Kp sharma oli: ಯೋಗ ಅಸ್ತಿತ್ವಕ್ಕೆ ಬಂದಾಗ ಭಾರತವೇ ಇರಲಿಲ್ಲ….! ಮತ್ತೆ ವಿವಾದ ಸೃಷ್ಟಿಸಿದ ನೇಪಾಳದ ಉಸ್ತುವಾರಿ ಪ್ರಧಾನಿ…!!

ಈ ಹಿಂದೆ ಶ್ರೀರಾಮನ ಮೂಲ ಭಾರತವಲ್ಲ ನೇಪಾಳ ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದ ನೇಪಾಳದ ಉಸ್ತುವಾರಿ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ಯೋಗದ ಮೂಲ ಭಾರತವಲ್ಲ ನೇಪಾಳ. ಯೋಗ ಆರಂಭವಾದಾಗ ಭಾರತವಿನ್ನು ಹುಟ್ಟಿರಲಿಲ್ಲ ಎನ್ನುವ ಮೂಲಕ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಸೋಮವಾರ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ನೇಪಾಳದಲ್ಲಿ ನಡೆದ ಕಾರ್ಯಕ್ರಮದ ವೇಳೆ ಮಾತನಾಡಿದ ಕೆ.ಪಿ.ಶರ್ಮಾ ಓಲಿ, ಯೋಗದ ವಿಚಾರದಲ್ಲಿ ಭಾರತೀಯ ತಜ್ಞರು ಸತ್ಯವನ್ನು ಮರೆಮಾಚುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಯೋಗವು ನೇಪಾಳದಲ್ಲಿ ಹುಟ್ಟಿಕೊಂಡಿತು. ಭಾರತದಲ್ಲಿ ಅಲ್ಲ. ಯೋಗ ಅಸ್ತಿತ್ವಕ್ಕೆ ಬಂದಾಗ ಭಾರತವೂ ಅಸ್ತಿತ್ವದಲ್ಲೇ ಇರಲಿಲ್ಲ. ಬಳಿಕ ಬಣಗಳಾಗಿ ವಿಂಗಡಿಸಲಾಗಿದೆ ಎಂದು ಓಲಿ ಹೇಳಿದ್ದು, ಈ ಸಮಯದಲ್ಲಿ ಭಾರತವೂ ಖಂಡದಂತೆ ಹಾಗೂ ಉಪಖಂಡದಂತೆ ಇತ್ತು ಎಂದಿದ್ದಾರೆ.

ಈ ಹಿಂದೆಯೂ ಸಾಕಷ್ಟು ಭಾರಿ ಓಲಿ ಭಾರತದ ಸಂಸ್ಕೃತಿ,ಸಂಪ್ರದಾಯಗಳ ಬಗ್ಗೆ ಮಾತನಾಡಿದ್ದು, ನೇಪಾಳದಲ್ಲಿ ಭಾರತದ ಭೂಭಾಗ ಗುರುತಿಸುವ ಮೂಲಕವೂ ಭಾರತವನ್ನು ಕೆಣಕಿದ್ದರು.

ಶ್ರೀರಾಮ ನೇಪಾಳದ ಬಿರ್ಗುಜ್ ಪ್ರದೇಶದ ಥೋರಿಯಲ್ಲಿರುವ ಅಯೋಧ್ಯೆ ಮೂಲದವನು. ಇದೇ ಅಯೋಧ್ಯೆಯಲ್ಲಿ ಶ್ರೀರಾಮ ಜನಿಸಿದ್ದಾರೆ. ಆದರೆ ಭಾರತ ನಕಲಿ ಅಯೋಧ್ಯೆ ಸೃಷ್ಟಿಸಿ ಸಾಂಸ್ಕೃತಿಕ ಆಕ್ರಮಣ ಮಾಡುತ್ತಿದೆ ಎಂದು ಆರೋಪಿಸಿದ್ದರು.

Comments are closed.