Airtel 5G : ಆಗಸ್ಟ್​ ಅಂತ್ಯದಿಂದ ದೇಶದಲ್ಲಿ ಏರ್​ಟೆಲ್​ನಿಂದ 5ಜಿ ನೆಟವರ್ಕ್​ ಸೇವೆ : ಇಲ್ಲಿದೆ ಹೆಚ್ಚಿನ ಮಾಹಿತಿ

Airtel  : ಆಗಸ್ಟ್​ ಅಂತ್ಯದ ವೇಳೆಗೆ ದೇಶದಲ್ಲಿ 5ಜಿ ನೆಟ್​ವರ್ಕ್ (Airtel 5G )​ ಸೇವೆಯನ್ನು ಆರಂಭಿಸುವುದಾಗಿ ಏರ್​ಟೆಲ್​​ ಘೋಷಣೆ ಮಾಡಿದೆ. ಆಗಸ್ಟ್​ ತಿಂಗಳಿನಿಂದ 5 ಜಿ ನೆಟ್​ವರ್ಕ್​ ಆರಂಭಿಸಲು ಎರಿಕ್ಸನ್​, ನೋಕಿಯಾ ಹಾಗೂ ಸ್ಯಾಮ್​ಸಂಗ್​ನೊಂದಿಗೆ 5ಜಿ ನೆಟ್​ವರ್ಕ್​ ಒಪ್ಪಂದಗಳಿಗೆ ಸಹಿ ಹಾಕಿರುವುದಾಗಿ ಟೆಲಿಕಾಂ ದೈತ್ಯ ಘೋಷಣೆ ಮಾಡಿದೆ. ಭಾರತದಲ್ಲಿ 5ಜಿ ಸೇವೆಗಳನ್ನು ರೋಲ್​ ಔಟ್​ ಮಾಡುವ ಮೊದಲ ಟೆಲಿಕಾಂ ದೈತ್ಯ ಏರ್​ಟೆಲ್​ ಆಗಲಿದೆ .

ಏರ್​ಟೆಲ್​ ಕಂಪನಿಯು ಎರಿಕ್ಸನ್​ ಹಾಗೂ ನೋಕಿಯಾದೊಂದಿಗೆ ದೀರ್ಘಕಾಲದ ಸಂಬಂಧವನ್ನು ಹೊಂದಿದೆ. ಆದರೆ ಸ್ಯಾಮ್​ಸಂಗ್​ನೊಂದಿಗೆ ಇತ್ತೀಚಿಗೆ ಒಪ್ಪಂದವನ್ನು ಮಾಡಿಕೊಂಡಿದೆ. ಟೆಲಿಕಾಂ ಇಲಾಖೆಯು ನಡೆಸಿದ ಸ್ಪೆಕ್ಟ್ರಂ ಹರಾಜಿನಲ್ಲಿ ಏರ್​ಟೆಲ್​ ಒಂದು ಭಾಗವಾಗಿತ್ತು. ಇದರಲ್ಲಿ ಟೆಲಿಕಾಂ ದೈತ್ಯ 900 MHz, 1800 MHz, 2100 MHz, 3300 MHz ಮತ್ತು 26 GHz ತರಂಗಾಂತರಗಳಲ್ಲಿ 19867.8 MHZ ಸ್ಪೆಕ್ಟ್ರಮ್ ಅನ್ನು ಬಿಡ್ ಮಾಡಿತು ಮತ್ತು ಸ್ವಾಧೀನಪಡಿಸಿಕೊಂಡಿದೆ .

ಭಾರತದಲ್ಲಿ 5ಜಿ ಸೇವೆಗಳನ್ನು ಹೊರತರುವ ಕುರಿತು ಮಾತನಾಡಿದ ಏರ್​ಟೆಲ್​ ಎಂಡಿ ಹಾಗೂ ಸಿಇಓ ಗೋಪಾಲ್​ ವಿಠ್ಠಲ್​​ , ಏರ್​ಟೆಲ್​ ಆಗಸ್ಟ್​ ತಿಂಗಳಲ್ಲಿ 5 ಜಿ ಸೇವೆಯನ್ನು ಆರಂಭಿಸಲಿದೆ ಎಂದು ಘೋಷಣೆ ಮಾಡಲು ನಮಗೆ ಹೆಮ್ಮೆ ಎನಿಸುತ್ತಿದೆ. ನಮ್ಮ ನೆಟ್​ವರ್ಕ್​ ಒಪ್ಪಂದಗಳನ್ನು ಅಂತಿಮಗೊಳಿಸಲಿದ್ದೇವೆ. 5G ಸಂಪರ್ಕದ ಸಂಪೂರ್ಣ ಪ್ರಯೋಜನಗಳನ್ನು ತಲುಪಿಸಲು ಏರ್‌ಟೆಲ್ ಪ್ರಪಂಚದಾದ್ಯಂತದ ಅತ್ಯುತ್ತಮ ತಂತ್ರಜ್ಞಾನ ಪಾಲುದಾರರೊಂದಿಗೆ ಕೆಲಸ ಮಾಡುತ್ತದೆ. ಭಾರತದ ಡಿಜಿಟಲ್ ಆರ್ಥಿಕತೆಯ ಪರಿವರ್ತನೆಯು ಟೆಲಿಕಾಂನಿಂದ ಮುನ್ನಡೆಸಲ್ಪಡುತ್ತದೆ ಮತ್ತು 5G ಕೈಗಾರಿಕೆಗಳು, ಉದ್ಯಮಗಳು ಮತ್ತು ಭಾರತದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯ ಡಿಜಿಟಲ್ ರೂಪಾಂತರವನ್ನು ಚಾಲನೆ ಮಾಡಲು ಆಟವನ್ನು ಬದಲಾಯಿಸುವ ಅವಕಾಶವನ್ನು ಒದಗಿಸುತ್ತದೆ ಎಂದು ಹೇಳಿದ್ದಾರೆ.

5ಜಿ ನೆಟ್​ವರ್ಕ್​ ಪರೀಕ್ಷಿಸಿದ ಭಾರತದ ಮೂರು ಟೆಲಿಕಾಂ ಕಂಪನಿಗಳಲ್ಲಿ ಏರ್​ಟೆಲ್​ ಮೊದಲನೆಯದಾಗಿದೆ. ಟೆಲಿಕಾಂ ಕಂಪನಿಯು ಹೈದರಾಬಾದ್‌ನಲ್ಲಿ ಲೈವ್ 4G ನೆಟ್‌ವರ್ಕ್‌ನಲ್ಲಿ ಭಾರತದ ಮೊದಲ 5G ಅನುಭವವನ್ನು ಪ್ರದರ್ಶಿಸಿದೆ.

ಇದನ್ನು ಓದಿ : Dakshina Kannada district : ಅಹಿತಕರ ಘಟನೆ ತಪ್ಪಿಸಲು ದಕ್ಷಿಣ ಕನ್ನಡದಲ್ಲಿ ಹೊಸ ನಿಯಮ : ಬೈಕ್​ನಲ್ಲಿ ಹಿಂಬದಿ ಸವಾರರು ಕೂರುವ ಹಾಗಿಲ್ಲ

ಇದನ್ನೂ ಓದಿ : India Vs West Indies 3rd T20 : ಕೆರಿಬಿಯನ್ ನಾಡಿನಲ್ಲಿ “ಕನ್ನಡವೇ ಸತ್ಯ, ಕನ್ನಡವೇ ನಿತ್ಯ” ಪೋಸ್ಟರ್

Airtel to start rolling out 5G network in India in August: Here is everything you need to know

Comments are closed.