Puneri Paltan vs Jaipur Pink Panthers : ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟ ಪುಣೇರಿ ಪಲ್ಟನ್, ಜೈಪುರ ಪಿಂಕ್ ಪ್ಯಾಂಥರ್ಸ್

ಹೈದರಾಬಾದ್ : ಚೊಚ್ಚಲ ಆವೃತ್ತಿಯ ಚಾಂಪಿಯನ್ (Puneri Paltan vs Jaipur Pink Panthers) ಜೈಪುರ ಪಿಂಕ್ ಪ್ಯಾಂಥರ್ಸ್ ಮತ್ತು ಚೊಚ್ಚಲ ಕಿರೀಟಕ್ಕಾಗಿ ಹಾತೊರೆಯುತ್ತಿರುವ ಪುಣೇರಿ ಪಲ್ಟನ್ ತಂಡಗಳು ಪ್ರೊ ಕಬಡ್ಡಿ ಲೀಗ್ 9ನೇ (Pro Kabaddi League) ಆವೃತ್ತಿಯ ಟೂರ್ನಿಯಲ್ಲಿ ಸೆಮಿಫೈನಲ್’ಗೆ ಲಗ್ಗೆ ಇಟ್ಟಿವೆ.

ಹೈದರಾಬಾದ್’ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ವಿರುದ್ಧ 44-30ರ ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿದ ಪುಣೇರಿ ಪಲ್ಟನ್ ಲೀಗ್’ನಲ್ಲಿ 14ನೇ ಗೆಲುವಿನೊಂದಿಗೆ ಅಂಕಗಳಿಕೆಯನ್ನು 79ಕ್ಕೆ ಏರಿಸಿಕೊಂಡಿತು. ಅಷ್ಟೇ ಅಲ್ಲ, ಲೀಗ್’ನಲ್ಲಿ ಮೊದಲ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿತು. ಮತ್ತೊಂದೆಡೆ 10ನೇ ಸೋಲು ಕಂಡ ಮೂರು ಬಾರಿಯ ಚಾಂಪಿಯನ್ಸ್ ಪ್ಲೇ ಆಫ್ ರೇಸ್’ನಿಂದ ಹೊರ ಬಿತ್ತು.

ದಿನದ ಮತ್ತೊಂದು ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್, ಹರ್ಯಾಣ ಸ್ಟೀಲರ್ಸ್ ತಂಡವನ್ನು 44-30ರಲ್ಲಿ ಸೋಲಿಸಿ ಸೆಮಿಫೈನಲ್’ಗೆ ಎಂಟ್ರಿ ಕೊಟ್ಟಿತು. ಲೀಗ್’ನ ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳನ್ನು ಪಡೆದ ತಂಡಗಳಿಗೆ ನೇರವಾಗಿ ಸೆಮಿಫೈನಲ್ ಪ್ರವೇಶಿಸುವ ಅವಕಾಶವಿದ್ದು, ಪುಣೇರಿ ಪಲ್ಟನ್ ಮತ್ತು ಜೈಪುರ ಪಿಂಕ್ ಪ್ಯಾಂಥರ್ಸ್ ಪಡೆಗಳು ಅಂತಿಮ 4ರ ಘಟ್ಟಕ್ಕೆ ಲಗ್ಗೆ ಇಟ್ಟಿವೆ. ಪುಣೇರಿ ಹಾಗೂ ಜೈಪುರ ತಂಡಗಳ ಜೊತೆ ಬೆಂಗಳೂರು ಬುಲ್ಸ್ ಮತ್ತು ಯು.ಪಿ ಯೋಧಾ ತಂಡಗಗಳು ಈಗಾಗಲೇ ಪ್ಲೇ ಆಫ್ ಹಂತಕ್ಕೇರಿದ್ದು, ಉಳಿದ ಎರಡು ಸ್ಥಾನಗಳಿಗಾಗಿಗ ನಾಲ್ಕು ಸ್ಥಾನಗಳಿಗಾಗಿ ತಮಿಳ್ ತಲೈವಾಸ್, ದಬಾಂಗ್ ಡೆಲ್ಲಿ, ಯು ಮುಂಬಾ, ಹರ್ಯಾಣ ಸ್ಟೀಲರ್ಸ್, ಗುಜರಾತ್ ಜೈಂಟ್ಸ್ ಹಾಗೂ ಬೆಂಗಾಲ್ ವಾರಿಯರ್ಸ್ ತಂಡಗಳ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ.

ಲೀಗ್’ನಲ್ಲಿ 3ನೇ ಸ್ಥಾನ ಪಡೆಯುವ ತಂಡ 6ನೇ ಸ್ಥಾನ ಪಡೆದ ತಂಡದ ಜೊತೆ ಮೊದಲ ಎಲಿಮಿನೇಟರ್ ಪಂದ್ಯವಾಡಲಿದೆ. 4 ಹಾಗೂ 5ನೇ ಸ್ಥಾನ ಪಡೆದ ತಂಡಗಳು 2ನೇ ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಎಲಿಮಿನೇಟರ್ ಹಂತದಲ್ಲಿ ಗೆದ್ದ ತಂಡಗಳು ಸೆಮಿಫೈನಲ್’ನಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಮತ್ತು ಪುಣೇರಿ ಪಲ್ಟನ್ ತಂಡಗಳನ್ನು ಎದುರಿಸಲಿವೆ.

Puneri Paltan vs Jaipur Pink Panthers : ಪ್ರೊ ಕಬಡ್ಡಿ ಲೀಗ್-9: ಮಂಗಳವಾರದ ಪಂದ್ಯಗಳು (Pro Kabaddi League) :

  1. ದಬಾಂಗ್ ಡೆಲ್ಲಿ Vs ಯು ಮುಂಬಾ
  2. ತೆಲುಗು ಟೈಟನ್ಸ್ Vs ಗುಜರಾತ್ ಜೈಂಟ್ಸ್

ಇದನ್ನೂ ಓದಿ : Pro Kabaddi League: ಫೋಟೋ ಫಿನಿಷ್ ರೇಸ್‌ನಲ್ಲಿ ಬೆಂಗಳೂರು ಬುಲ್ಸ್, ಪುಣೇರಿ ಪಲ್ಟನ್ ಪಡೆಗೆ ಸೋಲು

ಇದನ್ನೂ ಓದಿ : Bengaluru Bulls enters play off : ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟ ಬೆಂಗಳೂರು ಬುಲ್ಸ್, ಯು.ಪಿ ಯೋಧಾ

ಇದನ್ನೂ ಓದಿ : UP Yoddhas vs Bengaluru Bulls : ಇಂದು ಯು.ಪಿ ಯೋಧಾ ವಿರುದ್ಧ ಗೆದ್ದರೆ ಬೆಂಗಳೂರು ಬುಲ್ಸ್’ಗೆ ಪ್ಲೇ ಆಫ್ ಟಿಕೆಟ್

ಸ್ಥಳ: ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣ, ಹೈದರಾಬಾದ್
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

Puneri Paltan vs Jaipur Pink Panthers enter semi-finals

Comments are closed.