India Vs Australia warm-up Match : ಟಿ20 ವಿಶ್ವಕಪ್ ಅಭ್ಯಾಸ ಪಂದ್ಯ: ರಾಹುಲ್ ಅಬ್ಬರದ ಅರ್ಧಶತಕ, ಕ್ಟಾಪ್ಟನ್ ರೋಹಿತ್ ಫೇಲ್

ಬ್ರಿಸ್ಬೇನ್: ಭಾರತ ಮತ್ತು ಆತಿಥೇಯ ಆಸ್ಟ್ರೇಲಿಯಾ ನಡುವಿನ ಟಿ20 ವಿಶ್ವಕಪ್ (T20 World Cup 2022) ಅಭ್ಯಾಸ ಪಂದ್ಯ ಬ್ರಿಸ್ಬೇನ್’ನ ಗಾಬಾ ಮೈದಾನದಲ್ಲಿ ಆರಂಭವಾಗಿದ್ದು, ಟೀಮ್ ಇಂಡಿಯಾ ಉಪನಾಯಕ ಕೆ.ಎಲ್ ರಾಹುಲ್ (KL Rahul Fifty) ಅಬ್ಬರದ ಅರ್ಧಶತಕ ಬಾರಿಸಿದ್ದಾರೆ.

ವಿಶ್ವಕಪ್ ಟೂರ್ನಿಗೂ ಮುನ್ನ ಭಾರತ ಎರಡು ಅಭ್ಯಾಸ ಪಂದ್ಯಗಳನ್ನಾಡುತ್ತಿದ್ದು, ಮೊದಲ ತಾಲೀಮು ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್’ಗೆ ಇಳಿಸಲ್ಪಟ್ಟ ಭಾರತಕ್ಕೆ ಉಪನಾಯಕ ಕೆ.ಎಲ್ ರಾಹುಲ್ ಸ್ಫೋಟಕ ಆರಂಭ ಒದಗಿಸಿದರು. ಮೊದಲ ಓವರ್’ನಿಂದಲೇ ಅಬ್ಬರಿಸಲು ಆರಂಭಿಸಿದ ರಾಹುಲ್ 33 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಆಕರ್ಷಕ ಸಿಕ್ಸರ್’ಗಳ ನೆರವಿನಿಂದ 57 ರನ್ ಬಾರಿಸಿ ಔಟಾದರು. ಈ ಮೂಲಕ ಟಿ20 ವಿಶ್ವಕಪ್ ಟೂರ್ನಿಗೆ ಅದ್ಧೂರಿ ಆರಂಭ ಪಡೆದುಕೊಂಡರು. ಆದರೆ ಮತ್ತೊಬ್ಬ ಓಪನರ್, ನಾಯಕ ರೋಹಿತ್ ಶರ್ಮಾ 14 ಎಸೆತಗಳಲ್ಲಿ ಕೇವಲ 15 ರನ್ ಗಳಿಸಿ ಎಡಗೈ ಸ್ಪಿನ್ನರ್ ಏಸ್ಟನ್ ಆಗರ್’ಗೆ ವಿಕೆಟ್ ಒಪ್ಪಿಸಿದರು.

ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭಾರತ ಬಲಿಷ್ಠ ಪ್ಲೇಯಿಂಗ್ XI ನೊಂದಿಗೆ ಕಣಕ್ಕಿಳಿದಿದೆ. ರೋಹಿತ್ ಶರ್ಮಾ, ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್ ಮತ್ತು ಅರ್ಷದೀಪ್ ಸಿಂಗ್ ಟೀಮ್ ಇಂಡಿಯಾ ಪ್ಲೇಯಿಂಗ್ XIನಲ್ಲಿ ಕಾಣಿಸಿಕೊಂಡಿದ್ದಾರೆ. ಬಹುತೇಕ ಇದೇ ಆಟಗಾರರು ವಿಶ್ವಕಪ್ ಪಂದ್ಯಗಳಲ್ಲಿ ಭಾರತ ಪರ ಕಣಕ್ಕಿಳಿಯಲಿದ್ದಾರೆ.

ಬುಧವಾರ ಬ್ರಿಸ್ಬೇನ್’ನಲ್ಲೇ ನಡೆಯಲಿರುವ ತನ್ನ 2ನೇ ಅಭ್ಯಾಸ ಪಂದ್ಯದಲ್ಲಿ ಭಾರತ, 2021ರ ಟಿ20 ವಿಶ್ವಕಪ್ ಟೂರ್ನಿಯ ರನ್ನರ್ಸ್ ಅಪ್ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ವಿಶ್ವಕಪ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಭಾರತ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಏಷ್ಯಾ ದಿಗ್ಗಜರ ಈ ಹೈವೋಲ್ಟೇಜ್ ಪಂದ್ಯ ಅಕ್ಟೋಬರ್ 23ರಂದು ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್’ನಲ್ಲಿ ನಡೆಯಲಿದೆ.

ಇದನ್ನೂ ಓದಿ : Virat Kohli fitness report : ವಿರಾಟ್ ಕೊಹ್ಲಿ ಫಿಟ್ನೆಸ್ ‘ಕಿಂಗ್’, NCA ವರದಿಯಲ್ಲಿ ಕೊಹ್ಲಿ ಫಿಟ್ನೆಸ್ ಸೀಕ್ರೆಟ್ ರಿವೀಲ್

ಇದನ್ನೂ ಓದಿ : T20 World Cup 2022 : ಆಟಗಾರರಿಗೆ ಬಿಗ್ ರಿಲೀಫ್, ಕೋವಿಡ್ ಪಾಸಿಟಿವ್ ಬಂದರೂ ವಿಶ್ವಕಪ್‌ನಲ್ಲಿ ಆಡಬಹುದು

T20 World Cup 2022 India Vs Australia warm-up Match KL Rahul Fifty

Comments are closed.