ನಿತ್ಯಭವಿಷ್ಯ : 08-04-2021

ಮೇಷರಾಶಿ
ಹೊಸ ಕಾರ್ಯಗಳ ಆರಂಭ ಬೇಡ, ವಿದ್ಯಾರ್ಥಿಗಳಿಗೆ ಅನುಕೂಲ, ಉದ್ವೇಗದಿಂದ ಕ್ಷುಲ್ಲಕ ವಿಚಾರಗಳು ತೋರಿಬಂದು ಅಸಮಾಧಾನ ಹೊಂದುವಿರಿ. ವ್ಯಾಪಾರ, ವ್ಯವಹಾರದ ಚಿಂತೆ ಬೇಡ.

ವೃಷಭರಾಶಿ
ವ್ಯಾಪಾರ, ವ್ಯವಹಾರಗಳಲ್ಲಿ ಪ್ರಗತಿ, ಸಾಂಸಾರಿಕವಾಗಿ ನೆಮ್ಮದಿ, ಧನಾತ್ಮಕವಾಗಿ ಚಿಂತಿಸಿ, ಮನೆಯಲ್ಲಿ ಅನುಕೂಲಕರ ಸ್ಥಿತಿ, ಮೇಲಾಧಿಕಾರಿಗಳಿಂದ ಪ್ರಶಂಸೆ.

ಮಿಥುನರಾಶಿ
ಖರ್ಚು ಅಧಿಕವಾದರೂ ಧನಾಗಮನಕ್ಕೆ ಕೊರತೆ ಯಿರದು, ವಿದ್ಯಾರ್ಥಿಗಳ ಮನೋಕಾಮನೆಗಳು ಪೂರ್ಣಗೊಳ್ಳಲಿದೆ, ಕಠಿಣ ಪ್ರಯತ್ನದಿಂದ ಯಶಸ್ಸು.

ಕರ್ಕಾಟಕರಾಶಿ
ಆತ್ಮವಿಶ್ವಾಸ, ಪ್ರಯತ್ನಬಲದಿಂದ ವ್ಯವಹಾರದಲ್ಲಿ ಯಶಸ್ಸು, ಮನೆಯಲ್ಲಿ ಶುಭಮಂಗಲ ಮಾತುಕತೆ, ಆರೋಗ್ಯದ ಬಗ್ಗೆ ಕಾಳಜಿಯಿರಲಿ. ದೂರ ಪ್ರಯಾಣ ಸಾಧ್ಯತೆ.

ಸಿಂಹರಾಶಿ
ವ್ಯವಹಾರ ಕ್ಷೇತ್ರದ ಕಡೆಗೆ ಹೆಚ್ಚಿನ ಗಮನ ಹರಿಸಿ, ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ, ಹಿತ ಶತ್ರುಗಳ ಬಗ್ಗೆ ಎಚ್ಚರವಿರಲಿ,‌ ಶುಭದಿನ.

ಕನ್ಯಾರಾಶಿ
ಆರ್ಥಿಕ ಹಿನ್ನಡೆ, ತಾಳ್ಮೆ ಸಹನೆಯಿಂದ ಕಾರ್ಯಕ್ಷೇತ್ರ ದಲ್ಲಿ ಮುನ್ನಡೆಗೆ ಕಾರಣವಾಗಲಿದೆ, ಆರ್ಥಿಕ ಋಣಭಾದೆಯು ಕಾಡಲಿದೆ. ವಿಚಾರವೊಂದು ಬಹಿರಂಗಗೊಂಡು ರಾದ್ಧಾಂತವಾದೀತು.

ತುಲಾರಾಶಿ
ರಾಜಕಾರಣಿಗಳಿಗೆ ಉನ್ನತ ಸ್ಥಾನಮಾನ  ಲಭ್ಯ. ವ್ಯಾಪಾರಿ ವರ್ಗದವರಿಗೆ ಚೇತರಿಕೆಯ ದಿನ. ಪಿತ್ತ ವಾಯುಪ್ರಕೋಪದಿಂದ ಅನಾರೋಗ್ಯ ಕಾಡಬಹುದು. ಸ್ವತಃ ಉದ್ಯೋಗಿಗಳಿಗೆ ಎಚ್ಚರಿಕೆ ಅಗತ್ಯ.

ವೃಶ್ಚಿಕರಾಶಿ
ಆಕಸ್ಮಿಕ ಧನಾನುಕೂಲ, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ. ಅನಿರೀಕ್ಷಿತ ಕಾರ್ಯಸಾಧನೆ ಯಿಂದ ಅಚ್ಚರಿ ತರಲಿದೆ. ಅವಿವಾಹಿತರಿಗೆ ಕಂಕಣಬಲ ಕೂಡಿಬರಲಿದೆ.

ಧನುರಾಶಿ
ಪ್ರಯತ್ನಬಲ, ಕಠಿಣ ಶ್ರಮ ನಿಮ್ಮನ್ನು ಗುರಿಯತ್ತ ಸಾಗಿಸಲಿದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಅವಕಾಶಗಳು ಮುನ್ನಡೆಗೆ ಸಾಧಕವಾಗುತ್ತದೆ. ಆರೋಗ್ಯದಲ್ಲಿ ಚೇತರಿಕೆ.

ಮಕರರಾಶಿ
ಆರೋಗ್ಯದ‌ ಬಗ್ಗೆ ಜಾಗೃತೆವಹಿಸಿ, ಉದ್ಯೋಗದಲ್ಲಿ ಎಡರುತೊಡರು ಕಂಡುಬಂದೀತು. ಶ್ರಮವಹಿಸಿ ದುಡಿಯುತ್ತಿರುವ ನಿಮಗೆ ಉತ್ತಮ ಫ‌ಲಗಳು ಗೋಚರಕ್ಕೆ ಬರುತ್ತವೆ. .

ಕುಂಭರಾಶಿ
ಸಾಂಸಾರಿಕವಾಗಿ ಅನಿರೀಕ್ಷಿತ ಬೆಳವಣಿಗೆ ಸಮಾಧಾನವನ್ನು ತರಲಿದೆ, ಅತಿಥಿಗಳ ಆಗಮನದಿಂದ ಸಂತಸ, ಸ್ನೇಹಿತರ ಸಹಕಾರ.  ಮನಸಿಗೆ ಸಮಾಧಾನ ದೊರೆಯಲಿದೆ.

ಮೀನರಾಶಿ
ಆರ್ಥಿಕವಾಗಿ ಅಭಿವೃದ್ಧಿ ಕಂಡುಬರುವುದು. ಅಧಿಕ ಖರ್ಚು,‌ ಅವಿವಾಹಿತರ ಮನೋಕಾಮನೆಗಳು ಪೂರ್ಣವಾದೀತು. ಕೆಲವೊಂದು ವಿಚಾರಗಳು ನಿಮ್ಮ ಮಾನಸಿಕ ಸ್ಥಿತಿಯನ್ನು ಕೆಡಿಸಲಿದೆ. ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ.

Comments are closed.