ರಾಜ್ಯದಲ್ಲಿ ಮತ್ತೆ ಆರ್ಭಟಿಸಿದ ಕೊರೊನಾ : ಸಿಲಿಕಾನ್‌‌ ಸಿಟಿಯಲ್ಲಿ‌ 5 ಸಾವಿರದಂಚಿನಲ್ಲಿ ಸೋಂಕಿತರು

ಬೆಂಗಳೂರು : ರಾಜ್ಯದಲ್ಲಿ ಕೊರೊನಾ‌ ಸೋಂಕು ಆರ್ಭಟಿಸುತ್ತಿದೆ. ರಾಜ್ಯದಲ್ಲಿಂದು ಒಂದೇ ದಿನ ಬರೋಬ್ಬರಿ 6,976 ಜನರಿಗೆ ಕೊರೊನಾ ಸೋಂಕು ತಗುಲಿರುವುದು ಧೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 10,33,560 ಕ್ಕೆ ಏರಿಕೆಯಾಗಿದೆ.

ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಕೊರೊನಾ ಸ್ಪೋಟ ಸಂಭವಿಸಿದೆ. ಬೆಂಗಳೂರಲ್ಲಿಯೇ ಇಂದು ಬರೋಬ್ಬರಿ 4,991ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸಕ್ರೀಯ ಪ್ರಕರಣಗಳ ಸಂಖ್ಯೆ 35,789ಕ್ಕೆ ಏರಿಕೆಯಾಗಿದೆ.

ಬೆಂಗಳೂರು ಮಾತ್ರವಲ್ಲದೇ ಮೈಸೂರು, ಬೀದರ್, ಕಲಬಿರಗಿ, ತುಮಕೂರಿನಲ್ಲಿ ದ್ಚಿಶತಕ ಬಾರಿಸಿದ್ರೆ, ದಕ್ಷಿಣ ಕನ್ನಡ, ಬೆಳಗಾವಿಯಲ್ಲಿ ಶತಕ ದಾಖಲಾಗಿದೆ. ಉಡುಪಿ ಸೇರಿದಂತೆ ರಾಜ್ಯ ಬಹುತೇಕ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗಿದೆ.

ರಾಜ್ಯದಲ್ಲಿ ಒಟ್ಟು 49,254 ಸಕ್ರಿಯ ಪ್ರಕರಣಗಳಿದ್ದು, 353 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಒಂದೇ ದಿನ 35 ಜನ ಸೋಂಕಿತರು ಮೃತ ಪಟ್ಟಿದ್ದು, ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 12,731ಕ್ಕೆ‌ ಏರಿಕೆಯಾಗಿದೆ.

Comments are closed.