ಕಾಂತಾರ ಸಿನಿಮಾ ಮೆಚ್ಚಿದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ : ನಟ ಚೇತನ್ ಹೇಳಿಕೆಗೆ ಪ್ರತಿಕ್ರಿಯೆ

ಮಂಗಳೂರು : Veerendra Heggade liked Kantara : ಕಾಂತಾರ ಸಿನಿಮಾದ ಕುರಿತು ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಈ ನಡುವಲ್ಲೇ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಮಂಗಳೂರಿನ ಚಿತ್ರಮಂದಿರದಲ್ಲಿ ಸಿನಿಮಾವನ್ನು ವೀಕ್ಷಿಸಿದ್ದಾರೆ. ಸಿನಿಮಾದ ಬಗ್ಗೆ ಸಾಕಷ್ಟು ಮೆಚ್ಚುಗೆಯ ಮಾತನಾಡಿರುವ ಹೆಗ್ಗಡೆ ಅವರು, ಕಾಂತಾರ ಸಿನಿಮಾದಲ್ಲಿ ವೃಷಭ್ ಶೆಟ್ಟಿ ದೈವಾರಾಧನೆಯನ್ನು ತುಂಬಾ ಚೆನ್ನಾಗಿ ತೋರಿಸಿದ್ದಾರೆ ಎಂದಿದ್ದಾರೆ. ಅಲ್ಲದೇ ನಟ ಚೇತನ್ ಹೇಳಿಕೆಗೂ ಪ್ರತಿಕ್ರಿಯಿಸಿದ್ದಾರೆ.

ಕುಟುಂಬ ಸಮೇತರಾಗಿ ಮಂಗಳೂರಿನ ಚಿತ್ರ ಮಂದಿರದಲ್ಲಿ ವೀರೇಂದ್ರ ಹೆಗ್ಗಡೆ ಅವರು ಕಾಂತಾರ ಸಿನಿಮಾ ವೀಕ್ಷಿಸಿದ್ದಾರೆ. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೈವಾರಾಧನೆ ಹಿಂದೂ ಧರ್ಮದ ಭಾಗ ಹೌದಾ, ಅಲ್ವಾ ಗೊತ್ತಿಲ್ಲ. ಆದರೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂಲ ಸ್ವಭಾವವನ್ನು ಅರಿಯದೇ ಮಾತನಾಡಿದರೆ ಬೇರೆಯಾಗುತ್ತದೆ. ಧರ್ಮದ ಮೂಲವನ್ನು ಹುಡುಕುತ್ತಾ ಹೋದರೆ ಅದು ಎಲ್ಲಿಯೂ ಸಿಗೋದಿಲ್ಲ. ನಂಬಿಕೆ ಆಚರಣೆ, ನಡವಳಿಕೆ ಸ್ವಾಭಾವಿಕವಾಗಿ ಬೆಳೆದು ಬಂದಿದೆ. ನಾವು ಅವುಗಳನ್ನು ಬಿಟ್ಟು ಇರೋದಕ್ಕೆ ಸಾಧ್ಯವೇ ಇಲ್ಲಾ. ನಟ ಚೇತನ್ ಅವರು ಹಿಂದೂ ಧರ್ಮದ ಯಾವ ಸೂಕ್ಷ್ಮತೆಯನ್ನು ಹೋಗಿ ನೋಡಿದ್ದಾರೆ ಗೊತ್ತಿಲ್ಲ ಎಂದಿದ್ದಾರೆ.

ದೈವಾರಾಧನೆಯನ್ನು ಇಂದಿಗೂ ಮಾಡುತ್ತಿದ್ದೇವೆ. ದೈವದ ನುಡಿಗೆ ಗೌರವ ಕೊಡುತ್ತೇವೆ. ದೈವ ಮೈ ಮೇಲೆ ಬಂದಾಗ ಮಾತಿಗೆ ಗೌರವ ಕೊಡುತ್ತೇವೆ. ಇದನ್ನು ಧರ್ಮಕ್ಕೆ, ಸೂಕ್ಷ್ಮಕ್ಕೆ ವಿಮರ್ಷೆ ಮಾಡುವ ಅಗತ್ಯವಿಲ್ಲ ಎಂದಿದ್ದಾರೆ. ಕಾಂತಾರ ಸಿನಿಮಾ ಯುವಕರಿಗೆ ಹೊಸ ಕಥೆಯ ಜೊತೆಗೆ ಹಳೆಯ ಸ್ಮರಣೆಯನ್ನು ಸಿನಿಮಾ ಮಾಡಿಸುತ್ತದೆ. ಸಿನಿಮಾದಲ್ಲಿ ಹೊಸ ದೃಷ್ಟಿಕೋನವಿದೆ. ಜಾತಿಬೇಧವನ್ನು ಮರೆತು ಸಹಬಾಳ್ವೆಯಿಂದ ಬಾಳಬೇಕು ಅನ್ನೋ ಸಂದೇಶ ಕಾಂತಾರ ಸಿನಿಮಾದ ಮೂಲಕ ನೀಡಲಾಗಿದೆ ಎಂದಿದ್ದಾರೆ.

ನಾನು ಇತ್ತೀಚಿನ ದಿನಗಳಲ್ಲಿ ಸಿನಿಮಾವನ್ನು ನೋಡಿರಲಿಲ್ಲ. ಆದ್ರೀಗ ಕಾಂತಾರ ನೋಡಿದ ಮೇಲೆ ಆ ಮೂಡ್ ನಿಂದ ಹೊರಗೆ ಬರಲು ಆಗುತ್ತಿಲ್ಲ. ಕಾಂತಾರ ಸಿನಿಮಾವನ್ನು ನೋಡಿ ಬಹಳ ಸಂತೋಷವಾಗಿದೆ. ಸಿನಿಮಾದಲ್ಲಿನ ಎಲ್ಲಾ ಕಲಾವಿದರಿಗೂ ನಾನು ಅಭಿನಂದನೆಯನ್ನು ಸಲ್ಲಿಸುತ್ತೇನೆ. ವೃಷಭ್ ಶೆಟ್ಟಿ ಹಾಗೂ ನಿರ್ಮಾಪಕರಿಗೂ ಅಭಿನಂದನೆ. ಸಿನಿಮಾದಲ್ಲಿ ತಂತ್ರಜ್ಞಾನವನ್ನು ತುಂಬಾ ಚೆನ್ನಾಗಿ ಬಳಸಿಕೊಂಡಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ : ಹೋಟೆಲ್ ಕೆಲಸ, ಬಿಸ್ಲೆರಿ ಮಾರಾಟ, ಕೈ ಕೊಟ್ಟ ಸಿನಿಮಾ : ಇದು ಕಾಂತಾರ ರಿಷಬ್ ಶೆಟ್ಟಿ ಜೀವನ ಸಾಧನೆ

ಇದನ್ನೂ ಓದಿ : kantara: ‘ಭೂತಕೋಲ ಎನ್ನುವುದು ಹಿಂದೂ ಸಂಸ್ಕೃತಿಯೇ ಅಲ್ಲ’ : ನಟ ಚೇತನ್​ ಹೊಸ ವಿವಾದ

Dharmasthala Veerendra Heggade liked Kantara movie Reaction to actor Chetan’s Controversy

Comments are closed.