Danger Panu Puri : ಜಾತ್ರೆಯಲ್ಲಿ ಪಾನಿಪೂರಿ ತಿಂದು 97 ಮಕ್ಕಳು ಅಸ್ವಸ್ಥ

ಭೋಪಾಲ್ : ಜಾತ್ರೆಯಲ್ಲಿ ಪಾನಿಪೂರಿ ತಿಂದು (Danger Panu Puri ) 97 ಕ್ಕೂ ಅಧಿಕ ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಮಧ್ಯಪ್ರದೇಶದ ಮಂಡ್ಲಾ ಜಿಲ್ಲೆಯಲ್ಲಿ ನಡೆದಿದೆ. ಎಲ್ಲಾ ಮಕ್ಕಳನ್ನು ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಅಸ್ವಸ್ಥಗೊಂಡಿರುವ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಜಿಲ್ಲಾ ಕೇಂದ್ರದಿಂದ 38 ಕಿಲೋಮೀಟರ್ ದೂರದಲ್ಲಿರುವ ಬುಡಕಟ್ಟು ಜನಾಂಗದ ಪ್ರಾಬಲ್ಯದ ಸಿಂಗರ್‌ಪುರ ಪ್ರದೇಶದಲ್ಲಿ ನಿನ್ನೆ ಜಾತ್ರೆ ನಡೆದಿತ್ತು. ಜಾತ್ರೆಯಲ್ಲಿ ಅಂಗಡಿ ಯೊಂದರಿಂದ ಪಾನಿಪೂರಿ ಸೇರಿದಂತೆ ಮಸಾಲೆಯುಕ್ತ ತಿಂಡಿಗಳನ್ನು ಖರೀದಿಸಿದ್ದರು. ಪಾನಿಪೂರಿ (Panu Puri ) ಸೇವನೆ ಮಾಡಿದ ನಂತರದಲ್ಲಿ ಮಕ್ಕಳಿಗೆ ವಾಂತಿ, ಹೊಟ್ಟೆ ನೋವು ಕಾಣಿಸಿಕೊಂಡಿದೆ. ಕೂಡಲೇ ಎಲ್ಲಾ ಮಕ್ಕಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗಿದೆ ಎಂದು ಜಿಲ್ಲಾಸ್ಪತ್ರೆಯ ಸಿವಿಲ್ ಸರ್ಜನ್ ಡಾ.ಕೆ.ಆರ್.ಶಾಕ್ಯಾ ತಿಳಿಸಿದ್ದಾರೆ.

ಘಟನೆ ನಡೆಯುತ್ತಿದ್ದಂತೆಯೇ ಗ್ರಾಮಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ. ಮಕ್ಕಳು ಸೇವನೆ ಮಾಡಿರುವ ಆಹಾರದ ಸ್ಯಾಂಪಲ್‌ ಪಡೆಯಲಾಗಿದ್ದು, ಲ್ಯಾಬ್‌ಗೆ ಕಳುಹಿಸಿಕೊಟ್ಟಿದ್ದಾರೆ. ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪಾನಿಪೂರಿ ಮಾರಾಟಗಾರನನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಹೆಚ್ಚಿನ ಕ್ರೈಂ ಸುದ್ದಿಯನ್ನು ಓದಲು ಇಲ್ಲಿ CLICK ಮಾಡಿ

ಇನ್ನು ಮಂಡ್ಲಾದ ಸಂಸದ ಫಗ್ಗನ್ ಸಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ವೈದ್ಯಾಧಿಕಾರಿಗಳು ಮಕ್ಕಳ ಆರೊಗ್ಯದ ಬಗ್ಗೆ ಯಾವುದೇ ಚಿಂತೆ ಮಾಡುವ ಅಗತ್ಯವಿಲ್ಲ ಎಂದಿದ್ದಾರೆ.

ಇದನ್ನೂ ಓದಿ : ಶಿಲ್ಪಾ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ : ಸಾವಿನ ಹಿಂದೆ ಲವ್‌ ಜಿಹಾದ್‌ ಆರೋಪ

ಇದನ್ನೂ ಓದಿ : LPG Cylinder Subsidy : ಎಲ್​ಪಿಜಿ ಸಿಲಿಂಡರ್​ಗೆ ಸಿಗಲಿದೆ 200 ರೂ.ಸಬ್ಸಿಡಿ : ಇಲ್ಲಿದೆ ನೋಡಿ ಹೆಚ್ಚಿನ ಮಾಹಿತಿ

Danger Panu puri : 97 children get sick after eating Pani Puri in Madhya Pradesh

Comments are closed.