ಭಾರತಕ್ಕೆ ಹೋಗಿ ಬಂದ್ರೇ 5 ವರ್ಷ ಜೈಲು…!ಕರೋನಾ ನಿಯಂತ್ರಣಕ್ಕೆ ಆಸ್ಟ್ರೇಲಿಯಾ ಪ್ರಕಟಿಸಿದೆ ಕಠಿಣ ನೀತಿ…!!

ಕೊರೋನಾ ಎರಡನೇ ಅಲೆಗೆ ವಿಶ್ವವೇ ನಡುಗಿ ಹೋಗಿದೆ. ಅದರಲ್ಲೂ ಭಾರತದಲ್ಲಿ ಕೊರೋನಾ ಮರಣ ಮೃದಂಗ ಬಾರಿಸುತ್ತಿದೆ. ಹೀಗಾಗಿ ವಿಶ್ವದ ಎಲ್ಲ ರಾಷ್ಟ್ರಗಳು ಭಾರತದೊಂದಿಗೆ ವೈಮಾನಿಕ ಸಂಬಂಧವನ್ನೇ ಕಡಿದುಕೊಂಡಿದ್ದು, ಭಾರತಕ್ಕೆ ತೆರಳದಂತೆ ನಾಗರಿಕರಿಗೆ ಸೂಚಿಸಿದೆ. ಈ ಮಧ್ಯೆ ಭಾರತದಿಂದ ಬಂದವರಿಗೆ ಕನಿಷ್ಟ 5 ವರ್ಷ ಜೈಲು ಶಿಕ್ಷೆ ವಿಧಿಸುವುದಾಗಿ ಆಸ್ಟ್ರೆಲಿಯಾ ಎಚ್ಚರಿಸಿದೆ.

ಭಾರತದಲ್ಲಿ ಕೊರೋನಾ ಉಲ್ಬಣಿಸುತ್ತಿದೆ. ಹೀಗಾಗಿ ಭಾರತದೊಂದಿಗೆ ಆಸ್ಟ್ರೇಲಿಯಾ 3 ವಾರದ ಹಿಂದೆಯೇ ವಿಮಾನಸೇವೆಯನ್ನು ಕಡಿದುಕೊಂಡಿದೆ. ಈಗ ನೇರ ವಿಮಾನ ರದ್ದುಗೊಂಡಿರೋದರಿಂದ ಪ್ರಯಾಣಿಕರು ಲಂಡನ್ ಸೇರಿದಂತೆ ಹಲವು ಮಾರ್ಗಗಳಿಂದ ಆಸ್ಟ್ರೇಲಿಯಾ ತಲುಪುತ್ತಿದ್ದಾರೆ.

ಇದನ್ನು ನಿಯಂತ್ರಿಸಲು ಆಸ್ಟ್ರೇಲಿಯಾ ಆಡಳಿತ  5 ವರ್ಷಗಳ ಶಿಕ್ಷೆ ಘೋಷಿಸಿದೆ. ಭಾರತದಿಂದ ಆಗಮಿಸುವವರಿಗೆ ಹಾಗೂ 14 ದಿನಗಳಲ್ಲಿ ಭಾರತಕ್ಕೆ ಭೇಟಿ ನೀಡಿ ಬಂದವರಿಗೆ 5 ವರ್ಷ ಜೈಲು ಶಿಕ್ಷೆ ಹಾಗ 66 ಸಾವಿರ ಡಾಲರ್ ದಂಡ ವಿಧಿಸುವುದಾಗಿ ಆಸ್ಟ್ರೇಲಿಯಾ ಸರ್ಕಾರ ಘೋಷಿಸಿದೆ.

ಆಸ್ಟ್ರೆಲಿಯಾ ಸರ್ಕಾರದ ನಿಯಮ ಉಲ್ಲಂಘಿಸಿ ಕಳ್ಳದಾರಿ ಹಿಡಿದು ದೇಶಕ್ಕೆ ಬರುತ್ತಿರುವವರ ವಿರುದ್ಧ ಸರ್ಕಾರ ಕೆಂಗಣ್ಣು ಬೀರಿದೆ. ಹೀಗಾಗಿ ಕಠಿಣ ಶಿಕ್ಷೆ ಪ್ರಕಟಿಸಿದೆ. 14 ದಿನಗಳಲ್ಲಿ ಭಾರತ ಭೇಟಿ ನೀಡಿದ ಪ್ರಯಾಣಿಕರನ್ನು ಪತ್ತೆಹಚ್ಚಲು ನಿಯಮ ರೂಪಿಸಿದೆ.

ಕೇವಲ ಆಸ್ಟ್ರೇಲಿಯಾ ಮಾತ್ರವಲ್ಲದೇ ಜಪಾನ್,ಜರ್ಮನಿ,ಯುಎಸ್ಎ ರಾಷ್ಟ್ರಗಳು ಭಾರತಕ್ಕೆ ವಿಮಾನ ಸೇವೆ ರದ್ದುಗೊಳಿಸಿದೆ.

Comments are closed.