DR B. R. Ambedkar Death Anniversary 2022 : ಮಹಾಪರಿನಿರ್ವಾಣ ದಿನ: ಇಂದು ಡಾ. ಬಿ. ಆರ್‌. ಅಂಬೇಡ್ಕರ್‌ ಅವರ ಪುಣ್ಯತಿಥಿ

ಡಾ. ಭೀಮರಾವ್‌ ರಾಮಜೀ ಅಂಬೇಡ್ಕರ್‌ (Bhimrao Ramji Ambedkar) ಅವರು ನಮಗೆಲ್ಲರಿಗೂ ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌ ಎಂದೇ ಚಿರಪರಿಚಿತ. ಭಾರತ ರತ್ನ ಬಾಬಾಸಾಹೇಬ್‌ ಅಂಬೇಡ್ಕರ್‌ ಅವರನ್ನು ಭಾರತದ ಸಂವಿಧಾನ ಶಿಲ್ಪಿ ಎಂದು ಕರೆಯುತ್ತಾರೆ. ಅವರು ಡಿಸೆಂಬರ್‌ 6, 1956 ರಲ್ಲಿ ನಮ್ಮನಗಲಿದರು. ಪ್ರತಿವರ್ಷ ಡಿಸೆಂಬರ್‌ 6 ರಂದು ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ ಪುಣ್ಯತಿಥಿಯನ್ನು (DR B. R. Ambedkar Death Anniversary 2022) ದೇಶಾದ್ಯಂತ ಮಹಾಪರಿನಿರ್ವಾಣ ದಿನ ಎಂದು ಆಚರಿಸಲಾಗುತ್ತದೆ.

ಈ ದಿನವನ್ನು ಮಹಾಪರಿನಿರ್ವಾಣ ದಿನ ಎಂದು ಆಚರಿಸಲು ಕಾರಣವೇನೆಂದರೆ ನಮ್ಮ ಸಂವಿಧಾನ ಶಿಲ್ಪಿ ಬಾಬಾಸಾಹೇಬ್‌ ಅಂಬೇಡ್ಕರ್‌ ಅವರಿಗೆ ಗೌರವ ನಮನವನ್ನು ಅರ್ಪಿಸುವುದಾಗಿದೆ. ಮಹಾಪರಿನಿರ್ವಾಣದ ಅರ್ಥ ಮರಣಾನಂತರ ನಿರ್ವಾಣ ಎಂದು. ಪರಿನಿರ್ವಾಣವು ಬೌದ್ಧಧರ್ಮದ ಅನೇಕ ಮುಖ್ಯ ತತ್ವ ಮತ್ತು ಗುರಿಗಳಲ್ಲಿ ಒಂದಾಗಿದೆ. ಬೌದ್ಧ ದರ್ಮದ ಪ್ರಕಾರ ನಿರ್ವಾಣವನ್ನು ಪಡೆಯುವ ವ್ಯಕ್ತಿಯು ಲೌಕಿಕ ಬಾಂಧವ್ಯಗಳು, ಆಸೆಗಳು ಮತ್ತು ಜೀವನದ ನೋವುಗಳಿಂದ ಮುಕ್ತನಾಗಿರುತ್ತಾನೆ. ಇದರೊಂದಿಗೆ, ಅವನು ಜೀವನ ಚಕ್ರದಿಂದ ಮುಕ್ತನಾಗಿರುತ್ತಾನೆ. ಆದರೆ ನಿರ್ವಾಣವನ್ನು ಪಡೆಯುವುದು ಅಷ್ಟು ಸುಲಭವಲ್ಲ. ಇದಕ್ಕಾಗಿ ಸದ್ಗುಣ ಮತ್ತು ಧಾರ್ಮಿಕ ಜೀವನವನ್ನು ನಡೆಸಬೇಕು. ಅದೇ ದಾರಿಯಲ್ಲಿ ನಡೆದವರು ಮಹಾನ್‌ ಮಾನವತಾವಾದಿ ಮತ್ತು ಸಮಾನತೆಯ ಹರಿಕಾರರಾದ ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌ರವರು.

ಡಾ. ಬಿ. ಆರ್‌. ಅಂಬೇಡ್ಕರ್‌ ಅವರು ಬಡವರು ಮತ್ತು ದೀನದಲಿತರ ಸ್ಥಿತಿಯನ್ನು ಸುಧಾರಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಸಮಾಜದಲ್ಲಿರುವ ಅಸ್ಪೃಶ್ಯತೆಯಂತಹ ಅನೇಕ ಆಚರಣೆಗಳನ್ನು ಕೊನೆಗಾಣಿಸುವಲ್ಲಿ ಮಹತ್ವದ ಕೊಡುಗೆಯನ್ನು ನೀಡಿದ್ದಾರೆ. ಡಾ. ಅಂಬೇಡ್ಕರ್ ಅವರು ಹಲವು ವರ್ಷಗಳ ಕಾಲ ಬೌದ್ಧ ಧರ್ಮವನ್ನು ಅಧ್ಯಯನ ಮಾಡಿದರು. ನಂತರ ಬೌದ್ಧ ಧರ್ಮವನ್ನು ಅಳವಡಿಸಿಕೊಂಡರು. ಬೌದ್ಧ ಅನುಯಾಯಿಗಳ ಪ್ರಕಾರ, ಡಾ. ಅಂಬೇಡ್ಕರ್‌ ಅವರು ತಮ್ಮ ಕೃತಿಗಳ ಮೂಲಕ ನಿರ್ವಾಣವನ್ನು ಪಡೆದಿದ್ದಾರೆ. ಅದಕ್ಕಾಗಿಯೇ ಅವರ ಪುಣ್ಯತಿಥಿಯನ್ನು ಮಹಾಪರಿನಿರ್ವಾಣ ದಿನವನ್ನಾಗಿ ಆಚರಿಸಲಾಗುತ್ತದೆ.

ಇದನ್ನೂ ಓದಿ : Sports awards: 29 ಸಾಧಕರು, 3 ಸಂಸ್ಥೆಗಳಿಗೆ ಕ್ರೀಡಾ ಪ್ರಶಸ್ತಿ ಪ್ರಕಟಿಸಿದ ರಾಜ್ಯ ಸರ್ಕಾರ: ನಾಳೆ ರಾಜಭವನದಲ್ಲಿ ಪ್ರಶಸ್ತಿ ಪ್ರದಾನ

ಇದನ್ನೂ ಓದಿ : SSLC Exams 2023: ಎಸ್ಎಸ್ಎಲ್ ಸಿ ಅಂತಿಮ ವೇಳಾಪಟ್ಟಿ ಪ್ರಕಟ : ಇಲ್ಲಿದೆ ಸಂಪೂರ್ಣ ಮಾಹಿತಿ

(DR B. R. Ambedkar Death Anniversary, 2022 Mahaparinirvan Diwas, why is it celebrated on 6th December)

Comments are closed.