BIG News: ಸರ್ಕಾರಿ ನೌಕರರಿಗೆ ವಾರದಲ್ಲಿ 2 ದಿನ Work From Home ಕಡ್ಡಾಯ

ಸರಕಾರ ಹೊರಡಿಸಿರುವ ಆದೇಶದ ಪ್ರಕಾರ, ತುರ್ತು ಸೇವೆಗಳಾದ ವೈದ್ಯಕೀಯ ಸೇವೆ, ಅಗ್ನಿಶಾಮಕ ದಳ, ಪೊಲೀಸ್‌ ಇಲಾಖೆ, ವಿದ್ಯುತ್‌ ಇಲಾಖೆ, ನೀರು ಸರಬರಾಜು ಇಲಾಖೆ ಹೊರತು ಪಡಿಸಿ ಉಳಿದ ಎಲ್ಲಾ ಇಲಾಖೆಯ ನೌಕರರಿಗೆ ವಾರದಲ್ಲಿ ಎರಡು ದಿನ ವರ್ಕ್‌ ಪ್ರಂ ಹೋಮ್‌ ಕಡ್ಡಾಯಗೊಳಿಸಲಾಗಿದೆ.

ನವದೆಹಲಿ : ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಬಾರೀ ಏರಿಕೆ ಕಾಣುತ್ತಿರುವ ಬೆನ್ನಲ್ಲೇ ರಾಜ್ಯ ಸರಕಾರಿ ನೌಕರರು ವಾರದಲ್ಲಿ 2 ದಿನ ಕಡ್ಡಾಯವಾಗಿ ಮನೆಯಿಂದಲೇ ಕೆಲಸ ಮಾಡುವಂತೆ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತ ಆದೇಶ ಹೊರಡಿಸಿದ್ದಾರೆ. ವಾಹನ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯದಲ್ಲಿಯೂ ಇಂತಹ ಆದೇಶ ಜಾರಿಯಾಗುವ ಸಾಧ್ಯತೆಯಿದೆ.

ಯಾರಿಗೆಲ್ಲಾ ವರ್ಕ್‌ ಫ್ರಂ ಹೋಮ್‌ (Work From Home) ಆದೇಶ ?

ಸದ್ಯ ಸರಕಾರ ಹೊರಡಿಸಿರುವ ಆದೇಶದ ಪ್ರಕಾರ, ತುರ್ತು ಸೇವೆಗಳಾದ ವೈದ್ಯಕೀಯ ಸೇವೆ, ಅಗ್ನಿಶಾಮಕ ದಳ, ಪೊಲೀಸ್‌ ಇಲಾಖೆ, ವಿದ್ಯುತ್‌ ಇಲಾಖೆ, ನೀರು ಸರಬರಾಜು ಇಲಾಖೆ ಹೊರತು ಪಡಿಸಿ ಉಳಿದ ಎಲ್ಲಾ ಇಲಾಖೆಯ ನೌಕರರಿಗೆ ವಾರದಲ್ಲಿ ಎರಡು ದಿನ ವರ್ಕ್‌ ಪ್ರಂ ಹೋಮ್‌ ಕಡ್ಡಾಯಗೊಳಿಸಲಾಗಿದೆ. ಸರಕಾರದ ಅಧಿಕೃತ ಸಭೆಗಳನ್ನು ಇನ್ಮುಂದೆ ಆನ್‌ಲೈನ್‌ ಮೂಲಕವೇ ನಡೆಸುವಂತೆ ಸೂಚಿಸಲಾಗಿದೆ.

ಖಾಸಗಿ ನೌಕರರ ವರ್ಕ್‌ ಫ್ರಂ ಹೋಮ್‌ಗೆ ಮಾರ್ಗಸೂಚಿ

ಐಟಿ ಸೇರಿದಂತೆ ಇತರೆ ಖಾಸಗಿ ಕಂಪೆನಿಗಳಿಗೆ ವಾರದಲ್ಲಿ 2 ದಿನಗಳ ಕಾಲ ವರ್ಕ್‌ ಫ್ರಂ ಹೋಮ್‌ ನೀಡುವಂತೆ ಕಾರ್ಮಿಕ ಇಲಾಖೆ ಮಾರ್ಗಸೂಚಿಯನ್ನು ಹೊರಡಿಸಿದೆ. ಐಟಿ ವಲಯ ಮಾತ್ರವಲ್ಲದೇ ಖಾಸಗಿ ಕಂಪೆನಿಗಳಿಗೂ ಕೂಡ ಇದೇ ಆದೇಶ ಜಾರಿಯಾಗುವ ಸಾಧ್ಯತೆಯಿದೆ.

Also Read : ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟ; ಮೂವರು ಸಾವು! 25 ಮಂದಿಗೆ ಗಂಭೀರ ಗಾಯ

ಸಚಿವರು, ಅಧಿಕಾರಿಗಳಿಗೆ ಕಡ್ಡಾಯ ಮೆಟ್ರೋ ರೈಲು

ತೈಲ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಜನ ಸಾಮಾನ್ಯರಿಗೆ ಮಾತ್ರವಲ್ಲ ದೆಹಲಿ ಸರಕಾರದ ಸಚಿವರು, ಹಿರಿಯ ಅಧಿಕಾರಿಗಳು ಪ್ರತೀ ಸೋಮವಾರದಂದು ಕಡ್ಡಾಯವಾಗಿ ಮೆಟ್ರೋ ಅಥವಾ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸುವಂತೆ ಸರಕಾರದ ಆದೇಶದಲ್ಲಿ ತಿಳಿಸಲಾಗಿದೆ. ಅಲ್ಲದೇ ಸರ್ಕಾರಿ ಅಧಿಕಾರಿಗಳ ಮಾಸಿಕ ಪೆಟ್ರೋಲ್ ಕೋಟಾದಲ್ಲಿಯೂ ಕಡಿತ ಮಾಡಲಾಗಿದ್ದಯ, ಶೇಕಡಾ 20 ರಷ್ಟು ಕಡಿತ ಮಾಡಲಾಗಿದೆ.

ಕರ್ನಾಟಕದಲ್ಲೂ 2 ದಿನ WFH ಆದೇಶ ಜಾರಿಯಾಗುತ್ತಾ ?

ದೆಹಲಿ ಸರಕಾರ ಸರಕಾರಿ ನೌಕರರಿಗೆ ವರ್ಕ್‌ ಫ್ರಂ ಹೋಂ ಆದೇಶ ಜಾರಿ ಮಾಡಿದ ಬೆನ್ನಲ್ಲೇ ಕರ್ನಾಟಕದಲ್ಲಿಯೂ ಕೂಡ ಇದೇ ರೀತಿಯ ಆದೇಶ ಜಾರಿಯಾಗಬಹುದು ಅನ್ನೋ ಚರ್ಚೆ ಸರಕಾರಿ ನೌಕರರ ವಲಯದಲ್ಲಿ ಜೋರಾಗಿದೆ.

Also Read : ಮತ್ತೆ ಏರಿದ ಹಾಲಿನ ಬೆಲೆ: ಅಮುಲ್‌ ಗ್ರಾಹಕರಿಗೆ ಶಾಕ್‌

ಬೆಂಗಳೂರಿನಲ್ಲಿ ಟ್ರಾಫಿಕ್‌ ಸಮಸ್ಯೆಯ ಜೊತೆಗೆ ಮಾಲಿನ್ಯ ತಡೆಯ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಸರಕಾರಿ ನೌಕರರಿಗೆ ವರ್ಕ್‌ ಫ್ರಂ ಹೋಮ್‌ ಜಾರಿ ಮಾಡಿದ್ರೆ ವಾಹನ ಸಮಸ್ಯೆಗೆ ಕಡಿವಾಣ ಬೀಳಲಿದೆ. ಜೊತೆಗೆ ಸರಕಾರಿ ವಾಹನಗಳ ವೆಚ್ಚವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿಯೂ ಹೆಚ್ಚು ಉಪಯುಕ್ತವಾಗಲಿದೆ. ಕಂದಾಯ, ನೋಂದಣಿ ಸೇರಿದಂತೆ ಸ್ಥಳೀಯವಾಗಿರುವ ಜನರಿಗೆ 2 ದಿನಗಳ ಕಾಲ ನೌಕರರು ಅಲಭ್ಯರಾದ್ರೆ ಆಡಳಿತಾತ್ಮಕವಾಗಿ ಸಮಸ್ಯೆಗಳು ಎದುರಾಗುವ ಸಾಧ್ಯತೆಯಿದೆ.

ಸದ್ಯದ ಪರಿಸ್ಥಿತಿಯಲ್ಲಿ ಕರ್ನಾಟಕ ಸರಕಾರದಿಂದ ಇಂತಹ ಯಾವುದೇ ಅಧಿಕೃತ ಆದೇಶ ಹೊರ ಬಿದ್ದಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಮನವಿಯ ಮೇರೆಗೆ ದೆಹಲಿ ಸರಕಾರ ಇಂತಹದೊಂದು ಆದೇಶವನ್ನು ಹೊರಡಿಸಿದೆ. ಉಳಿದ ರಾಜ್ಯಗಳು ಇದೇ ಸೂತ್ರವನ್ನು ಅನುಸರಿಸಿದ್ರೆ, ಕರ್ನಾಟಕದಲ್ಲಿಯೂ ಇಂತಹ ಆದೇಶ ಜಾರಿ ಆದ್ರೆ ಅಚ್ಚರಿಯಿಲ್ಲ.

delhi government employees 2 days work from home order

Anil Gundmi | ಅನಿಲ್‌ ಗುಂಡ್ಮಿ

ಅನಿಲ್‌ ಗುಂಡ್ಮಿ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡದಲ್ಲಿ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ಬಿಎಸ್ಸಿ ಪದವೀಧರರಾಗಿದ್ದು, ಪ್ರಚಲಿತ ವಿದ್ಯಾಮಾನ, ಕ್ರೀಡೆ, ಸಿನಿಮಾ, ದೇಶ, ವಿದೇಶಗಳ ಸುದ್ದಿಗಳ ಬರವಣೆಗೆಯಲ್ಲಿ ಹಿಡಿತಹೊಂದಿದ್ದಾರೆ. ಕಳೆದ ಐದು ವರ್ಷಗಳಿಂದಲೂ ನ್ಯೂಸ್‌ ನೆಕ್ಸ್ಟ್‌ ನಲ್ಲಿ ಕೆಲಸ ಮಾಡುತ್ತಿದ್ದಾರೆ.

Related Stories