Cold wave warning : ಚಳಿಗಾಲ ಆರಂಭವಾಗುತ್ತಿದ್ದಂತೆಯೇ ಶೀತಗಾಳಿಯ ಆರ್ಭಟ ಹೆಚ್ಚಳವಾಗಿದೆ. ಅದ್ರಲ್ಲೂ ಉತ್ತರ ಭಾರತದಲ್ಲಿ ಇದೀಗ ಶೀತ ಅಲೆಯ ಆತಂಕದ ಶುರುವಾಗಿದೆ. ಇದೀಗ ಶೀತ ಅಲೆಯ ಹಿನ್ನೆಲೆಯಲ್ಲಿ ಜನವರಿ 6ರ ವರೆಗೆ ಶಾಲೆಗಳಿಗೆ ರಜೆ (School Holiday) ಘೋಷಿಸಿ ಉತ್ತರ ಪ್ರದೇಶದ ಲಖನೌ ಜಿಲ್ಲೆಯ ಜಿಲ್ಲಾ ಶಿಕ್ಷಣಾಧಿಕಾರಿಗಳು ಆದೇಶ ಹೊರಡಿಸಲಾಗಿದೆ.
ಉತ್ತರ ಪ್ರದೇಶದ ಲಕ್ನೋ ಜಿಲ್ಲೆಯಲ್ಲಿ, ಶೀತ ಅಲೆ ಮತ್ತು ದಟ್ಟವಾದ ಮಂಜಿನ ಪರಿಸ್ಥಿತಿಯಿಂದಾಗಿ 1 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಜನವರಿ 6 ರವರೆಗೆ ಶಾಲೆಗಳನ್ನು ಮುಚ್ಚಲಾಗುತ್ತದೆ. 1 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಜನವರಿ 6 ರವರೆಗೆ ಶಾಲೆಗಳನ್ನು ಮುಚ್ಚುವುದಾಗಿ ಲಕ್ನೋದಲ್ಲಿ ಜಿಲ್ಲಾಡಳಿತ ಮಂಗಳವಾರ ಘೋಷಿಸಿದೆ.

ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಜಿಲ್ಲಾ ಶಿಕ್ಷಣಾಧಿಕಾರಿ ರಾಮ್ ಪ್ರವೇಶ್ ಆದೇಶ ಹೊರಡಿಸಿದ್ದು, ಜನವರಿ 6 ರವರೆಗೆ ಲಕ್ನೋ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಚಳಿಗಾಲದ ರಜೆ ಘೋಷಿಸಲಾಗಿದೆ. ಉತ್ತರ ಪ್ರದೇಶದಾದ್ಯಂತ ಶೀತ ಅಲೆಯ ಆತಂಕವಿದೆ. ಹೀಗಾಗಿ ಪರಿಸ್ಥಿತಿಗೆ ಅನುಗುಣವಾಗಿ ರಜೆಯನ್ನು ಘೋಷಣೆ ಮಾಡಲು ಉತ್ತರ ಪ್ರದೇಶ ಸರಕಾರ ನಿರ್ಧಾರ ಮಾಡಿದೆ.
ಇದನ್ನೂ ಓದಿ : ಫುಲ್ ಕೈ ಶರ್ಟ್ ಹಾಕುವಂತಿಲ್ಲ, ಹಿಜಾಬ್ ಹಾಕಬಹುದು : ಸರ್ಕಾರದ ಹೊಸ ರೂಲ್ಸ್ ಗೆ ಆಕ್ರೋಶ
ಉತ್ತರ ಪ್ರದೇಶದಲ್ಲಿಯೇ ಅತೀ ಹೆಚ್ಚು ಚಳಿಯನ್ನು ಹೊಂದಿರುವ ಜಿಲ್ಲೆ ಲಕ್ನೋ ಎನಿಸಿಕೊಂಡಿದೆ. ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ 2024 ರ ಜನವರಿ 6 ರವರೆಗೆ ಪೂರ್ವ ಪ್ರಾಥಮಿಕದಿಂದ 8 ನೇ ತರಗತಿಯವರೆಗೆ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರಜೆಯನ್ನು ನೀಡಲಾಗಿದೆ.

9 ರಿಂದ 12 ನೇ ತರಗತಿಯ ವರಗೆ ತರಗತಿಗಳನ್ನು ನಡೆಸಲು ನಿರ್ಧಾರ ಮಾಡಲಾಗಿದೆ. ಆದರೆ ಶಾಲಾ ಸಮಯದಲ್ಲಿಯೂ ಬದಲಾವಣೆಯಾಗಲಿದೆ. ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 03:00 ರವರೆಗೆ ಮಾತ್ರವೇ ನಡೆಸುವಂತೆ ಜಿಲ್ಲಾ ಶಿಕ್ಷಣಾಧಿಕಾರಿಗಳು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ :ಹೊಸ ವರ್ಷ 2024ನೇ ಸಾಲಿನ ಸರಕಾರಿ, ಶಾಲಾ ರಜೆ ಪಟ್ಟಿ ಪ್ರಕಟ
ಶಿಕ್ಷಣ ಇಲಾಖೆಯ ಅಧಿಕಾರಿಗಳು ಹೊರಡಿಸಿರುವ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ತಿಳಿಸಲಾಗಿದೆ. ಆದೇಶ ಪಾಲನೆ ಮಾಡದೇ ಇರುವ ಶಾಲೆಗಳ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ. ಕಳೆದ ವಾರ ವಾರಣಾಸಿ ಜಿಲ್ಲಾಡಳಿತ ಶೀತ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಜನವರಿ 6 ರವರೆಗೆ 1 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲೆಗಳನ್ನು ಮುಚ್ಚಿತ್ತು.

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಉತ್ತರ ಪ್ರದೇಶದ ಹಲವು ಕಡೆಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಶೀತ ಅಲೆಯ ಆತಂಕವಿದೆ. ಹಲವು ಪ್ರದೇಶಗಳಲ್ಲಿಜನವರಿ 5ರವರೆಗೆ ರಾಜ್ಯದ ಕೆಲವೆಡೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ಇದನ್ನೂ ಓದಿ : ಚಿನ್ನ, ಬೆಳ್ಳಿಯ ದರದಲ್ಲಿ ಭಾರೀ ಏರಿಕೆ : 70 ಸಾವಿರದ ಗಡಿದಾಟಲಿದೆ ಬಂಗಾರ, ಎಷ್ಟಿದೆ ಇಂದಿನ ದರ
Cold wave warning Holidays declared for schools in the state till January 6 2024