ವಂದೇ ಮಾತರಂ ಗೀತೆಗೆ ಶೀಘ್ರದಲ್ಲೇ ರಾಷ್ಟ್ರಗೀತೆ ಸ್ಥಾನಮಾನ..?

ಬಕೀಂ ಚಂದ್ರ ಚಟರ್ಜಿ ರಚಿತ ವಂದೇ ಮಾತರಂ ಗೀತೆಗೆ 150 ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಗೀತೆಗೆ ವಿಶೇಷ ಸ್ಥಾನಮಾನ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ರಾಷ್ಟ್ರಗೀತೆ ಹಾಡುವಾಗ ದೇಶದ ಜನತೆ ಪಾಲಿಸಬೇಕಾದ ಶಿಷ್ಟಾಚಾರಗಳನ್ನು ವಂದೇ ಮಾತರಂ ಗೀತೆಗೂ ವಿಸ್ತರಿಸುವ ಬಗ್ಗೆ ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜನತೆಗೆ ದೇಶ ಭಕ್ತಿಯ ಸ್ಫೂರ್ತಿ ನೀಡುವ ಕಾರ್ಯವನ್ನು ವಂದೇಮಾತರಂ ​ಗೀತೆ ಮಾಡಿತ್ತು. ಸ್ವಾತಂತ್ರ್ಯ ಚಳವಳಿಗೆ ಸ್ಫೂರ್ತಿ ನೀಡಿದ ಗೀತೆಗೆ 150 ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರಗೀತೆಯ ಸ್ಥಾನಮಾನ ನೀಡುವ ಬಗ್ಗೆ ಚರ್ಚೆ ಮುಂದುವರಿದಿದೆ.

ಇದನ್ನೂ ಓದಿ: ಭಾರತ ಸರ್ಕಾರದ ಅತ್ಯುನ್ನತ ಪದ್ಮ ಪ್ರಶಸ್ತಿ 2026: ಯಾರಿಗೆ ಯಾವ ಪ್ರಶಸ್ತಿ? ಇಲ್ಲಿದೆ ಸಂಪೂರ್ಣ ಪಟ್ಟಿ

ಒಂದು ವೇಳೆ ವಂದೇಮಾತರಂ ಗೀತೆಗೂ ಈ ಸ್ಥಾನಮಾನ ದೊರಕಿದಲ್ಲಿ ರಾಷ್ಟ್ರಗೀತೆ ಶಿಷ್ಟಾಚಾರ ಪಾಲನೆ ಮಾಡಬೇಕಾಗಿ ಬರಲಿದೆ. ವಂದೇ ಮಾತರಂ ಗೀತೆ ಹಾಡುವ ಸಂದರ್ಭದಲ್ಲಿ ಪ್ರತಿಯೊಬ್ಬರೂ ಎದ್ದು ನಿಂತು ಗೌರವ ಸಲ್ಲಿಸುವುದು ಕಡ್ಡಾಯವಾಗಲಿದೆ.
ಈ ನಿಯಮ ಉಲ್ಲಂಘನೆ ಮಾಡಿದವರಿಗೆ ರಾಷ್ಟ್ರಗೌರವ 1971 ಹಾಗೂ ವಿಧಿ 51(ಎ)ಅಡಿಯಲ್ಲಿ 3 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸುವ ಅವಕಾಶ ಇದೆ. ಇನ್ಮುಂದೆ ಈ ನಿಯಮವನ್ನು ವಂದೇ ಮಾತರಂ ಗೀತೆಗೂ ಜಾರಿಗೆ ತರಲಾಗುತ್ತದೆ ಎನ್ನಲಾಗಿದೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories