ಪೋಸ್ಟರ್‌ ಹರಿದ ನಾಯಿಯ ವಿರುದ್ದ ಪೊಲೀಸರಿಗೆ ದೂರು ಕೊಟ್ಟ ಮಹಿಳೆ

ವಿಜಯವಾಡ : (Complaint against dog) ಆಂಧ್ರಪ್ರದೇಶ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಪೋಸ್ಟರನ್ನು ನಾಯಿಯೊಂದು ಕಿತ್ತು ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ಇದಾದ ಬಳಿಕ ಮಹಿಳೆಯೋರ್ವರು ಪೋಸ್ಟರ್‌ ಹರಿದ ನಾಯಿಯ ವಿರುದ್ದ ದೂರು ನೀಡಿದ್ದಾರೆ. ವಿಜಯವಾಡದಲ್ಲಿ ಈ ವಿಚಿತ್ರ ಘಟನೆ ನಡೆದಿದ್ದು, ವಿರೋಧ ಪಕ್ಷ ತೆಲುಗು ದೇಶಂ ಪಕ್ಷದ (ಟಿಡಿಪಿ) ಕಾರ್ಯಕರ್ತೆ ದಾಸರಿ ಉದಯಶ್ರೀ ವ್ಯಂಗ್ಯವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.

ಜಗನಣ್ಣ ಮಾ ಭವಿಷ್ಯತ್ತು” (ಜಗನ್ ಅಣ್ಣ ನಮ್ಮ ಭವಿಷ್ಯ) ಎಂಬ ಘೋಷಣೆಯನ್ನು ಹೊಂದಿದ್ದು, ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಪಕ್ಷ (ವೈಎಸ್‌ಆರ್‌ಸಿಪಿ) ರಾಜ್ಯಾದ್ಯಂತ ನಡೆಯುತ್ತಿರುವ ಸಮೀಕ್ಷೆಯ ಭಾಗವಾಗಿ ಮನೆಯೊಂದಕ್ಕೆ ಅಂಟಿಸಲಾಗಿತ್ತು. ಇದರಲ್ಲಿ ಆಂಧ್ರಪ್ರದೇಶ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಫೋಟೋವನ್ನು ಬಳಸಲಾಗಿತ್ತು. ಇದನ್ನು ನಾಯಿಯೊಂದು ಕಿತ್ತು ಹಾಕಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿತ್ತು.

ಆಂಧ್ರಪ್ರದೇಶ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಪೋಸ್ಟರ್ ಅನ್ನು ಹರಿದು ಹಾಕುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವಿರೋಧ ಪಕ್ಷ ತೆಲುಗು ದೇಶಂ ಪಕ್ಷದ (ಟಿಡಿಪಿ) ಕಾರ್ಯಕರ್ತೆ ದಾಸರಿ ಉದಯಶ್ರೀ ನಾಯಿಯ ವಿರುದ್ದ ದೂರು ನೀಡಿದ್ದಾರೆ. ಶ್ವಾನದ ವಿರುದ್ಧ ಪಾಯಕರಾವ್‌ ಪೇಟೆಯ ನುನ್ನ ಪೊಲೀಸ್ ಠಾಣೆಯಲ್ಲಿ ಟಿಡಿಪಿ ನಾಯಕಿ ದಾಸರಿ ಉದಯ ಶ್ರೀ ಅವರು ದೂರು ದಾಖಲಿಸಿದ್ದಾರೆ. ನೈಜ ತಪ್ಪಿತಸ್ಥನನ್ನು ಹಿಡಿದು ಶಿಕ್ಷೆಗೆ ಗುರಿಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಇದು ತಮ್ಮ ರಾಜಕೀಯ ಎದುರಾಳಿ ಜಗನ್ ರೆಡ್ಡಿ ವಿರುದ್ಧದ ಉದಯಶ್ರೀ ವ್ಯಂಗ್ಯದ ನಡೆಯಾಗಿದೆ. “ನಮ್ಮ ಪ್ರೀತಿಯ ಮುಖ್ಯಮಂತ್ರಿಯನ್ನು ಅವಮಾನಿಸಿದ ನಾಯಿ ಮತ್ತು ನಾಯಿಯ ಹಿಂದೆ ಇರುವವರನ್ನು ಬಂಧಿಸುವಂತೆ ನಾವು ಪೊಲೀಸರಿಗೆ ಮನವಿ ಮಾಡಿದ್ದೇವೆ” ಎಂದು ಮಹಿಳೆ ನೀಡಿದ ದೂರಿನ ಬಗ್ಗೆ ಡೆಕ್ಕನ್ ಹೆರಾಲ್ಡ್ ತನ್ನ ಐಎಎನ್ಎಸ್ ಹೇಳಿಕೆಯನ್ನು ಉಲ್ಲೇಖಿಸಿದೆ.

ಇದನ್ನೂ ಓದಿ : Corona Hike in india : ಕೊರೊನಾ ಆರ್ಭಟ : ಭಾರತದಲ್ಲಿ ಒಂದೇ ದಿನ 11,000 ಪ್ರಕರಣ ದಾಖಲು

ಇದಕ್ಕೂ ಮುನ್ನ, ಜಗನ್ ಮೋಹನ್ ರೆಡ್ಡಿ ಅವರ ಚಿತ್ರ ಇರುವ ಪೋಸ್ಟರ್ ಅನ್ನು ನಾಯಿ ಹರಿಯುವ ವಿಡಿಯೋ ಎಲ್ಲೆಡೆ ಹರಿದಾಡಿತ್ತು. ಆ ಸ್ಟಿಕ್ಕರ್‌ನಲ್ಲಿ “ಜಗನಣ್ಣ ಮಾ ಭವಿಷ್ಯಲು” (ಜಗನ್ ಅಣ್ಣ ನಮ್ಮ ಭವಿಷ್ಯ) ಎಂದು ತೆಲುಗು ಭಾಷೆಯಲ್ಲಿ ಬರೆಯಲಾಗಿತ್ತು. ಆಡಳಿತಾರೂಢ ವೈಎಸ್‌ಆರ್‌ ಕಾಂಗ್ರೆಸ್ ಪಕ್ಷವು ರಾಜ್ಯವ್ಯಾಪಿ ಸಮೀಕ್ಷೆ ನಡೆಸುತ್ತಿದ್ದು, ಅದರ ಭಾಗವಾಗಿ ಮನೆಯೊಂದರ ಹೊರಗೆ ಪೋಸ್ಟರ್ ಅಂಟಿಸಲಾಗಿತ್ತು. ಟಿಡಿಪಿಯ ಅನೇಕ ಸದಸ್ಯರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಈ ವಿಡಿಯೋವನ್ನು ಹಂಚಿಕೊಂಡು ಜಗನ್ ಅವರನ್ನು ಲೇವಡಿ ಮಾಡುತ್ತಿದ್ದಾರೆ. ಇದು ವೈಎಸ್ಆರ್ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

Complaint against dog: A woman complained to the police against the dog that tore the poster

Comments are closed.