Sonia Gandhi : ಜೂನ್​ 23ರಂದು ವಿಚಾರಣೆಗೆ ಹಾಜರಾಗುವಂತೆ ಸೋನಿಯಾ ಗಾಂಧಿಗೆ ಇಡಿ ಸಮನ್ಸ್​

ದೆಹಲಿ : Sonia Gandhi : ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 23 ರಂದು ಏಜೆನ್ಸಿಯ ಮುಂದೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ಇಡಿ) ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಹೊಸ ಸಮನ್ಸ್ ಜಾರಿ ಮಾಡಿದೆ.

ಸೋನಿಯಾ ಗಾಂಧಿಗೆ ಈ ಹಿಂದೆ ನೀಡಲಾದ ಸಮನ್ಸ್​ನ ಪ್ರಕಾರ ಅವರು ಜೂನ್​ 8ರಂದು ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಸೋನಿಯಾ ಗಾಂಧಿಗೆ ಕೋವಿಡ್​ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಅವರು ಹೆಚ್ಚಿನ ಕಾಲಾವಕಾಶ ಕೇಳಿದ್ದರು. ಹೀಗಾಗಿ ಅವರಿಗೆ ಜೂನ್​ 23ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸಮನಸ್​ ನೀಡಿದೆ. ಇತ್ತ ರಾಹುಲ್ ಗಾಂಧಿಗೂ ಹೊಸ ಸಮನ್ಸ್​ ಜಾರಿಯಾಗಿದ್ದು ಜೂನ್​ 13ರಂದು ಇಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.

ಜೂನ್​ 8ರಂದು ವಿಚಾರಣೆಗೆ ಹಾಜರಾಗುವಂತೆ ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಸಂಸದ ರಾಹುಲ್​ ಗಾಂಧಿಗೆ ಜಾರಿ ನಿರ್ದೇಶನಾಲಯ ಸಮನ್ಸ್​ ನೀಡಿತ್ತು ಎಂದು ಈ ಹಿಂದೆ ಕಾಂಗ್ರೆಸ್​ ಹೇಳಿಕೊಂಡಿತ್ತು. ಈ ವಿಚಾರಣೆಗೆ ಸೋನಿಯಾ ಗಾಂಧಿ ನಿಗದಿತ ದಿನಾಂಕದಂತು 100ಕ್ಕೆ 100 ಪ್ರತಿಶತ ಹಾಜರಿರಲಿದ್ದಾರೆ. ವಿದೇಶದಲ್ಲಿರುವ ರಾಹುಲ್​ ಗಾಂಧಿ ಸ್ವದೇಶಕ್ಕೆ ಮರಳಿದರೆ ಅವರೂ ಸಹ ವಿಚಾರಣೆಗೆ ಹಾಜರಾಗುತ್ತಾರೆ. ಇದು ಸಾಧ್ಯವಾಗದೇ ಇದ್ದಲ್ಲಿ ಇಡಿ ಎದುರು ಸಮಯಾವಕಾಶ ಕೇಳುತ್ತಾರೆ ಎಂದು ಕಾಂಗ್ರೆಸ್​ ವಕ್ತಾರ ಅಭಿಷೇಕ್​ ಸಿಂಘ್ವಿ ಹೇಳಿದ್ದಾರೆ.

ಸೋನಿಯಾ ಮತ್ತು ರಾಹುಲ್‌ಗೆ ಸಮನ್ಸ್ ನೀಡುವ ಮೊದಲು ಇಡಿ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಪವನ್ ಬನ್ಸಾಲ್ ಅವರನ್ನು ಪ್ರಶ್ನಿಸಿತ್ತು.

ಇದನ್ನು ಓದಿ : Virat Kohli New Record : 10 ವರ್ಷಗಳಲ್ಲಿ 20 ಸಾವಿರ ರನ್ ; ಶತಕ “ಬರ”ದೇ ಇದ್ರೂ ಕೊಹ್ಲಿಯೇ ಕಿಂಗ್

ಇದನ್ನೂ ಓದಿ : British Tourist Raped : ಮಸಾಜ್​ ನೆಪದಲ್ಲಿ ವಿದೇಶಿ ಮಹಿಳೆ ಮೇಲೆ ಗೋವಾದಲ್ಲಿ ಅತ್ಯಾಚಾರ : ಆರೋಪಿ ಬಂಧನ

ಇದನ್ನೂ ಓದಿ : Vijayendra CM : 2023 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೇ ಬಿವೈ ವಿಜಯೇಂದ್ರ ಸಿಎಂ : ಸಿದ್ಧವಾಗಿದೆ ಯಡಿಯೂರಪ್ಪ ಮಾಸ್ಟರ್ ಪ್ಲ್ಯಾನ್

ED issues fresh summons to Sonia Gandhi for appearance on June 23

Comments are closed.