Delhi Liquor Policy Scam: ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ತೆಲಂಗಾಣ ಸಿಎಂ ಪುತ್ರಿಗೆ ಇಡಿ ಶಾಕ್; ತನಿಖೆಗೆ ಸಿದ್ಧ ಎಂದ ಕೆ.ಕವಿತಾ

ನವದೆಹಲಿ: ದೆಹಲಿ ಸರ್ಕಾರದ ಅಬಕಾರಿ ನೀತಿ ಹಗರಣದಲ್ಲಿ (Delhi Liquor Policy Scam) ತೆಲಂಗಾಣ ಸಿಎಂ ಕೆ.ಚಂದ್ರೇಖರ್ ರಾವ್ ಅವರ ಪುತ್ರಿ, ಎಂಎಲ್ ಸಿ ಕೆ.ಕವಿತಾ ಹೆಸರು ತಳುಕು ಹಾಕಿಕೊಂಡಿದೆ. ಜಾರಿ ನಿರ್ದೇಶನಾಲಯವು ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಕವಿತಾ ಅವರ ಹೆಸರಿದ್ದು, 100 ಕೋಟಿ ರೂ. ಕಿಕ್ ಬ್ಯಾಕ್ ನಲ್ಲಿ ಅವರ ಪಾತ್ರವಿದೆ ಎಂದು ಹೇಳಿದೆ.

ಕವಿತಾ ಅವರು ತೆಲಂಗಾಣದ ವಿಧಾನಪರಿಷತ್ತಿನ ಸದಸ್ಯೆ ಕೂಡಾ ಆಗಿದ್ದಾರೆ. ಸದ್ಯ ಅವರಿಗೆ ಜಾರಿ ನಿರ್ದೇಶನಾಲಯವು ಶಾಕ್ ನೀಡಿದ್ದು, ದೆಹಲಿ ಸರ್ಕಾರದ ಅಬಕಾರಿ ನೀತಿ ಹಗರಣದಲ್ಲಿ ಕೆಸಿಆರ್ ಪುತ್ರಿ ಕವಿತಾ ಹೆಸರನ್ನು ಇಡಿ ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ.

ದೆಹಲಿ ಸರ್ಕಾರದ ಅಬಕಾರಿ ನೀತಿ ಹಗರಣದ ಪ್ರಮುಖ ಆರೋಪಿಯಾಗಿರುವ ವಿಜಯ್ ನಾಯರ್ ಅವರು ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಇಡಿ ಆರೋಪ ಮಾಡಿದೆ. ಅವರು ಈ ಪ್ರಕರಣದಲ್ಲಿ ಶರತ್ ರೆಡ್ಡಿ, ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಅವರ ಮಗಳು ಕೆ.ಕವಿತಾ ಮತ್ತು ಶ್ರೀನಿವಾಸುಲು ರೆಡ್ಡಿ ಅವರ ಒಡೆತನದ ಸೌತ್ ಗ್ರೂಪ್ ನಿಂದ 100 ಕೋಟಿ ರೂ. ಲಂಚ ಪಡೆದಿದ್ದಾರೆ ಎಂದು ಹೇಳಲಾಗಿದೆ. ಈ ಹಿನ್ನೆಲೆ ಜಾರಿ ನಿರ್ದೇಶನಾಲಯವು ತನಿಖೆಯ ವರದಿಯಲ್ಲಿ ಇದೇ ಮೊದಲ ಬಾರಿಗೆ ತೆಲಂಗಾಣ ಸಿಎಂ, ಟಿಆರ್ ಎಸ್ ಪಕ್ಷದ ಸಂಸ್ಥಾಪಕ ಚಂದ್ರಶೇಖರ್ ರಾವ್ ಪುತ್ರಿ ಕೆ.ಕವಿತಾ ಅವರ ಹೆಸರನ್ನು ಪ್ರಸ್ತಾಪಿಸಿದೆ.

ಇದನ್ನೂ ಓದಿ: M-bomb blast: ಮಂಗಳೂರು ಬಾಂಬ್‌ ಸ್ಪೋಟ: ಉಗ್ರ ಶಾರೀಖ್ ಹಣದ ಮೂಲದ ಬಗ್ಗೆ ಅಧಿಕಾರಿಗಳಿಂದ ತನಿಖೆ

ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಅವರ ಆಪ್ತ ಸಹಾಯಕ ಅಮಿತ್ ಅರೋರಾ ಅವರು ಒಂದು ವರ್ಷದ ಅವಧಿಯಲ್ಲಿ ಕವಿತಾ ಅವರಿಗೆ 10 ಬಾರಿ ಕರೆ ಮಾಡಿದ್ದಾರೆ. ಇವರಲ್ಲದೇ ಬೇರೆ ಬೇರೆ 35 ಮಂದಿಯನ್ನು ಸಂಪರ್ಕಿಸಲು ಯತ್ನಿಸಿದ್ದಾರೆ ಎಂಬ ಮಾಹಿತಿಯು ಈಗಾಗಲೇ ವಶದಲ್ಲಿರುವ ಆರೋಪಿಯೊಬ್ಬರ ಕುರಿತು ಸಲ್ಲಿಕೆ ಆಗಿರುವ ರಿಮ್ಯಾಂಡ್ ವರದಿಯಲ್ಲಿ ತಿಳಿಸಲಾಗಿದೆ.

ಅಮಿತ್ ಅರೋರಾ ಅವರ ಜೊತೆ ಕವಿತಾ ಸಂವಹನ ನಡೆಸಲು ಫ್ಯಾನ್ಸಿ ನಂಬರ್ ಗಳನ್ನು ಬಳಸುತ್ತಿದ್ದರು ಅನ್ನೋದು ತನಿಖೆ ವೇಳೆ ತಿಳಿದುಬಂದಿದೆ. ಇದಕ್ಕಾಗಿ ಕವಿತಾ ಅವರು 2 ಸಿಮ್ ಗಳನ್ನು ಬಳಸುತ್ತಿದ್ದಾರೆ. ಅವರ ಇಎಂಇಐ ನಂಬರನ್ನು 10 ಸಾರಿ ಬದಲಿಸಲಾಗಿದೆ ಎಂದು ಇಡಿ ಕೋರ್ಟಿಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ. ಅಲ್ಲದೇ ವಶಪಡಿಸಿಕೊಳ್ಳಲಾದ ಫೋನ್ ಗಳಲ್ಲಿನ ಡೇಟಾವನ್ನು ಡಿಲೀಟ್, ಫಾಮ್ರ್ಯಾಟ್ ಮಾಡಲಾಗಿತ್ತು ಎಂದು ಇಡಿ ಕೋರ್ಟ್ ಗೆ ತಿಳಿಸಿದೆ.

ಇದನ್ನೂ ಓದಿ: M-K Border dispute: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ: ರಾಜ್ಯದ ನಿಲುವು ಸಂವಿಧಾನ ಬದ್ಧ : ಸಿಎಂ ಬೊಮ್ಮಾಯಿ

ಇನ್ನು ಇಡಿ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆ.ಕವಿತಾ, ತಾನು ತನಿಖೆಗೆ ಸಿದ್ಧಳಿರುವುದಾಗಿ ಹೇಳಿದ್ದಾರೆ. ತಾನು ಯಾರಿಗೂ ಹೆದರುವ ಮಾತೇ ಇಲ್ಲ. ಇಡಿ ಅಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುತ್ತೇನೆ. ಜಾರಿ ನಿರ್ದೇಶನಾಲಯದ ತನಿಖೆ ಎದುರಿಸಲು ಸಿದ್ಧ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ತೆಲಂಗಾಣದಲ್ಲಿ ಚುನಾವಣೆ ಬರಲಿದೆ. ಹೀಗಾಗಿ ಮೋದಿ ಬರುವ ಮುನ್ನ ಇಡಿ, ಸಿಬಿಐ ದಾಳಿ ನಡೆಯುತ್ತದೆ. ಈ ಸಂದರ್ಭದಲ್ಲಿ ಇಡಿ, ಸಿಬಿಐ ಮೂಲಕ ಪ್ರಕರಣ ದಾಖಲಿಸುವುದು ಸಾಮಾನ್ಯವಾಗಿದೆ. ಮೋದಿ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ತೆಲಂಗಾಣ ಜನರ ಆಶೀರ್ವಾದ ಇರುವವರೆಗೆ ಇಡಿ, ಸಿಬಿಐ ದಾಳಿಗೆ ಹೆದರುವುದಿಲ್ಲ ಎಂದಿದ್ದಾರೆ.

Delhi Liquor Policy Scam: ED Names CM KCR Daughter Kavitha in Case Alleges Role in Rs 100 Cr Kickbacks

Comments are closed.