Mysore Dasara 2022 : ದಸರಾಕ್ಕೆ ಸಿದ್ದವಾಗುತ್ತಿದೆ ಅರಮನೆ ನಗರಿ ಮೈಸೂರು

ಮೈಸೂರು : ನಾಡಹಬ್ಬ ದಸರಾಕ್ಕಾಗಿ ಅರಮನೆ ನಗರಿ ಮೈಸೂರು ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ. ಮೈಸೂರು ದಸರಾದಲ್ಲಿ (Mysore Dasara 2022) ನಡೆಯುವ ಜಂಬೂ ಸವಾರಿಗಾಗಿ ಗಜಪಡೆ ಸಜ್ಜುಗೊಳ್ಳುತ್ತಿವೆ. ಈ ಬಾರಿ ಅದ್ದೂರಿ ದಸರಾ ಆಚರಣೆಗೆ ರಾಜ್ಯ ಸರಕಾರ ಮುಂದಾಗಿರುವ ಹಿನ್ನೆಲೆಯಲ್ಲಿ ಲಕ್ಷಾಂತರ ಮಂದಿ ಆಗಮಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿವೆ.

ಜಂಬೂ ಸವಾರಿಗಾಗಿ ಈಗಾಗಲೇ ಕಾಡಿನಿಂದ ಗಜಪಡೆಗಳನ್ನು ಮೈಸೂರಿಗೆ ತರಿಸಿ ತೂಕವನ್ನು ನೊಡಿದ ನಂತರದಲ್ಲಿ, ಆನೆಗಳಿಗೆ ಪೂಜೆಯನ್ನು ಸಲ್ಲಿಸಲಾಗುತ್ತದೆ. ನಂತರದಲ್ಲಿ ಆನೆಗಳಿಗೆ ನಿತ್ಯವೂ ಮರಳಿನ ಮೂಟೆಗಳನ್ನು ಹೊರಿಸಿ, ತಾಲೀಮು ನಡೆಸುವ ಮೂಲಕ ತರಬೇತಿಯನ್ನು ನಿಡಲಾಗುತ್ತದೆ. ಅಂಬಾರಿ ಬರೋಬ್ಬರಿ 750 ಕೆ ಜಿ ತೂಕ ಇರುವುದರಿಂದ ಅದಕ್ಕಿಂತ ಹೆಚ್ಚಿನ ತೂಕವಿರುವ ಮರಳಿನ ಮೂಟೆಯನ್ನು ಹೊರೆಸಿ ತರಬೇತಿಯನ್ನು ನೀಡಲಾಗುತ್ತದೆ. ಆರಂಭದಲ್ಲಿ 300 ಕೆಜಿಯ ಮರಳಿನ ಮೂಟೆಯನ್ನ ಹೊರೆಸಲಾಗುತ್ತದೆ ಹಂತ ಹಂತವಾಗಿ ಮರಳಿನ ತೂಕವನ್ನ ಹೆಚ್ಚಿಸುವಂತಹ ಪ್ರಕ್ರಿಯೆ ನಡೆಯುತ್ತದೆ. ಕೊನೆಯಲ್ಲಿ800 ರಷ್ಟು ತೂಕವನ್ನು ಹೆಚ್ಚಿಸಿ ತರಬೇತಿಯನ್ನು ನೀಡಲಾಗುತ್ತದೆ. ಜಂಬೂ ಸವಾರಿಗಾಗಿ ಈ ಬಾರಿ ಒಟ್ಟು 14 ಆನೆಗಳನ್ನು ಕರೆಯಿಸಲಾಗಿದೆ. ಅರ್ಜುನ, ಶ್ರೀರಾಮ, ಪಾರ್ಥಸಾರಥಿ, ಗೋಪಿ, ಸುಗ್ರೀವ, ವಿಜಯ, ಅಭಿಮನ್ಯು, ಚೈತ್ರ, ಗೋಪಾಲಸ್ವಾಮಿ, ಮಹೇಂದ್ರ, ಭೀಮ, ಕಾವೇರಿ, ಲಕ್ಷೀ, ಧನಂಜಯ ಆನೆಗಳು ಜಂಬೂ ಸವಾರಿಗೆ ಸಿದ್ದವಾಗುತ್ತಿವೆ.

ಇದನ್ನೂ ಓದಿ: ರಾಜ್ಯ ರಾಜಧಾನಿಯಲ್ಲಿ ಎರಡನೇ ದಿನವೂ ಬುಲ್ಡೋಜರ್​ ಸದ್ದು : ಕೆ.ಆರ್​ಪುರಂನಲ್ಲಿ ಕಾರ್ಯಾಚರಣೆ

ಇದನ್ನೂ ಓದಿ: ಈ ಬಾರಿ ಅದ್ದೂರಿ ನಾಡಹಬ್ಬ, ದಸರಾ ಉದ್ಘಾಟಿಸಲಿದ್ದಾರೆ ರಾಷ್ಟ್ರಪತಿ ದ್ರೌಪದಿ ಮುರ್ಮು

ಮೈಸೂರು ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿ. ದಸರಾಕ್ಕಾಗಿ ಮೈಸೂರು ನಗರ ವಿದ್ಯುತ್‌ ದೀಪಗಳಿಂದ ಅಲಂಕಾರಗೊಳ್ಳುತ್ತಿದೆ. ಈ ಭಾರಿಯ ವಿದ್ಯುತ್‌ ದೀಪಗಳ ಅಲಂಕಾರಕ್ಕೆ ಬೇಕಾದ ಸಿದ್ದತೆಗಳನ್ನು ಆರಂಭಗೊಂಡಿವೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕೋವಿಡ್‌ ವೈರಸ್‌ ಸೋಂಕಿನ ಆರ್ಭಟದಿಂದಾಗಿ ಸರಳ ದಸರಾವನ್ನು ಆಚರಿಸಲಾಗಿತ್ತು. ಆದ್ರೆ ಮೈಸೂರು ನಗರ ವಿದ್ಯುತ್‌ ದೀಪಾಲಂಕಾರಗಳಿಂದ ಬೆಳಗಿತ್ತು. ಆದ್ರೆ ಈ ಬಾರಿ ವಿದ್ಯುತ್‌ ಅಲಂಕಾರವನ್ನು ಹೆಚ್ಚಿಸಲಾಗುತ್ತಿದೆ. ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ಬೇಕಾದ ಸಿದ್ದತೆ ಮಾಡಿಕೊಂಡಿದೆ. ಮೈಸೂರಿನ ಪ್ರಮುಖ ವೃತ್ತಗಳು, ಪಾರಂಪರಿಕ ಕಟ್ಟಡಗಳ ಜೊತೆಗೆ ಮೈಸೂರು ನಗರದಲ್ಲಿನ ಸುಮಾರು 10 ಕಿ.ಮೀ. ದೂರದ ವರೆಗೆ ದೀಪಾಲಂಕಾರವನ್ನು ಮಾಡಲಾಗುತ್ತಿದೆ. ಮೈಸೂರು ಪ್ರವೇಶಿಸುವ ದ್ವಾರದಿಂದ ಹಿಡಿದು ಕೆ.ಆರ್.‌ವೃತ್ತ, ಬನ್ನಿ ಮಂಟಪ, ಎಲ್‌ಐಸಿ ವೃತ್ತ, ಬಸ್‌ ನಿಲ್ದಾಣ, ನಂಜನಗೂಡು, ಬನ್ನೂರು, ಹುಣಸೂರು, ಬೂಕಾದಿ, ಬೂಸಂದವಾಡಿ ಸೇರಿದಂತೆ ಎಲ್ಲಾ ಕಡೆಗಳಲ್ಲಿಯೂ ದೀಪಾಲಂಕಾರವನ್ನು ಮಾಡಲಾಗುತ್ತಿದೆ.

ಇದನ್ನೂ ಓದಿ:ಕೊಹಿನೂರ್​ ವಜ್ರ ಪುರಿ ಜಗನ್ನಾಥ ದೇಗುಲಕ್ಕೆ ಸೇರಿದ್ದು ’ : ಸಾಮಾಜಿಕ ಸಂಘಟನೆಯಿಂದ ರಾಷ್ಟ್ರಪತಿಗೆ ಪತ್ರ

Mysore Dasara 2022 Cultural City Dasara Preparation

Comments are closed.