯೆ ಎದುರಾಗಲಿದೆ ಎಂದೂ ಥಾಪರ್ ಹೇಳಿದ್ದಾರೆ.

ಇನ್ನು ಕುನೋ ರಾಷ್ಟ್ರೀಯ ಉದ್ಯಾನವನದ ಸುತ್ತ ಸುಮಾರು 150ಕ್ಕೂ ಹೆಚ್ಚು ಹಳ್ಳಿಗಳು ಇವೆ. ಈ ಹಳ್ಳಿಗಳಲ್ಲಿ ಚೀತಾಗಳನ್ನೇ ಬೇಟೆಯಾಡಬಲ್ಲ ನಾಯಿಗಳು ಇವೆ. ಚೀತಾ ಮನುಷ್ಯನ ಜೊತೆ ಸಂಘರ್ಷಕ್ಕೆ ಇಳಿಯೋ ಕಾಡು ಪ್ರಾಣಿಯಲ್ಲ, ಆದ್ರೆ ಸುತ್ತಲಿನ ಹಳ್ಳಿಗಳಲ್ಲಿ ಹಸು, ಕರುಗಳನ್ನ ಬೇಟೆಯಾಡಬಲ್ಲದು. ಹೀಗಾಗಿ ಇದೂ ಸಹ ದೊಡ್ಡ ಸವಾಲಾಗಲಿದೆ ಎಂದೂ ವಾಲ್ಮೀಕ್ ಥಾಪರ್ ಅಭಿಪ್ರಾಯ ಪಟ್ಟಿದ್ದಾರೆ.

ಚೀತಾಗೆ ಏಕೆ ಸವಾಲು : ಚೀತಾ ಭೂಮಿಯ ಮೇಲಿನ ಅತ್ಯಂತ ವೇಗವಾಗಿ ಓಡೋ ಕಾಡು ಪ್ರಾಣಿಯಾಗಿದೆ. ಗಂಟೆಗೆ 120 ಕೀಲೋ ಮೀಟರ್ ಓಡಬಲ್ಲ ಸಾಮರ್ಥ್ಯ ಹೊಂದಿರೋ ಚೀತಾಗೆ ಇಲ್ಲಿನ ಭೂ ಪ್ರದೇಶದ ವ್ಯತ್ಯಾಸದಿಂದಾಗಿ ಸಮಸ್ಯೆ ಆಗಬಹುದು. ಏಕಂದ್ರೆ, ಸೆರೆಂಗೆಟಿಯಾದಲ್ಲಿರೋ ಅಂದ್ರೆ ತಾಂಜಾನಿಯಾದ ರಾಷ್ಟ್ರೀಯ ಉದ್ಯಾನ ದಂತಹ ಸ್ಥಳಗಳಲ್ಲಿ, ಹುಲ್ಲುಗಾವಲುಗಳು ಹೇರಳವಾಗಿವೆ. ಹೀಗಾಗಿ ಚೀತಾಗಳು ವೇಗವಾಗಿ ಓಡಬಲ್ಲದು, ಆದ್ರೆ, ಕುನೋದಲ್ಲಿ ಹುಲ್ಲುಗಾವಲು ಇಲ್ಲ ಇದು, ಚೀತಾಗಳು ತಮ್ಮ ಮೇಲೆ ದಾಳಿ ಮಾಡೋ ಪ್ರಾಣಿಗಳಿಂದ ತಪ್ಪಿಸಿಕೊಳ್ಳಲು ತೊಂದರೆಯಾಗಬಹುದ ಎಂದಿದ್ದಾರೆ.

ಇನ್ನು ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಕೆಲವೊಮ್ಮೆ ರಣಥಂಬೋರ್ ನಿಂದ ಹುಲಿಗಳು ಸಹ ಬರುತ್ತವೆ. ಹೀಗಾಗಿ ಚೀತಾಗಳಿಗೆ ಹುಲಿಗಳು ಸಹ ಬೆದರಿಕೆವೊಡ್ಡ ಬಲ್ಲವು. ಇನ್ನು ಕುನೋದಲ್ಲಿ ಜಿಂಕೆಗಳು ಇವೆ. ಆದ್ರೆ ಚೀತಾಗಳು ದಾಳಿ ಮಾಡಿದ ವೇಳೆ ಜಿಂಕೆಗಳು ಕೊಂಬಿನಿಂದ ಗಾಯಗೊಳಿಸಬಹುದು. ಆದ್ರೆ ಚೀತಾಗಳು ಸೌಮ್ಯಸ್ವಭಾವದ ಪ್ರಾಣಿಯಾಗಿರೋದ್ರಿಂದ ಗಾಯಗಳನ್ನ ನೋವನ್ನ ತಡೆದುಕೊಳ್ಳಲಾರವು. ಹೀಗಾಗಿ ಇಲ್ಲಿ ಕೃಷ್ಣಮೃಗ ಅಥವಾ ಚಿಂಕಾರಗಳನ್ನ ಬೆಳೆಸಬೇಕಿದೆ ಎಂದೂ ಥಾಪರ್ ಹೇಳಿದ್ದಾರೆ.  

ಸದ್ಯ ಐದು ಹೆಣ್ಣು ಮತ್ತು ಮೂರು ಗಂಡು ಚಿತಾಗಳನ್ನ ಕುನೋ ರಾಷ್ಟ್ರೀಯ ಉದ್ಯಾನವನದದಲ್ಲಿ ಬಿಡಲಾಗಿದೆ. ಇವುಗಳನ್ನ ಒಂದು ತಿಂಗಳ ಕಾಲ ಕ್ವಾರಂಟೈನ್ ಆವರಣಗಳಲ್ಲಿ ಇರಿಸಲಾಗುತ್ತದೆ. ಬಳಿಕ ಉದ್ಯಾನವನದ ತೆರೆದ ಅರಣ್ಯ ಪ್ರದೇಶಗಳಲ್ಲಿ ಬಿಡಲಾಗುತ್ತದೆ. ನಿನ್ನೆ ಪ್ರಧಾನಿ ಮೋದಿ ತಮ್ಮ 72 ವರ್ಷದ ಹುಟ್ಟುಹಬ್ಬದ ದಿನವೇ ಚೀತಾಗಳ ಭಾರತ ಭೂ ಪ್ರವೇಶಕ್ಕೆ ಚಾಲನೆ ನೀಡಿದ್ರು. ಇದೊಂದು ಐತಿಹಾಸಿಕ ದಿನವೆಂದು ಪ್ರಧಾನಿ ಮೋದಿ ಬಣ್ಣಿಸಿದ್ರು.

Cheetah’s big challenge-Cheetahs At Kuno National Park, Expert Lists Big Worries

Comments are closed.