ಗಂಗೋತ್ರಿ, ಬದರೀನಾಥ ಹಾಗೂ ಕೇದಾರನಾಥ ದೇಗುಲಗಳಲ್ಲಿ ಅನ್ಯಧರ್ಮೀಯರಿಗೆ ಪ್ರವೇಶ ನಿರ್ಬಂಧ

ಉತ್ತರಾಖಂಡ್​ನಲ್ಲಿರುವ ಹಿಂದೂ ಧಾರ್ಮಿಕ ಕೇಂದ್ರಗಳ ಪಾವಿತ್ರ್ಯತೆ ಕಾಪಾಡುವ ನಿಟ್ಟಿನಲ್ಲಿ ಶ್ರೀ ಗಂಗೋತ್ರಿ ದೇವಾಲಯ ಸಮಿತಿಯು ಮಹತ್ವದ ನಿರ್ಧಾರ ಕೈಗೊಂಡಿದೆ. ದೇವಸ್ಥಾನದ ಸಮಿತಿ ನಡೆಸಿದ ಸಭೆಯಲ್ಲಿ ಮಹತ್ವದ ಸಭೆಯಲ್ಲಿ, ಇನ್ಮುಂದೆ ಹಿಂದೂಯೇತರರಿಗೆ ಗಂಗೋತ್ರಿ ಧಾಮಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಘೋಷಿಸಿದೆ.
ಮುಖ್ಯ ದೇವಾಲಯ, ಬದರಿನಾಥ ಹಾಗೂ ಕೇದಾರನಾಥ ಹಾಗೂ ಗಂಗೆಯ ಚಳಿಗಾಲದ ವಾಸಸ್ಥಾನವಾದ ಮುಖ್ಬಾಗಳಲ್ಲಿ ಈ ನಿಯಮ ಅನ್ವಯವಾಗಲಿದೆ ಎಂದು ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸುರೇಶ್​ ಸೆಮ್ವಾಲ್​ ತಿಳಿಸಿದ್ದಾರೆ. ಧಾಮ ಮತ್ತು ಮುಖ್ಬಾಗಳಿಗೆ ಹಿಂದೂಯೇತರ ಪ್ರವೇಶ ನಿರ್ಬಂಧಿಸಲಾಗಿದೆ. ಇದು ನಮ್ಮ ಧಾರ್ಮಿಕ ನಂಬಿಕೆ ಹಾಗೂ ಸಂಪ್ರದಾಯಗಳ ರಕ್ಷಣೆಗೆ ಕೈಗೊಂಡ ನಿರ್ಧಾರವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಂದೇ ಮಾತರಂ ಗೀತೆಗೆ ಶೀಘ್ರದಲ್ಲೇ ರಾಷ್ಟ್ರಗೀತೆ ಸ್ಥಾನಮಾನ..?

ಈ ವಿಚಾರವಾಗಿ ಬಿಜೆಪಿ ನಾಯಕ ಹಾಗೂ ಶ್ರೀ ಬದರೀನಾಥ – ಕೇದಾರನಾಥ ದೇವಾಲಯ ಸಮಿತಿ ಅಧ್ಯಕ್ಷ ಹೇಮಂತ್​ ದ್ವಿವೇದಿ ಮಾತನಾಡಿದ್ದು, ಈ ಹಿಂದೆ ಕೂಡ ಕೇದಾರನಾಥ ಹಾಗೂ ಮಾನಾ ಪ್ರದೇಶಗಳಲ್ಲಿ ಹಿಂದೂಯೇತರರಿಗೆ ಪ್ರವೇಶ ನಿರ್ಬಂಧವಿತ್ತು. ಆದರೆ ಬಿಜೆಪಿಯೇತರ ಸರ್ಕಾರಗಳ ಅಧಿಕಾರಾವಧಿಯಲ್ಲಿ ಪ್ರವೇಶ ನೀಡಲಾಗಿತ್ತು. ಇದೀಗ ಹಳೆ ನಿಯಮ ಮರುಜಾರಿಯಾಗಿದೆ ಎಂದಿದ್ದಾರೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories