ಬೆಂಗಳೂರು : ಕೊರೊನಾ ವೈರಸ್ ಸೋಂಕು ರಾಜ್ಯವನ್ನು ತಲ್ಲಣಗೊಳಿಸಿದೆ. ಕೊರೊನಾ ವಿರುದ್ದ ಲಕ್ಷಾಂತರ ಮಂದಿ ಹೋರಾಟವನ್ನು ನಡೆಸುತ್ತಿದ್ದಾರೆ. ಆದ್ರೀಗ ಕೊರೊನಾ ವಾರಿಯರ್ಸ್ ಗೆ ಸೋಂಕು ಕಾಣಿಸಿಕೊಳ್ಳುತ್ತಿದೆ. ಕೊರೊನಾ ಸೋಂಕಿನಿಂದ ಗೆದ್ದು ಬಂದ ಕೊರೊನಾ ವಾರಿಯರ್ಸ್ ಗೆ ಬೆಂಗಳೂರಿನ ಜನತೆ ಆರತಿ ಬೆಳಗಿ, ಚಪ್ಪಾಳೆ ತಟ್ಟಿ ವಿಶೇಷವಾಗಿ ಬರಮಾಡಿಕೊಂಡಿದ್ದಾರೆ.
ಕುಂದಾಪುರದ ಯುವತಿಯೋರ್ವಳು ಬೆಂಗಳೂರಿನ ಆಯುವೇರ್ದ ಕಾಲೇಜಿನ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಳು. ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆಯೇ ಸ್ವಯಂ ಪ್ರೇರಣೆಯಿಂದ ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡೋದಕ್ಕೆ ಶುರುಮಾಡಿದ್ದಾರೆ. ಮೆಜಿಸ್ಟಿಕ್ ಬಸ್ ನಿಲ್ದಾಣದಲ್ಲಿ ಬರುವ ಪ್ರಯಾಣಿಕರನ್ನು ಥರ್ಮಲ್ ಸ್ಕ್ರೀನಿಂಗ್ ಗೆ ಒಳಪಡಿಸುತ್ತಿದ್ದ, ಯುವತಿ ನಂತರದಲ್ಲಿ ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ ಸೇರಿದಂತೆ ಹಲವು ಕಡೆಗಳಲ್ಲಿಯೂ ಸೇವೆ ಸಲ್ಲಿಸಿದ್ದಾಳೆ.

ಕೊರೊನಾ ವಾರಿಯರ್ಸ್ ಆಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾಗ, ಯುವತಿಗೆ ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿತ್ತು. ಅನುಮಾನಗೊಂಡ ಯುವತಿ ಸ್ವಯಂ ಪರೀಕ್ಷೆಗೆ ಒಳಪಟ್ಟಿದ್ದಾಳೆ. ಆಗ ಕೊರೊನಾ ಇರುವುದು ಪತ್ತೆಯಾಗಿದೆ. ನಂತರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತನ್ನ ಮನೆಗೆ ವಾಪಾಸಾಗಿದ್ದಳು. ಯುವತಿ ಮನೆಗೆ ವಾಪಾಸಾಗಿದ್ದಾಳೆ. ಈ ವೇಳೆಯಲ್ಲಿ ಕಾರ್ಪೋರೇಟರ್ ಹಾಗೂ ಸ್ಥಳೀಯ ನಿವಾಸಿಗಳು ಆರತಿ ಬೆಳಗಿ, ಚಪ್ಪಾಳೆಯನ್ನು ತಟ್ಟಿ ವಿಶಿಷ್ಟವಾಗಿ ಬರಮಾಡಿಕೊಂಡಿದ್ದಾರೆ.

ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಜನ ಸೇವೆಗೆ ತನ್ನನ್ನ ಮುಡಿಪಾಗಿಟ್ಟ ಯುವತಿಯನ್ನು ಸ್ಥಳೀಯರು ಸ್ವಾಗತಿಸಿರುವ ಪರಿ ನಿಜಕ್ಕೂ ಅತ್ಯದ್ಬುತ. ಮಾತ್ರವಲ್ಲ ಯುವತಿ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಆದರೆ ಕೊರೊನಾ ಸೋಂಕು ತಗುಲಿದ ತಕ್ಷಣ ಅವರನ್ನು ನೋಡುವ ದೃಷ್ಟಿಕೋನ ಬದಲಾಗ ಬೇಕು ಎಂದು ಯುವತಿ ಜನರಲ್ಲಿ ಮನವಿ ಮಾಡಿಕೊಂಡಿದ್ದಾಳೆ.
ಡೆಡ್ಲಿ ಮಹಾಮಾರಿಯಿಂದ ಜನರನ್ನು ರಕ್ಷಿಸುವುದಕ್ಕೆ ಪಣತೊಟ್ಟಿರುವ ಲಕ್ಷಾಂತರ ಕೊರೊನಾ ವಾರಿಯರ್ಸ್ ಗೆ ಬೆಂಬಲ ನೀಡಿದ್ದೇ ಆದ್ರೆ ಖಂಡಿತಾ ಮಹಾಮಾರಿಯನ್ನು ಹೊಡೆದೋಡಿಸಬಹುದು. ಕೊರೊನಾ ವಾರಿಯರ್ಸ್ ಗಳನ್ನು ಗೌರವಿಸುವ ಕಾರ್ಯವನ್ನು ಪ್ರತಿಯೊಬ್ಬರೂ ಕೂಡ ಮಾಡಬೇಕು. ಆಗ ಮಾತ್ರ ವಾರಿಯರ್ಸ್ ಗಳು ಇನ್ನಷ್ಟು ಹುಮ್ಮಸ್ಸಿನಿಂದ ಕೆಲಸ ಮಾಡುವುದಕ್ಕೆ ಸಾಧ್ಯ.