child complaints about his mother : ನನ್ನ ತಾಯಿಯನ್ನ ಜೈಲಿಗೆ ಹಾಕಿ.. ಪೊಲೀಸರಿಗೆ 3 ವರ್ಷದ ಪುಟಾಣಿ ದೂರು.. ಕಂಪ್ಲೇಂಟ್ ಗೆ ಕಾರಣವೇನು ಗೊತ್ತಾ

ಮಧ್ಯಪ್ರದೇಶ : child complaints about his mother ಮೂರು ವರ್ಷದ ಮಗು ತನ್ನ ತಾಯಿಯನ್ನ ಜೈಲಿಗೆ ಹಾಕಿ ಅಂತಾ ಪೊಲೀಸ್ ಠಾಣೆಗೆ ತೆರಳಿದ ಕಂಪ್ಲೆಂಟ್ ಕೊಟ್ಟಿದ್ದಾನೆ. ಕೇಳೋಕೆ ಅಚ್ಚರಿ ಅನಿಸಿದ್ರು ನಿಜ. ಇಷ್ಟು ಪುಟಾಣಿ ಕಂಪ್ಲೆಂಟ್ ಕೊಟ್ಟಿದ್ಯಾಕೆ ಅನ್ನೋದೇ ಈಗ ಭಾರಿ ಕುತೂಹಲಕ್ಕೆ ಕಾರಣವಾಗಿದೆ.

ಅಂದಹಾಗೆ ಈ ಘಟನೆ ನಡೆದಿರೋದು ಮಧ್ಯಪ್ರದೇಶದ ಬುರ್ಹಾನ್ ಪುರ ಜಿಲ್ಲೆಯ ಡೆಡ್ತಲೈ ಅನ್ನೋ ಪ್ರದೇಶದಲ್ಲಿ ಮೂರು ವರ್ಷದ ಮಗು ತನ್ನ ತಂದೆಯನ್ನ ಠಾಣೆಗೆ ಕರೆದುಕೊಂಡು ಬಂದು ತಾಯಿಯ ವಿರುದ್ಧ ಕಂಪ್ಲೆಂಟ್ ಕೊಟ್ಟಿದ್ದಾನೆ. ಪೊಲೀಸರು ಈ ಪುಟಾಣಿಯ ತೊದಲು ನುಡಿಗಳನ್ನ ಕೇಳಿ ದೂರನ್ನೂ ಬರೆದುಕೊಂಡಿದ್ದಾರೆ. ಆದ್ರೆ ಮಗು ಕಂಪ್ಲೆಂಟ್ ಕೊಟ್ಟಿರೋದು ತಾಯಿ ತನ್ನ ಚಾಕಲೇಟ್ ಗಳನ್ನ ಕದ್ದು ಮುಚ್ಚಿಡುತ್ತಾರೆ ಎಂದು..

 ಚಿಕ್ಕ ಮಕ್ಕಳು ಏನೇ ಮಾಡಿದರೂ ಖುಷಿಯಾಗುತ್ತದೆ. ಅವರ ಮುಗ್ಧ ವರ್ತನೆಗಳು ನಮ್ಮ ಮುಖದಲ್ಲಿ ನಗು ತರಿಸುತ್ತವೆ. ಇತ್ತೀಚೆಗಷ್ಟೇ ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯ ಡೆಡ್ತಲೈ ಗ್ರಾಮದಲ್ಲಿ ಇಂತಹದ್ದೇ ಘಟನೆ ನಡೆದಿದೆ. ತನ್ನ ತಾಯಿ ತನಗೆ ಚಾಕೊಲೇಟ್ ತಿನ್ನಲು ಬಿಡುತ್ತಿಲ್ಲ, ಚಾಕಲೆಟ್ ಗಳನ್ನ ಮುಚ್ಚಿಡ್ತಾಳೆಂದು ಬಾಲಕನೊಬ್ಬ ಪೊಲೀಸರಿಗೆ ದೂರು ನೀಡಿದ್ದಾನೆ. ಅಲ್ದೆ ತನ್ನ ತಾಯಿಯನ್ನ ಬಂಧಿಸಿ ಜೈಲಿಗೆ ಹಾಕಿ ಎಂದಿದ್ದಾನೆ.

ಪುಟಾಣಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಜೊತೆಗೆ ಮುಗುವಿನ ಮುಗ್ದತೆಯ ಜೊತೆ ಪೊಲೀಸರು ಮಗುವಿನ ಜೊತೆ ನಡೆದುಕೊಂಡ ರೀತಿಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ.

ಆಗಿದ್ದೇನು..? ಬುರ್ಹಾನ್ ಪುರ ನಿವಾಸಿಯೊಬ್ಬರು ತನ್ನ ಮೂರು ವರ್ಷದ ಮಗು ಮನೆಯಲ್ಲಿ ಚಾಕಲೇಟ್ ಕೇಳಿದ್ದಕ್ಕೆ ತಾಯಿ ಕೊಡಲ್ಲ ಎಂದಿದ್ದಾರೆ. ಅಲ್ದೆ, ಪುಟಾಣಿಗೆ ಗದರಿದ್ದಾರೆ ಇದರಿಂದ ಸಿಟ್ಟಾದ ಮಗು, ತಂದೆಯ ಬಳಿ ಬಂದು ತನ್ನನ್ನ ಪೊಲೀಸ್ ಸ್ಟೇಷನ್ ಗೆ ಕರೆದೊಯ್ಯುವಂತೆ ಹೇಳಿದೆ. ತಂದೆಯೂ ಮಗುವನ್ನ ಪೊಲೀಸ್ ಠಾಣೆಗೆ ಕರೆದು ಕೊಂಡು ಬಂದಿದ್ದಾರೆ. ಅಲ್ಲಿನ ಸಿಬ್ಬಂದಿಗೆ ತಂದೆ ವಿಷಯವನ್ನ ತಿಳಿಸಿದಾಗ, ಠಾಣೆ ಮಹಿಳಾ ಸಬ್ ಇನ್ಸ್ ಪೆಕ್ಟರ್ ಪ್ರಿಯಾಂಕಾ ಮಗು ಹೇಳಿದ್ದನ್ನ ದೂರನ್ನ ಬರೆದುಕೊಂಡಿದ್ದಾರೆ. ಈ ವೇಳೆ ಮಗು ತನ್ನ ತಾಯಿ ತನಗೆ ಚಾಕಲೇಟ್ ತಿನ್ನೋಕೆ ಬಿಡಲ್ಲ, ಎಲ್ಲವನ್ನೂ ಮುಚ್ಚಿಡುತ್ತಾಳೆ ಎಂದು ಹೇಳಿದೆ ಇದಕ್ಕೆ ನಗುತ್ತಲೇ ದೂರು ಬರೆದುಕೊಂಡ ಎಸ್ ಐ ಮಗುವನ್ನ ಮುದ್ದು ಮಾಡಿ ಕಳುಹಿಸಿದ್ದಾರೆ.

ಈ ಸುದ್ದಿ ವೈರಲ್ ಆಗಿದ್ದು, ಮಗುವಿನ ಚೇಷ್ಟೆ ನೋಡಿದವರೆಲ್ಲ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ ಎಂದು ಕಮೆಂಟ್ ಗಳನ್ನು ಹಾಕುತ್ತಿದ್ದಾರೆ.

ಇದನ್ನೂ ಓದಿ : Anil Firojiya : ಕ್ಷೇತ್ರದ ಅಭಿವೃದ್ಧಿಗಾಗಿ 15 ಕೆ.ಜಿ ತೂಕ ಕಳೆದುಕೊಂಡ ಸಂಸದ.. ಸಿಕ್ತು 15 ಸಾವಿರ ಕೋಟಿ ರೂಪಾಯಿ ಅನುದಾನ

ಇದನ್ನೂ ಓದಿ : Diwali 2022 Guildlines : ದೀಪಾವಳಿಗೆ ಮಾಲಿನ್ಯ ಮಂಡಳಿ ಹೊಸ ರೂಲ್ಸ್ : ರಾತ್ರಿ 8 ರಿಂದ 10ರ ವರೆಗೆ ಹಸಿರು ಪಟಾಕಿಗೆ ಅವಕಾಶ

child complaints about his mother This kid’s innocent complaint will melt your heart

Comments are closed.