B Y Vijayendra : ಬಿಜೆಪಿಗೆ ಟಾಂಗ್ ಕೊಟ್ಟ ಬಿ.ವೈ.ವಿಜಯೇಂದ್ರ : ಯಡಿಯೂರಪ್ಪ ಹಾದಿ ಹಿಡಿಯುತ್ತಾರಾ ಪುತ್ರ

ಬೆಂಗಳೂರು : ಕಾಂಗ್ರೆಸ್ ನ ಜೊತೆಗೆ ಬಿಜೆಪಿಯಲ್ಲೂ ವಿಧಾನಪರಿಷತ್ ಸ್ಥಾನ ಕೈತಪ್ಪಿದ ಅಸಮಧಾನ ನಿಧಾನಕ್ಕೆ ಹೊಗೆಯಾಡಲಾರಂಭಿಸಿದೆ. ತಮಗೆ ವಿಧಾನಪರಿಷತ್ ಸ್ಥಾನ ಕೈ ತಪ್ಪಿದ್ದಕ್ಕೇ ಪರೋಕ್ಷವಾಗಿ ಅಸಮಧಾನ ತೋರಿಸಿಕೊಂಡಿರೋ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ (B Y Vijayendra), ಹಾಸನದಲ್ಲಿ ನಡೆದ ಸಮಾರಂಭದಲ್ಲಿ ಪಕ್ಕಾ ರಾಜಕೀಯ ಭಾಷಣ ಮಾಡಿದ್ದು, ಪರೋಕ್ಷವಾಗಿ ಬಿಜೆಪಿ ಬಿ.ಎಸ್.ಯಡಿಯೂರಪ್ಪ (Yeddyurappa ) ಬಿಟ್ಟು ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಅಷ್ಟೇ ಅಲ್ಲ ಬಿಎಸ್ವೈ ವಿರುದ್ಧದ ಷಡ್ಯಂತ್ರಗಳಿಗೆ ಹೆದರೋದಿಲ್ಲ ಎಂಬರ್ಥದಲ್ಲಿ ಮಾತನಾಡಿದ್ದಾರೆ.

ಬಿ.ಎಸ್.ಯಡಿಯೂರಪ್ಪ ಹಾದಿ ತುಂಬ ಜನರು ಕಲ್ಲೇಸೆದರು. ಆದರೆ ಯಡಿಯೂರಪ್ಪನವರು (Yeddyurappa ) ಆ ಕಲ್ಲುಗಳನ್ನೇ ಹಾದಿ ಮಾಡಿಕೊಂಡು ಬೆಳೆದು ಬಂದರು. ಹುಲಿಯನ್ನು ಬೋನ್ ನಲ್ಲಿ ಹಾಕಿದ ಮಾತ್ರಕ್ಕೆ ಅದು ಹುಲ್ಲು ತಿನ್ನೋದಿಲ್ಲ. ಹುಲಿ ಬೋನಿನಿಂದ ಹೊರಗಿದ್ದಾಗ ಏನು ತಿನ್ನುತ್ತಿತ್ತೋ ಅದನ್ನೇ ತಿನ್ನುತ್ತೆ ಎನ್ನುವ ಮೂಲಕ ಬಿ.ಎಸ್.ಯಡಿಯೂರಪ್ಪ ಶಕ್ತಿ ಸಾಮರ್ಥ್ಯವನ್ನು ಮರೆಯಬೇಡಿ ಎಂದು ಬಿಜೆಪಿಗೆ ಎಚ್ಚರಿಸುವಂತೆ ಮಾತನಾಡಿದ್ದಾರೆ.

ಹಾಸನದ ಹೊಳೆನರಸೀಪುರದಲ್ಲಿ ನಡೆದ ಶ್ರೀ ಶಿವಕುಮಾರ ಸ್ವಾಮೀಜಿಗಳ 115 ನೇ ಜಯಂತ್ಯುತ್ಸವದಲ್ಲಿ ಮಾತನಾಡಿದ ಬಿವೈ ವಿಜಯೇಂದ್ರ ಕಾರ್ಯಕ್ರಮದಲ್ಲಿ ನೆರೆದ ಲಿಂಗಾಯಿತ ಮತಗಳನ್ನು ಸೆಳೆಯುವಂತೆ ಮಾತನಾಡಿದ ಬಿ.ವೈ.ವಿಜಯೇಂದ್ರ, ನಮ್ಮ ಪೂಜ್ಯ ತಂದೆಯವರು, ರಾಜ್ಯದ ಮುಖ್ಯಮಂತ್ರಿ ಆಗಬೇಕೆಂದು ಯಾವತ್ತೂ ಕೂಡ ಹೋರಾಟ ಮಾಡಲಿಲ್ಲ. ರೈತರು, ದಲಿತ, ಹಿಂದುಳಿದ ವರ್ಗದವರು ಎಲ್ಲಿ ಕಣ್ಣೀರು ಹಾಕುತ್ತಿದ್ದರು ಅಲ್ಲಿ ಯಡಿಯೂರಪ್ಪ ಅವರು ಇರ್ತಿದ್ರು. ಅದೆಷ್ಟೋ ಪಾದಯಾತ್ರೆ, ಜೀತದಾಳು ಪದ್ಧತಿ ವಿರುದ್ಧ ಹೋರಾಟಗಳನ್ನು ಮಾಡಿದ್ದಾರೆ. ವಿಧಾನಸಭೆಯಲ್ಲಿ ಜೀತಪದ್ಧತಿ ವಿರುದ್ಧ ಕಾನೂನು ಮಂಡನೆ ಮಾಡ್ತಾರೆ, ಅದು ರಾಚಯ್ಯನವರು ಇರುವ ಸಂದರ್ಭ ಯಡಿಯೂರಪ್ಪ ಅವರು ಅಂದು ವಿಧಾನಸಭೆಯಲ್ಲಿ ಮಾಡಿದ ಭಾಷಣ ಕೇಳಿ ರಾಚಯ್ಯ ಅವರು ಕಣ್ಣೀರು ಹಾಕಿ ಆ ಕಾನೂನನ್ನು ಕಿತ್ತು ಹಾಕಿದ್ರುಯಡಿಯೂರಪ್ಪ ಅವರ ಬಗ್ಗೆ ನನಗೆ ಹೆಮ್ಮೆಯಿದೆ. ಯಡಿಯೂರಪ್ಪ ಅವರ ಮಗನಾಗಿ ಬಾಲ್ಯದಿಂದಲೇ ಅವರ ಹೋರಾಟಗಳನ್ನು ನೋಡಿಕೊಂಡು ಬಂದಿದ್ದೇನೆ ಎಂದಿದ್ದಾರೆ.

ಅಲ್ಲದೇ, ನಾಡಿನ ಎಲ್ಲಾ ವರ್ಗದ ಮಠಮಾನ್ಯಗಳ ಶ್ರೀಗಳ ಆಶೀರ್ವಾದದಿಂದ ಈ ರಾಜ್ಯದಲ್ಲಿ ನಾಲ್ಕು ಭಾರಿ ಮುಖ್ಯಮಂತ್ರಿಯಾದರು. ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯದಲ್ಲಿ ಯಾರೂ ಈ ರೀತಿ ಮಾಡಲಿಲ್ಲ, ರೈತರಿಗಾಗಿ ಪ್ರತ್ಯೇಕ ಬಜೆಟ್ ಮಂಡನೆ ಮಾಡಿದ್ರು. ಯಡಿಯೂರಪ್ಪ ಅವರು ರಾಜಕೀಯದಲ್ಲಿ ಬೆಳೆಯುತ್ತಾರೆ ಅಂತ ಹೇಳಿ ಇರುವ ರಸ್ತೆಯಲ್ಲೆಲ್ಲಾ ಕಲ್ಲು ಹೊಡೆಯುವ ಕೆಲಸ ಮಾಡಿದ್ರು. ಅದೇ ಕಲ್ಲನ್ನು ತೆಗೆದುಕೊಂಡು, ಅಡಿಪಾಯ ಹಾಕಿಕೊಂಡು ನಾಲ್ಕು ಭಾರಿ ಮುಖ್ಯಮಂತ್ರಿಯಾದರು ಅಂತಹ ಧೀಮಂತ ನಾಯಕನನ್ನು ನಾಡು ಕಂಡಿದ್ರೆ ಅದು ನಿಮ್ಮ ಯಡಿಯೂರಪ್ಪನವರು ಎಂದಿದ್ದಾರೆ.

ಈ ಎಲ್ಲ ವೀರಾವೇಶದಿಂದ ಭಾಷಣದ ಮೂಲಕ ವಿಜಯೇಂದ್ರ (B Y Vijayendra) ಬಿಜೆಪಿ ನಾಯಕರು ಹಾಗೂ ಹೈಕಮಾಂಡ್ ಗೆ ಪರೋಕ್ಷ ಎಚ್ಚರಿಕೆ ನೀಡಿದ್ದು, ಯಡಿಯೂರಪ್ಪ ನಿರ್ಲಕ್ಷಿಸಿದರೇ ಅಥವಾ ತಮಗೆ ಸ್ಥಾನಮಾನಗಳನ್ನು ನೀಡೋದ್ರಲ್ಲಿ ಗಮನ ಹರಿಸದಿದ್ದರೇ ಮತ್ತೊಮ್ಮೆ ಬಂಡಾಯ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದ್ದಾರೆ ಎಂಬ ಮಾತು ಬಿ.ಎಸ್.ಯಡಿಯೂರಪ್ಪ ಆಪ್ತ ವಲಯದಿಂದಲೇ ಕೇಳಿಬಂದಿದೆ.

ಇದನ್ನೂ ಓದಿ : Sruthi Hariharan : ಸಾಲು ಸಾಲು ಸಿನಿಮಾದಲ್ಲಿ ಶ್ರುತಿ ಹರಿಹರನ್ : ಲೂಸಿಯಾ ಚೆಲುವೆಯ ಗ್ರ್ಯಾಂಡ್ ಕಮ್ ಬ್ಯಾಕ್

ಇದನ್ನೂ ಓದಿ : ಅಭ್ಯರ್ಥಿಗಳ ಆಯ್ಕೆ ಅಸಮಧಾನ : ಡಿಕೆ ಶಿವಕುಮಾರ್‌ಗೆ ಬಂತು ಆಕ್ರೋಶದ ಪತ್ರ

B Y Vijayendra gives Counter to BJP : what next Step son of Yeddyurappa

Comments are closed.