ಮಕ್ಕಳಿಗೂ ಕೊರೊನಾ ಲಸಿಕೆ :ಮಾರುಕಟ್ಟೆಗೆ ಯಾವಾಗ ಬರುತ್ತೆ ಗೊತ್ತಾ..?

ನವದೆಹಲಿ : ಭಾರತ ಕೊರೊನಾ ಸೋಂಕಿನ ಎರಡನೇ‌ ಅಲೆ ಯಿಂದಾಗಿ ತತ್ತರಿಸಿ ಹೋಗಿದೆ. ಈಗಾಗಲೇ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ಈ‌ ನಡುವಲ್ಲೇ ಮಕ್ಕಳಿಗೆ ಲಸಿಕೆ ಸದ್ಯದಲ್ಲಿ ಯೇ ಮಾರುಕಟ್ಟೆ ಪ್ರವೇಶಿಲಿದ್ದು, ಸಂಶೋಧನೆ ನಡೆಯುತ್ತಿದೆ.

ಕಳೆದೊಂದು ತಿಂಗಳಿನಿಂದಲೂ ದೇಶದಲ್ಲಿ ಹಂತ ಹಂತವಾಗಿ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಕನಿಷ್ಟ ಪಕ್ಷ 45 ವರ್ಷ ಮೇಲ್ಪಟ್ಟ ಬಹುತೇಕರು ಲಸಿಕೆ ಪಡೆದಿರುತ್ತಿದ್ರೆ ಎರಡನೆ ಅಲೆ ಈ ಮಟ್ಟಿಗೆ ಅಬ್ಬರಿಸುತ್ತಿರಲಿಲ್ಲ.ಮುಂದಿನ ದಿನಗಳಲ್ಲಿ ಬರುವ ಕೊರೋನಾ ರೂಪಾಂತರಿ ವೈರಸ್ ಮತ್ತೇನೂ ಹಾನಿ ಮಾಡುತ್ತದೋ ಗೊತ್ತಿಲ್ಲ. ಮೊದಲ ಅಲೆಯಲ್ಲಿ ಹಿರಿಯರು ಹಾಗೂ ಬೇರೆ ಕಾಯಿಲೆಗಳಿಂದ ಬಳಲುತ್ತಿದ್ದವರು ಪ್ರಾಣ ಕಳೆದುಕೊಂಡಿದ್ದರು. ಎರಡನೆ ಅಲೆಯಲ್ಲಿ ಗಟ್ಟಿ ಮುಟ್ಟಾಗಿರುವ ಯುವಕರೇ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮುಂದೆ ಬರಲಿರುವ ಮೂರನೇ ಅಲೆ ಅದ್ಯಾವ ಸಮಸ್ಯೆ ಸೃಷ್ಟಿಸುತ್ತದೋ ಗೊತ್ತಿಲ್ಲ. ವಿಜ್ಞಾನಿಗಳ ಪ್ರಕಾರ ಮುಂದಿನ ಅಲೆಗಳು ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿದೆ.

ಹೀಗಾಗಿ ಮಕ್ಕಳಿಗೂ ಕೊರೋನಾ ಲಸಿಕೆ ನೀಡಲು ಸಂಶೋಧನಾ ಸಂಸ್ಥೆಗಳು ಮುಂದೆ ಬಂದಿವೆ. ಈ ನಿಟ್ಟಿನಲ್ಲಿ ಈಗಾಗಲೇ ಕ್ಲಿನಿಕಲ್ ಟ್ರಯಲ್ ನಡೆದಿದ್ದು ಕೆಲವೇ ತಿಂಗಳಲ್ಲಿ 12 ರಿಂದ 18 ವಯಸ್ಸಿನವರಿಗೆ ಲಸಿಕೆ ವಿತರಣೆ ಪ್ರಾರಂಭವಾಗುವ ಸಾಧ್ಯತೆಗಳಿದೆ. ಇದಕ್ಕೆ ಪೂರಕ ಅನ್ನುವಂತೆ  12 ರಿಂದ 15 ವರ್ಷ ವಯಸ್ಸಿನವರಿಗೂ ಕೋವಿಡ್ ಲಸಿಕೆ ನೀಡಲು ಅನುಮತಿ ನೀಡುವಂತೆ ಫೈಜರ್-ಬಯೊಎನ್‌ಟೆಕ್ ಕಂಪನಿಯು ಯುರೋಪ್‌ ಒಕ್ಕೂಟದ ಔಷಧ ನಿಯಂತ್ರಕರಿಗೆ ಮನವಿ ಮಾಡಿದೆ.

ಶಾಲೆಗೆ ಹೋಗುವ ಮಕ್ಕಳಿಗೆ, 12 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ಹಾಕುವುದು ಅತ್ಯಂತ ಮುಖ್ಯವಾಗಿದೆ ಎಂದು ಹೇಳಿದೆ. ಈ ಸಂಬಂಧ ಅನುಮೋದನೆಗಾಗಿ ಯುಎಸ್‌ಎಫ್‌ಡಿಎ, ಯುರೋಪಿಯನ್ ನಿಯಂತ್ರಕರಿಗೆ ವರದಿ ಸಲ್ಲಿಸಲಾಗಿದೆ ಎಂದು ಫಿಜರ್ ಸಿಇಓ ಎರ್ಲಾಬ್ ಬೌರ್ಲಾ ಹೇಳಿದ್ದಾರೆ. 

2,000ಕ್ಕೂ ಹೆಚ್ಚು ಮಂದಿ ಹದಿಹರೆಯದವರ ಮೇಲೆ ನಡೆಸಿದ ಮಾರುಕಟ್ಟೆಗಿ ಲಸಿಕೆಯು ಸುರಕ್ಷಿತ ಮತ್ತು ಪರಿಣಾಮಕಾರಿ ಎಂಬುದು ಕಂಡು ಬಂದಿದೆ. ಲಸಿಕೆ ನೀಡಿಕೆಯಿಂದ ಮಕ್ಕಳಿಗೆ ಎರಡು ವರ್ಷಗಳ ವರೆಗಿನ ಮಕ್ಕಳಲ್ಲಿ ಕೊರೋನಾ ತಡೆಗಟ್ಟಲು ಈ ಲಸಿಕೆ 12-15 ವರ್ಷ ವಯಸ್ಸಿನ ಮಕ್ಕಳಲ್ಲಿ  ಶೇ 100ರಷ್ಟು ಪರಿಣಾಮಕಾರಿ ಎಂದು ಹೇಳಲಾಗಿದೆ. ಮತ್ತೊಂದು ಕಡೆ ಅಮೆರಿಕಾ ಕಂಪನಿ ಮಾಡರ್ನಾ ಕೂಡ ಮಕ್ಕಳಿಗೆ ಕೊರೋನಾ ಲಸಿಕೆ ನೀಡುವ ಕುರಿತಂತೆ ಸಂಶೋಧನೆ ನಡೆಸುತ್ತಿದೆ. ಅಸ್ಟ್ರಾಜೆನಿಕಾ ಕೂಡಾ 6-17 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ತಯಾರಿಸಲು ಕಳೆದ ತಿಂಗಳು ಸಂಶೋಧನೆ ಆರಂಭಿಸಿದೆ.

ಅಷ್ಟು ಮಾತ್ರವಲ್ಲದೆ ದೇಶಿ ಕೊರೋನಾ ಲಸಿಕೆ ನಿರ್ಮಿಸಿದ ಖ್ಯಾತಿಗೆ ಪಾತ್ರವಾಗಿರು ಭಾರತ್ ಬಯೋ ಟೆಕ್ ಕೂಡಾ ಮಕ್ಕಳಿಗೆ ಕೊರೋನಾ ಲಸಿಕೆ ನೀಡುವಂತೆ ಸಂಶೋಧನೆ ನಡೆಸುತ್ತಿದೆ. ಈಗಾಗಲೇ ಸಂಶೋಧನೆ ಬಹುತೇಕ ಪೂರ್ಣಗೊಂಡಿದ್ದು ಅಂದುಕೊಂಡಂತೆ ನಡೆದರೆ ಶೀಘ್ರದಲ್ಲಿಯೇ ಕೋವ್ಯಾಕ್ಸಿನ್ ಮಕ್ಕಳಿಗೂ ದೊರೆಯಲಿದೆ.

Comments are closed.