Puneeth RajKumar Movie Gandhadagudi : “ಪುನೀತ್‌ ಪರ್ವ” ಕಾರ್ಯಕ್ರಮಕ್ಕೆ ಆಹ್ವಾನ : ಸಿಎಂ ಬೊಮ್ಮಾಯಿ ಆಹ್ವಾನಿಸಿದ ರಾಜ್ ಕುಟುಂಬ

ನಟ ಪುನೀತ್‌ ರಾಜ್‌ಕುಮಾರ್‌ ಅಭಿನಯದ “ಗಂಧದಗುಡಿ” (Gandhadagudi)(Puneeth RajKumar Movie Gandhadagudi)ಸಿನಿಮಾದ ಟ್ರೈಲರ್‌ ಅಕ್ಟೋಬರ್‌ 9 ರಂದು ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಇದರ ಬೆನ್ನಲ್ಲೇ ರಾಜ್ ಕುಟುಂಬ ಸಿನಿಮಾದ ಬಿಡುಗಡೆ ದಿನಾಂಕವನ್ನೂ ಪ್ರಕಟಿಸಿದೆ. ಅಕ್ಟೋಬರ್‌ 28 ರಂದು ಸಿನಿಮಾ ಎಲ್ಲಾ ಚಿತ್ರ ಮಂದಿರಗಳಲ್ಲಿಯೂ ತೆರೆ ಕಾಣಲಿದೆ. ಈ ಹಿನ್ನೆಲೆಯಲ್ಲಿ ಸಿನಿಮಾ ಬಿಡುಗಡೆಗೆ ಮೊದಲು ದೊಡ್ಮನೆ ಕುಟುಂಬ “ಗಂಧದಗುಡಿ”(Gandhadagudi) ಸಿನಿಮಾದ ಫ್ರಿ ರೀಲಿಸ್‌ ಇವೆಂಟ್‌ನ್ನು ಹಮ್ಮಿಕೊಂಡಿದೆ. ಈ (Puneeth Parva)ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿಯನ್ನು ಆಹ್ವಾನಿಸಿದೆ.

ಪುನೀತ್‌ ರಾಜ್‌ಕುಮಾರ್‌ ಅಭಿನಯದ ಕೊನೆಯ ಸಿನಿಮಾವಾದ(Gandhadagudi)”ಗಂಧದಗುಡಿ”(Puneeth RajKumar Movie Gandhadagudi)ಟ್ರೈಲರ್‌ ಈಗಾಗಲೇ ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಇನ್ನಷ್ಟು ನಿರೀಕ್ಷೆಗಳನ್ನು ಹೆಚ್ಚಿಸಿದೆ. ಇನ್ನೂ ದೊಡ್ಮನೆ ಕುಟುಂಬವು ಈ ಸಿನಿಮಾದ ಫ್ರಿ ರೀಲಿಸ್‌ ಇವೆಂಟ್‌ನ್ನು ಹಮ್ಮಿಕೊಂಡಿದೆ. ಈ ಇವೆಂಟ್‌ ಕಾರ್ಯಕ್ರಮಕ್ಕೆ “ಪುನೀತ್‌ ಪರ್ವ” (Puneeth Parva)ಎಂದು ಹೆಸರು ಇಟ್ಟಿದ್ದಾರೆ. ಇದೇ ಬರುವ ಅಕ್ಟೋಬರ್‌ 21ರಂದು ಅರಮನೆ ಮೈದಾನದಲ್ಲಿ ಈ ಇವೆಂಟ್‌ ಕಾರ್ಯಕ್ರಮವನ್ನು ಆಯೋಜಿಸಿದೆ. ಫ್ರಿ ರೀಲಿಸ್‌ ಇವೆಂಟ್‌ಗೆ ಕಾರ್ಯಕ್ರಮಕ್ಕೆ ದೊಡ್ಮನೆ ಕುಟುಂಬವು ಬಹಳಷ್ಟು ತಯಾರಿಯನ್ನು ನಡೆಸುತ್ತಿದೆ. ಈ ಇವೆಂಟ್‌ನ್ನು ಅಭಿಮಾನಿಗಳಗೊಸ್ಕರ ದೊಡ್ಮನೆಯವರು ಆಯೋಜಿಸಲಾಗಿದೆ ಎಂದು ರಾಘವೇಂದ್ರ ರಾಜ್‌ ಕುಮಾರ್‌ ಹೇಳಿದ್ದಾರೆ.

ಇದನ್ನೂ ಓದಿ : Anil Kumble watched Kantara : ಕಾಂತಾರ ಸಿನಿಮಾ ವೀಕ್ಷಿಸಿ ಶಹಬ್ಬಾಸ್ ಅಂದ್ರು ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ

ಇದನ್ನೂ ಓದಿ : Crazy Star Ravichandran : ಮನೆ ಖಾಲಿ ಮಾಡಿದ ಹಿಂದಿನ ಸತ್ಯ ಬಿಚ್ಚಿಟ್ಟ ಕ್ರೇಜಿಸ್ಟಾರ್ ರವಿಚಂದ್ರನ್‌

ಇದನ್ನೂ ಓದಿ : Nayanthara In trouble: ಸಿಹಿ ಸುದ್ದಿಕೊಟ್ಟ ನಯನತಾರಾ ದಂಪತಿಗೆ ‘ಬಾಡಿಗೆ’ ಸಂಕಷ್ಟ

ಈ ಇವೆಂಟ್‌ಗೆ ವಿಭಿನ್ನ ರೀತಿಯಲ್ಲಿ ಆಮಂತ್ರಣ ಪ್ರತಿಕೆಯನ್ನು ರೆಡಿ ಮಾಡಿದೆ. ಅದರಲ್ಲಿ ಅಪ್ಪು ಸಹಿ ಇರುವ ಗಂಧದ ಫೀಸ್‌, ಅಪ್ಪುವಿನ ಸಣ್ಣ ಪ್ರತಿಮೆ ಹಾಗೂ ಪತ್ರಿಕೆಯನ್ನು ಒಳಗೊಂಡಿದೆ. ಇನ್ನೂ ಈ ಕಾರ್ಯಕ್ರಮವು ಪುನೀತ್‌ ಪತ್ನಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ನೇತೃತ್ವದಲ್ಲಿ ನಡೆಯುತ್ತಿದೆ. ಹಾಗೆ ದಕ್ಷಿಣ ಭಾರತದ ಎಲ್ಲಾ ಚಿತ್ರರಂಗದವರನ್ನು ಕರೆಯಲಾಗುತ್ತಿದೆ ಎಂದು ಹೇಳಿದ್ದಾರೆ. ಇಂದು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಸೇರಿದಂತೆ ದೊಡ್ಮನೆ ಕುಟುಂಬವು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರನ್ನು ಬೇಟಿ ಮಾಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದೆ. ಅಪ್ಪುವಿನ ಕೊನೆಯ ಹಾಗೂ ಕನಸಿನ ಸಿನಿಮಾವಾಗಿದರಿಂದ ಇದನ್ನು ಸೆಲೆಬ್ರಿಷನ್‌(Puneeth Parva) ಮಾಡುವುದಾಗಿ ಈ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

Invitation to “Puneet Parva” program: Raj family invited by CM Bommai

Comments are closed.