Mithilesh Chaturvedi Death : ಬಾಲಿವುಡ್ ಹಿರಿಯ ನಟ ಮಿಥಿಲೇಶ್​ ಚತುರ್ವೇದಿ ವಿಧಿವಶ

Mithilesh Chaturvedi Death : ಬಾಲಿವುಡ್​ ಹಿರಿಯ ನಟ ಮಿಥಿಲೇಶ್​ ಚತುರ್ವೇದಿ ಬುಧವಾರದಂದು ನಿಧನರಾಗಿದ್ದಾರೆ. ನೀಲಿ ಛತ್ರಿವಾಲೆ, ಕಯಾಮತ್​ ನಂತಹ ಟಿವಿ ಶೋಗಳ ಮೂಲಕ ಖ್ಯಾತಿ ಗಳಿಸಿದ್ದ ಮಿಥಿಲೇಶ್​ ಚತುರ್ವೇದಿ ತಮ್ಮ ತವರೂರು ಲಕ್ನೋದಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ ನಿಧನರಾಗಿದ್ದಾರೆ. ಆರೋಗ್ಯ ಸುಧಾರಣೆಗೆಂದು ಮಿಥಿಲೇಶ್​ ಚತುರ್ವೇದಿ ಕೆಲವು ದಿನಗಳ ಹಿಂದೆ ಲಕ್ನೋಗೆ ಸ್ಥಳಾಂತರಗೊಂಡಿದ್ದರು. ಆದರೆ ಬುಧವಾರದಂದು ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ .

ಮಿಥಿಲೇಶ್ ಚಕ್ರವರ್ತಿ ನಿಧನದ ಬಗ್ಗೆ ಫೇಸ್​ಬುಕ್​ ಪೋಸ್ಟ್​ ಮೂಲಕ ಅಧಿಕೃತ ಮಾಹಿತಿ ನೀಡಿದ ಅಳಿಯ ಆಶಿಶ್​ ಚತುರ್ವೇದಿ, ನೀವು ಇಡೀ ವಿಶ್ವದಲ್ಲೇ ಅತ್ಯಂತ ಉತ್ತಮ ತಂದೆಯಾಗಿದ್ದೀರಿ. ನೀವು ನನಗೆ ಅಳಿಯನಂತೆ ಅಲ್ಲ ಮಗನ ರೀತಿಯಲ್ಲಿ ಪ್ರೀತಿಯನ್ನು ನೀಡಿದ್ದೀರಾ.ದೇವರು ನಿಮ್ಮ ಆತ್ಮಕ್ಕೆ ಶಾಂತಿ ನೀಡಲಿ ಎಂದು ಬರೆದುಕೊಂಡಿದ್ದಾರೆ. ಇದರ ಜೊತೆಯಲ್ಲಿ ಮಿಥಿಲೇಶ್​ ಚಕ್ರವರ್ತಿಯ ಕೆಲವು ಫೋಟೋಗಳನ್ನೂ ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಚಲನಚಿತ್ರ ನಿರ್ಮಾಪಕ ಹನ್ಸಲ್ ಮೆಹ್ತಾ ಕೂಡ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಹಂಚಿಕೊಳ್ಳುವ ಮೂಲಕ ಅಗಲಿದ ಪ್ರತಿಭೆ ಮಿಥಿಲೇಶ್​ ಚತುರ್ವೇದಿ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಮಿಥಿಲೇಶ್​ ನಿಧನದ ವಾರ್ತೆ ಎಲ್ಲೆಡೆ ವೈರಲ್​ ಆಗುತ್ತಿದ್ದಂತೆಯೇ ನೆಟ್ಟಿಗರೂ ಸಹ ಹಿರಿಯ ನಟನಿಗೆ ಶೃದ್ಧಾಂಜಲಿ ಸಲ್ಲಿಸಿದರು.

ಮಿಥಿಲೇಶ್ ಚತುರ್ವೇದಿ ಬಾಲಿವುಡ್‌ನಲ್ಲಿ ತುಂಬಾ ಸಕ್ರಿಯರಾಗಿದ್ದ ನಟರಾಗಿದ್ದರು. ಕೋಯಿ ಮಿಲ್ ಗಯಾ, ಅಶೋಕ, ಗದರ್ ಏಕ್ ಪ್ರೇಮ್ ಕಥಾ ಮತ್ತು ರೆಡಿ ಮುಂತಾದ ಅನೇಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ವರದಿಗಳ ಪ್ರಕಾರ ಮಿಥಿಲೇಶ್​ ಚತುರ್ವೇದಿ Talli Joddi ಎಂಬ ವೆಬ್​ಶೋನಲ್ಲಿಯೂ ಕಾಣಿಸಿಕೊಳ್ಳುವವರಿದ್ದರು ಎನ್ನಲಾಗಿದೆ. ತೀರಾ ಇತ್ತೀಚಿಗೆ ಮಿಥಿಲೇಶ್​​ ಪಟಿಯಾಲಾ ಬೇಬ್ಸ್​ ಎಂಬ ಟಿವಿ ಶೋನಲ್ಲಿ ಕಾಣಿಸಿಕೊಂಡಿದ್ದರು.

English News Just Click : newsnext.live/

ಇದನ್ನು ಓದಿ : man killed for bar bill : ಬಾರ್​ನಲ್ಲಿ ಬಿಲ್​ ಪಾವತಿ ಮಾಡುವ ವಿಚಾರಕ್ಕೆ ಜಗಳ : ಮಧ್ಯಸ್ಥಿಕೆ ವಹಿಸಿದವನ ಬರ್ಬರ ಕೊಲೆ

ಇದನ್ನೂ ಓದಿ : Dakshina Kannada district : ಅಹಿತಕರ ಘಟನೆ ತಪ್ಪಿಸಲು ದಕ್ಷಿಣ ಕನ್ನಡದಲ್ಲಿ ಹೊಸ ನಿಯಮ : ಬೈಕ್​ನಲ್ಲಿ ಹಿಂಬದಿ ಸವಾರರು ಕೂರುವ ಹಾಗಿಲ್ಲ

Mithilesh Chaturvedi Death: The Scam 1992 actor passes away

Comments are closed.