ಸೋಮವಾರ, ಏಪ್ರಿಲ್ 28, 2025
HomeCrimeChhattisgarh Nurse Gang Raped : ಆರೋಗ್ಯ ಕೇಂದ್ರದಲ್ಲಿ ನರ್ಸ್ ಮೇಲೆ ಸಾಮೂಹಿಕ ಅತ್ಯಾಚಾರ :...

Chhattisgarh Nurse Gang Raped : ಆರೋಗ್ಯ ಕೇಂದ್ರದಲ್ಲಿ ನರ್ಸ್ ಮೇಲೆ ಸಾಮೂಹಿಕ ಅತ್ಯಾಚಾರ : ಅಪ್ರಾಪ್ತ ಸೇರಿ 3 ಮಂದಿಯ ಬಂಧನ

- Advertisement -

ಛತ್ತೀಸ್‌ಗಢ: Chhattisgarh Nurse Gang Raped: ಆರೋಗ್ಯ ಕೇಂದ್ರದಲ್ಲಿ ನರ್ಸ್ ಕಟ್ಟಿ ಹಾಕಿ, ಅಪ್ರಾಪ್ತ ಸೇರಿದಂತೆ ಒಟ್ಟು ನಾಲ್ವರು ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಛತ್ತೀಸ್ ಗಢದ ಮಹೇಂದ್ರಗಢದಲ್ಲಿ ನಡೆದಿದೆ. ನಾಲ್ವರು ಆರೋಪಿಗಳ ಪೈಕಿ ಇದೀಗ 17 ವರ್ಷದ ಅಪ್ತಾಪ್ತ ಸೇರಿದಂತೆ ಒಟ್ಟು ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೋರ್ವ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಮಹೇಂದ್ರಗಢ ಜಿಲ್ಲೆಯ ಛಿಪ್‌ಚಿಪಿ ಗ್ರಾಮದ ಬಳಿಯ ಆರೋಗ್ಯ ಕೇಂದ್ರದಲ್ಲಿ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ನರ್ಸ್ ಒಬ್ಬಂಟಿಯಾಗಿ ಕೆಲಸ ಮಾಡುತ್ತಿದ್ದರು. ಈ ವೇಳೆಯಲ್ಲಿ ಅಲ್ಲಿಗೆ ಬಂದ ನಾಲ್ವರು ಆರೋಪಿಗಳು ಸೇರಿಕೊಂಡು ಆಕೆಯನ್ನು ಹಗ್ಗದಿಂದ ಕಟ್ಟಿದ್ದಾರೆ. ನಂತರ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ರೆ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಘಟನೆಯ ನಂತರ ನರ್ಸ್ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಮತ್ತೋರ್ವ ಆರೋಪಿ ನಾಪತ್ತೆಯಾಗಿದ್ದು, ಆತನ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ನಿಮೇಶ್ ಬಾಯಯ್ಯ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ದೂರ ಹಾಗೂ ನಿರ್ಜನ ಪ್ರದೇಶಗಳಲ್ಲಿನ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಕುರಿತು ಆರೋಗ್ಯ ಕಾರ್ಯಕರ್ತರು ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸೂಕ್ತ ಭದ್ರತೆಯನ್ನು ಒದಗಿಸುವಂತೆ ಛತ್ತೀಸ್ ಗಢ ಸರಕಾರಕ್ಕೆ ಆರೋಗ್ಯ ಕಾರ್ಯಕರ್ತರು ಮನವಿ ಮಾಡಿಕೊಂಡಿದ್ದಾರೆ. “ನಮಗೆ ರಕ್ಷಣೆ ಬೇಕು. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ನಾವು ಕೆಲಸ ಮಾಡುವುದಿಲ್ಲ ಎಂದು ಜಿಲ್ಲೆಯ ಆರೋಗ್ಯ ಕೇಂದ್ರದ ಮುಖ್ಯ ಆರೋಗ್ಯಾಧಿಕಾರಿ ಪ್ರತಿಮಾ ಸಿಂಗ್ ಒತ್ತಾಯಿಸಿದ್ದಾರೆ.

ಇದನ್ನೂ ಓದಿ : Delhi Police : ಪ್ರೀತಿಸಿದ ಯುವತಿ ಬಿಎಸ್‌ಸಿ ಪದವೀಧರನಿಂದ ಬ್ಲಾಕ್‌ಮೇಲ್ : ಖಾಸಗಿ ಪೋಟೋ ಅಪ್ಲೋಡ್ ಮಾಡಿ 7 ಲಕ್ಷ ರೂ.ಸುಲಿಗೆ

ಇದನ್ನೂ ಓದಿ : gang-raped : ಸಾಫ್ಟ್​ವೇರ್​ ಇಂಜಿನಿಯರ್​ಗೆ ಥಳಿಸಿ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ

ಇದನ್ನೂ ಓದಿ : Fake Blood Platelets : ಡೆಂಗ್ಯೂ ರೋಗಿಗೆ ಪ್ಲಾಸ್ಮಾ ಬದಲು ಮೂಸಂಬಿ ಜೂಸ್ : ನಕಲಿ ಪ್ಲೇಟ್‌ ಲೆಟ್‌ ಜಾಲಪತ್ತೆ, 10 ಮಂದಿ ಅರೆಸ್ಟ್

Chhattisgarh Nurse Gang Raped inside Health Center 3 Arrested

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular