Supreme Court of India : ಭಾರತದ ಸುಪ್ರಿಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಆಯ್ಕೆ ಹೇಗೆ ನಡೆಯುತ್ತೆ ಗೊತ್ತಾ ?

ನವದೆಹಲಿ : (Supreme Court of India)ಭಾರತದ ಸರ್ವೋಚ್ಚ ನ್ಯಾಯಾಲಯವಾಗಿರುವ ಸುಪ್ರಿಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಆಯ್ಕೆ ಪ್ರಕ್ರಿಯೆಯಲ್ಲಿ ಮುಖ್ಯ ನ್ಯಾಯಮೂರ್ತಿನ್ನಾಗಿ ನ್ಯಾಯಮೂರ್ತಿ ಧನಂಜಯ ಯಶವಂತ್‌ ಚಂದ್ರಚೂಡ್‌ ಅವರ ಹೆಸರನ್ನು ಶಿಫಾರಸ್ಸು ಮಾಡಲಾಗಿದೆ. ಭಾರತದ ಸುಪ್ರಿಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಉದಯ ಉಮೇಶ್ ಲಲಿತ್‌ ಅವರು ಮುಂದಿನ ಮುಖ್ಯ ನ್ಯಾಯಮೂರ್ತಿಗಳ ಹೆಸರನ್ನು ಶಿಫಾರಸು ಮಾಡಿದ್ದಾರೆ. ಅಷ್ಟಕ್ಕೂ ಸುಪ್ರಿಂ ಕೋರ್ಟ್‌ನ ನ್ಯಾಯಾಧೀಶರ ಆಯ್ಕೆ ಹೇಗೆ ನಡೆಯುತ್ತೆ ಅನ್ನೋ ಡಿಟೇಲ್ಸ್ ಇಲ್ಲಿದೆ.

ಭಾರತದ ಸುಪ್ರಿಂ ಕೋರ್ಟ್‌ನ(Supreme Court of India) ಮುಖ್ಯ ನ್ಯಾಯಮೂರ್ತಿ(CJI)ಆಯ್ಕೆ ರಾಷ್ಟ್ರಪತಿಯಿಂದ:

ಭಾರತೀಯ ಸಂವಿಧಾನದ 124ನೇ ವಿಧಿಯ ಷರತ್ತು(2) ರ ಅಡಿಯಲ್ಲಿ ಭಾರತದ ಸುಪ್ರಿಂ ಕೋರ್ಟ್‌ನ ಮುಖ್ಯ ನ್ಯಾಯಧೀಶರನ್ನು ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ. ಇನ್ನೂಈ ಆರ್ಟಿಕಲ್‌ನಲ್ಲಿ ಅವಶ್ಯಕ ಎನಿಸಿದ್ದಾಗ ರಾಷ್ಟ್ರಪತಿಗಳು ಸುಪ್ರೀಂ ಕೋರ್ಟ್‌ನ ಸಂಬಂಧಪಟ್ಟ ಇತರ ನ್ಯಾಯಾಧೀಶರೊಂದಿಗೆ ಚರ್ಚೆ ನಡೆಸಿದ ನಂತರ ಕೂಡ ಭಾರತದ ಮುಖ್ಯ ನ್ಯಾಯಧೀಶರ ನೇಮಕವನ್ನು ಮಾಡಬಹುದಾಗಿದೆ.

ಇದನ್ನೂ ಓದಿ : Bhanvar lal Died : ಕಾಂಗ್ರೆಸ್ ಹಿರಿಯ ನಾಯಕ ಭನ್ವರ್‌ ಲಾಲ್‌ ಶರ್ಮಾ ವಿಧಿವಶ

ಇದನ್ನೂ ಓದಿ : Mouvin Godinho : ಕುಡಿದವರನ್ನು ಮನೆಗೆ ತಲುಪಿಸುವುದು ಬಾರ್‌ ಮಾಲೀಕರ ಜವಾಬ್ಧಾರಿ : ಸಚಿವರ ಆದೇಶ

ಇದನ್ನೂ ಓದಿ : Congress Party’s Bharat Jodo Yatra :ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆಗೆ ಕಮಲ‌ ಕಲಿಗಳಿಂದ ಠಕ್ಕರ್

ಭಾರತದ ಸುಪ್ರಿಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಆಗುವುದಕ್ಕೆ ಅರ್ಹತೆ:

ಭಾರತದ ಸುಪ್ರಿಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಆಗುವುದಕ್ಕೆ ಮುಖ್ಯವಾಗಿ ಭಾರತದ ಪ್ರಜೆಯಾಗಿರಬೇಕು. ಅಷ್ಟೇ ಅಲ್ಲದೇ ಆ ವ್ಯಕ್ತಿಯೂ ಹೈಕೋರ್ಟ್‌ನ ನ್ಯಾಯಧೀಶರಾಗಿರಬೇಕು ಅಥವಾ ಎರಡು ಹಾಗೂ ಹೆಚ್ಚಿನ ಅಂತಹ ನ್ಯಾಯಲಯಗಳಲ್ಲಿ ಕಡಿಮೆ ಅಂದರೂ ಐದು ವರ್ಷಗಳ ಕಾಲ ನ್ಯಾಯಧೀಶರಾಗಿರಬೇಕು. ಇದು ಅಲ್ಲದೇ ಇದ್ದರೆ ಹೈಕೋರ್ಟ್‌ ಅಥವಾ ಎರಡಕ್ಕಿಂತ ಜಾಸ್ತಿ ನ್ಯಾಯಲಯಗಳಲ್ಲಿ ಸತತವಾಗಿ ಕನಿಷ್ಠ ಹತ್ತು ವರ್ಷಗಳವರೆಗೆ ವಕೀಲರಾಗಿರಬೇಕಾಗಿರುತ್ತದೆ. ಇನ್ನೂ ರಾಷ್ಟ್ರಪತಿಗಳ ಪ್ರಕಾರ ಅದ್ವಿತೀಯ ನ್ಯಾಯಶಾಸ್ತ್ರಜ್ಞರಾಗಿರಬೇಕು.

Do you know how the selection of the Chief Justice of the Supreme Court of India takes place?

Comments are closed.