Exclusive : ಟೀಮ್ ಇಂಡಿಯಾ ವಿಶ್ವಕಪ್ ಪಡೆಯಲ್ಲಿ ಮೂವರು ಕನ್ನಡಿಗರು, ಒಬ್ಬ ರಾಹುಲ್, ಇನ್ನೊಬ್ಬ ದ್ರಾವಿಡ್, ಮೂರನೆಯವರು ಯಾರು?

ಮೆಲ್ಬೋರ್ನ್: Exclusive Raghavendra DVGI : ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಟಿ20 ವಿಶ್ವಕಪ್’ಗಾಗಿ (T20 World Cup 2022) ಆಸ್ಟ್ರೇಲಿಯಾದಲ್ಲಿ ಬೀಡು ಬಿಟ್ಟಿದೆ. ಈಗಾಗಲೇ ಪರ್ತ್ ಹಾಗೂ ಬ್ರಿಸ್ಬೇನ್’ನಲ್ಲಿ ಒಟ್ಟು ಮೂರು ಅಭ್ಯಾಸ ಪಂದ್ಯಗಳನ್ನಾಡಿರುವ ಭಾರತ 2ರಲ್ಲಿ ಗೆದ್ದು ವಿಶ್ವಕಪ್’ಗೆ ಸಿದ್ಧತೆ ಮುಗಿಸಿದೆ. ಬ್ರಿಸ್ಬೇನ್’ನ ಗಾಬಾ ಮೈದಾನದಲ್ಲಿ ಸೋಮವಾರ ನಡೆದಿದ್ದ ಅಭ್ಯಾಸ ಪಂದ್ಯದಲ್ಲಿ ವಿಶ್ವಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು 6 ರನ್’ಗಳಿಂದ ಮಣಿಸಿದ್ದ ರೋಹಿತ್ ಪಡೆ, ವಿಶ್ವಕಪ್ ಟೂರ್ನಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.

ಟೂರ್ನಿಯಲ್ಲಿ ಭಾರತ ತಂಡದ ಅಭಿಯಾನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯದೊಂದಿಗೆ ಆರಂಭವಾಗಲಿದೆ. ಈ ಮೆಗಾ ಫೈಟ್ (India vs Pakistan) ಇದೇ ಭಾನುವಾರ (ಅಕ್ಟೋಬರ್ 23) ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಅಂದ ಹಾಗೆ ಟಿ20 ವಿಶ್ವಕಪ್’ನಲ್ಲಿ ಆಡುತ್ತಿರುವ ಭಾರತ ತಂಡದಲ್ಲಿ ಒಟ್ಟು ಮೂವರು ಕನ್ನಡಿಗರಿದ್ದಾರೆ. ಒಬ್ಬರು ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್, ಇನ್ನೊಬ್ಬರು ಟೀಮ್ ಇಂಡಿಯಾ ಉಪನಾಯಕ ಕೆ.ಎಲ್ ರಾಹುಲ್. ಹಾಗಾದ್ರೆ ಮೂರನೆಯವರು ಯಾರು..? ಅವರೇ ತಂಡದ ಥ್ರೋಡೌನ್ ಸ್ಪೆಷಲಿಸ್ಟ್ ರಾಘವೇಂದ್ರ ಡ್ವಿಗಿ (Team India’s throwdown specialist Raghavendra DVGI).

ರಾಘವೇಂದ್ರ ಡ್ವಿಗಿ ಉತ್ತರ ಕನ್ನಡ ಜಿಲ್ಲೆಯ ಕುಮಟಾದವರು. 2011ರಿಂದಲೂ ಭಾರತ ತಂಡದ ಜೊತೆಗಿರುವ ರಾಘವೇಂದ್ರ, ತಂಡದ ಅವಿಭಾಜ್ಯ ಅಂಗ. ಟೀಮ್ ಇಂಡಿಯಾ ದಾಂಡಿಗರು ಗಂಟೆಗೆ 145-150 ಕಿ.ಮೀ ವೇಗದ ಎಸೆತಗಳನ್ನು ಲೀಲಾಜಾಲವಾಗಿ ಎದುರಿಸುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ರಾಘವೇಂದ್ರ. ನೆಟ್ಸ್”ನಲ್ಲಿ ಥ್ರೋಡೌನ್ ಮೂಲಕ ಸತತವಾಗಿ 150 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ರಾಘವೇಂದ್ರ ಭಾರತ ತಂಡದ ಬ್ಯಾಟ್ಸ್’ಮನ್’ಗಳ ಹಿಂದಿನ ಅಸಲಿ ಶಕ್ತಿಯಾಗಿ ನಿಂತಿದ್ದಾರೆ.

ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರಂತೂ ಸಾಕಷ್ಟು ಬಾರಿ ರಾಘವೇಂದ್ರ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ನನ್ನ ಬ್ಯಾಟಿಂಗ್ ತುಂಬಾ ಸುಧಾರಿಸಿದೆ ಎಂದರೆ ಅದಕ್ಕೆ ರಾಘವೇಂದ್ರ ಅವರು ನೆಟ್ಸ್’ನಲ್ಲಿ ಹಾಕುವ ಪರಿಶ್ರಮ ಪ್ರಮುಖ ಕಾರಣ ಎಂದು ಕೊಹ್ಲಿ ಹಲವು ಬಾರಿ ಹೇಳಿದ್ದುಂಟು. ಕೊಹ್ಲಿ ಅವರಲ್ಲದೆ ಭಾರತ ತಂಡದ ಬಹುತೇಕ ಬ್ಯಾಟ್ಸ್’ಮನ್’ಗಳಿಗೆ ರಾಘವೇಂದ್ರ ಅವರ ಕಾರಣದಿಂದಾಗಿ ಗುಣಮಟ್ಟದ ಬ್ಯಾಟಿಂಗ್ ಅಭ್ಯಾಸ ಲಭ್ಯವಾಗುತ್ತಿದೆ.

ಇದನ್ನೂ ಓದಿ : BCCI ಮುಂದೆ PCB ಜುಜುಬಿ, ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯ ಒಟ್ಟು ಮೌಲ್ಯ ಎಷ್ಟು ಗೊತ್ತಾ?

ಇದನ್ನೂ ಓದಿ : T20 Blind Cricket World Cup : ಅಂಧರ ಟಿ20 ವಿಶ್ವಕಪ್ 2022 ಗೆ ಯುವರಾಜ್ ಸಿಂಗ್ ಬ್ರ್ಯಾಂಡ್ ಅಂಬಾಸಿಡರ್

Exclusive Team India 3 Kannadigas throwdown specialist Raghavendra DVGI Rahul Dravid KL rahul

Comments are closed.