Cloudburst landslide : ಜಲ ಪ್ರಳಯಕ್ಕೆ ಹಿಮಾಚಲ, ಓಡಿಶಾ, ಉತ್ತರಾಖಂಡ್ ತತ್ತರ

ದೆಹಲಿ : ಭೂ ಕುಸಿತದಿಂದ ಹಿಮಾಚಲಪ್ರದೇಶ ಕಂಗೆಟ್ಟಿದೆ. (Cloudburst landslide) ಮೇಘಸ್ಫೋಟಕ್ಕೆ ಉತ್ತರಾಖಂಡ್ ತತ್ತರಿಸಿ ಹೋಗಿದೆ.. ಮಹಾ ಮಳೆ ಪ್ರವಾಹಕ್ಕೆ ಓಡಿಶಾ ಒದ್ದಾಡುತ್ತಿದೆ.

ಉತ್ತರ ಭಾರತದ ಮೂರು ರಾಜ್ಯಗಳಲ್ಲಿ ಮಳೆ ಮತ್ತು ರಣಭೀಕರ ಪ್ರವಾಹ ಭಾರಿ ವಿನಾಶವನ್ನೇ ಸೃಷ್ಟಿಸಿವೆ. ಹಿಮಾಚಲಪ್ರದೇಶ, ಉತ್ತರಾಖಂಡ್ ಮತ್ತು ಓಡಿಶಾದಲ್ಲಿ ಭಾರಿ ಮಳೆಯಾಗುತ್ತಿದ್ದು, ಭೂಕುಸಿತವೂ ಸಂಭವಿಸ್ತಿದೆ. ಜಲಪ್ರಳಯದಲ್ಲಿ ಇದುವರೆಗೂ ಬರೋಬ್ಬರಿ 31 ಜನ ಮೃತಪಟ್ಟಿದ್ದಾರೆ. ಮೃತ 31 ಜನರ ಪೈಕಿ ಹಿಮಾಚಲಪ್ರದೇಶದಲ್ಲೇ 22 ಜನ ದುರ್ಮರಣಕ್ಕೀಡಾಗಿದ್ದಾರೆ ಅಂತಾ ವರದಿ ಆಗಿದೆ.

ಹಿಮಾಚಲಪ್ರದೇಶ : ಭೂ ಕುಸಿತ ಮತ್ತು ಪ್ರವಾಹದಿಂದಾಗಿ ಒಂದೇ ಕುಟುಂಬದ ಎಂಟು ಜನರು ಸೇರಿದಂತೆ ಒಟ್ಟು 22 ಜನರು ಬಲಿಯಾಗಿದ್ದಾರೆ. ಭಾರಿಮಳೆಯಿಂದಾಗಿ ಬೆಟ್ಟ ಗುಡ್ಡಗಳು ಕುಸಿಯುತ್ತಿದ್ದು,ಜನ ಜೀವನ ಅಸ್ತವ್ಯಸ್ತವಾಗಿದೆ. ಕಂಗ್ರಾ ಜಿಲ್ಲೆಯಲ್ಲಿ ಚಕ್ಕಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ರೈಲ್ವೇ ಸೇತುವೆ ಸಂಪೂರ್ಣ ಕುಸಿದು ಬಿದ್ದಿದೆ.ಇದರಿಂದ ರೈಲ್ವೇ ಸಂಚಾರ ಬಂದ್ ಆಗಿದೆ. ಹಿಮಾಚಲ ಪ್ರದೇಶದ ಕಂಗ್ರಾ, ಚಂಬಾ, ಮಂಡಿ, ಕುಲು, ಶಿಮ್ಲಾ, ಸಿರ್ಮೌರ್, ಬಿಲಾಸ್ ಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಆಗಸ್ಟ್ 25ರವರೆಗೆ ಭಾರಿ ಮಳೆಯಾಗುತ್ತೆ ಅಂತಾ ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ. ಸದ್ಯ ಹಿಮಾಚಲಪ್ರದೇಶದಲ್ಲಿ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಲಾಗಿದೆ.

ಉತ್ತರಾಖಂಡ್ : ಹಿಮಾಚಲ ಪ್ರದೇಶದ ನೆರೆಯ ರಾಜ್ಯದ ಉತ್ತರಾಖಂಡ್ ನಲ್ಲಿ ಮೇಘಸ್ಫೋಟದಂತೆ ಮಳೆ ಸುರಿಯುತ್ತಿದ್ದು, ನದಿಗಳೆಲ್ಲ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಉತ್ತರಾಖಂಡ್ ನ ಹಲವು ಜಿಲ್ಲೆಗಳಲ್ಲಿ  ಮೇಘಸ್ಫೋಟದಿಂದಾದ ಪ್ರವಾಹಕ್ಕೆ ನಾಲ್ವರು ಬಲಿಯಾಗಿದ್ದು 10 ಜನರು ನಾಪತ್ತೆಯಾಗಿದ್ದಾರೆ ಅಂತಾ ವರದಿಯಾಗಿದೆ. ಭಾರಿ ಮಳೆಯಿಂದಾಗಿ ಸೇತುವೆಗಳು ಕೊಚ್ಚಿ ಹೋಗುತ್ತಿವೆ. ಡೆಹರಾಡೂನ್ ಜಿಲ್ಲೆಯ ಸರ್ಖೇತ್  ಗ್ರಾಮದ ಬಳಿ ಸಂಭವಿಸಿದ ಮೇಘಸ್ಫೋಟದಿಂದ ರಸ್ತೆಗಳೇ ಕೊಚ್ಚಿ ಹೋಗಿವೆ.

ಓಡಿಶಾ : ಇಲ್ಲಿನ ಹಲವು ಜಿಲ್ಲೆಗಳಲ್ಲಿ ನಿರಂತರ ಮಳೆಯಾಗ್ತಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಾನದಿ ಪ್ರವಾಹದಿಂದ 500ಕ್ಕೂ ಹೆಚ್ಚು ಹಳ್ಳಿಗಳು ಜಲಾವೃತವಾಗಿದ್ದು, ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. ಮೂಲಗಳ ಪ್ರಕಾರ ಓಡಿಶಾರಾಜ್ಯವೊಂದರಲ್ಲೇ ಬರೋಬ್ಬರಿ 4ಲಕ್ಷ ಜನರು ಪ್ರವಾಹ ಪೀಡಿತರಾಗಿದ್ದು,ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದಾರೆ.

ಜಮ್ಮುಮತ್ತು ಕಾಶ್ಮೀರ : ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲೂ ಭಾರಿಮಳೆಯಾಗ್ತಿದ್ದು, ಪ್ರವಾಹಪರಿಸ್ಥಿತಿ ತಲೆ ದೋರಿದೆ. ರಜೌರಿಜಿಲ್ಲೆಯಲ್ಲಿ ನದಿಗಳು ಅಪಾಯ ಮಟ್ಟ ಮೀರಿಹರಿಯುತ್ತಿದ್ದು, ನದಿ ತೀರದ ಪ್ರದೇಶದ ಜನರಿಗೆ ಕಟ್ಟೆಚ್ಚರಕ್ಕೆ ಸೂಚಿಸಲಾಗಿದೆ

ಇದನ್ನೂ ಓದಿ : KL Rahul success in captaincy: ಬ್ಯಾಟಿಂಗ್‌ನಲ್ಲಿ ಫೆಲ್ಯೂರ್, ಕ್ಯಾಪ್ಟನ್ಸಿಯಲ್ಲಿ ಸಕ್ಸಸ್, ರಾಹುಲ್ ನಾಯಕತ್ವಕ್ಕೆ ಮೊದಲ ಸರಣಿ ಜಯ

ಇದನ್ನೂ ಓದಿ : Boycott Amazon : ರಾಧಾ-ಕೃಷ್ಣರ ಅಶ್ಲೀಲ ಭಂಗಿಯ ಪೇಟಿಂಗ್​ ಮಾರಾಟಕ್ಕೆ ಮುಂದಾದ ಅಮೆಜಾನ್​ : ಹಿಂದೂಗಳ ಆಕ್ರೋಶ

Cloudburst landslide Flood Himachal Pradesh Uttarakhand Odisha jammu and kashmir

Comments are closed.