India Vs Bangladesh ODI : ಇಂದು 2ನೇ ಏಕದಿನ, ಭಾರತಕ್ಕೆ ಮಾಡು ಇಲ್ಲ ಮಡಿ ಪಂದ್ಯ; ಬದಲಾಗುತ್ತಾ ಪ್ಲೇಯಿಂಗ್ XI?


ಮೀರ್’ಪುರ : ಭಾರತ ಮತ್ತು ಬಾಂಗ್ಲಾದೇಶ ತಂಡಗಳ ನಡುವಿನ 2ನೇ ಏಕದಿನ ಪಂದ್ಯ (India Vs Bangladesh 2nd ODI) ನಾಳೆ (ಬುಧವಾರ) ಮೀರ್’ಪುರ್’ನ ಶೇರ್ ಎ ಬಾಂಗ್ಲಾ ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ರೋಹಿತ್ ಶರ್ಮಾ ಬಳಗಕ್ಕೆ ಇದು ಮಾಡು ಇಲ್ಲ ಮಡಿ ಪಂದ್ಯವಾಗಿದೆ.

ಮೊದಲ ಪಂದ್ಯದಲ್ಲಿ ಆಘಾತಕಾರಿ ಸೋಲು ಕಂಡಿರುವ ಭಾರತ ಸರಣಿ ಗೆಲುವಿನ ಕನಸನ್ನು ಜೀವಂತವಾಗಿಡಬೇಕಾದರೆ ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಭಾನುವಾರ ನಡೆದಿದ್ದ ಮೊದಲ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶ, ಭಾರತಕ್ಕೆ 1 ವಿಕೆಟ್’ನಿಂದ ಶಾಕ್ ಕೊಟ್ಟಿತ್ತು. ಬ್ಯಾಟಿಂಗ್ ವೈಫಲ್ಯಕ್ಕೆ ಬೆಲೆ ತೆತ್ತಿದ್ದ ಭಾರತ ಸೋಲು ಕಂಡಿತ್ತು. ಉಪನಾಯಕ ಕೆ.ಎಲ್ ರಾಹುಲ್ 73 ರನ್ ಬಾರಿಸಿದ್ದು ಬಿಟ್ಟರೆ ಭಾರತ ಪರ ಮತ್ತೊಂದು ಅರ್ಧಶತಕ ದಾಖಲಾಗಿರಲಿಲ್ಲ. ನಾಯಕ ರೋಹಿತ್ ಶರ್ಮಾ, ಅನುಭವಿ ಎಡಗೈ ಓಪನರ್ ಶಿಖರ್ ಧವನ್ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಅಲ್ಪ ಮೊತ್ತಕ್ಕೆ ಔಟಾಗಿದ್ದರು.

ಮಾಡು ಇಲ್ಲ ಮಡಿ ಪಂದ್ಯದಲ್ಲಿ ಭಾರತ ಮೊದಲ ಪಂದ್ಯದಲ್ಲಿ ಆಡಿದ ತಂಡವನ್ನೇ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚು. ಹೀಗಾಗಿ ಮತ್ತೆ ಉಪನಾಯಕ ಕೆ.ಎಲ್ ರಾಹುಲ್ (KL Rahul) ಅವರೇ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿಭಾಯಿಸಲಿದ್ದಾರೆ. ಮೊದಲ ಪಂದ್ಯದಲ್ಲಿ ಮೆಹದಿ ಹಸನ್ ಮಿರಾಜ್ ನೀಡಿದ್ದ ಸುಲಭ ಕ್ಯಾಚನ್ನು ಕೈಚೆಲ್ಲಿದ್ದ ರಾಹುಲ್ ಭಾರೀ ಟೀಕೆಗೆ ಒಳಗಾಗಿದ್ದರು.

ಬಾಂಗ್ಲಾದೇಶ ವಿರುದ್ಧದ 2ನೇ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI:
ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್ (ಉಪನಾಯಕ-ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ದೀಪಕ್ ಚಹರ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಕುಲ್ದೀಪ್ ಸೇನ್.

ಇದನ್ನೂ ಓದಿ : ICC Under-19 Women’s World Cup : ಐಸಿಸಿ ಮಹಿಳಾ U19 ವಿಶ್ವಕಪ್: ಭಾರತ ತಂಡಕ್ಕೆ ಶೆಫಾಲಿ ವರ್ಮಾ ನಾಯಕಿ

ಇದನ್ನೂ ಓದಿ : Rohith Sharma 500 Sixers : 500 ಸಿಕ್ಸರ್ಸ್ ಹೊಸ್ತಿಲಲ್ಲಿ ಹಿಟ್‌ಮ್ಯಾನ್, ಮಹೋನ್ನತ ದಾಖಲೆಗೆ ಮೂರೇ ಸಿಕ್ಸರ್ಸ್ ಬಾಕಿ

ಇದನ್ನೂ ಓದಿ : India Vs Bangladesh ODI series : 5 ಐಪಿಎಲ್ ಟ್ರೋಫಿ ಗೆದ್ದ ನಾಯಕನ ನೇತೃತ್ವದಲ್ಲಿ ಭಾರತ ತಂಡ ಬರ್ಬಾದ್!

ಭಾರತ Vs ಬಾಂಗ್ಲಾದೇಶ 2ನೇ ಏಕದಿನ ಪಂದ್ಯ
ಪಂದ್ಯ ಆರಂಭ: ಬೆಳಗ್ಗೆ 11.30ಕ್ಕೆ
ಸ್ಥಳ: ಶೇರ್ ಎ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂ, ಮೀರ್’ಪುರ್
ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ (Sony Sports Network)
ಲೈವ್ ಸ್ಟ್ರೀಮಿಂಗ್: ಸೋನಿ ಲೈವ್ (SonyLiv app)

India Vs Bangladesh ODI: Today is the 2nd ODI, a do-or-die match for India; Changing playing XI

Comments are closed.