Fake pregnancy: ಪ್ರೆಗ್ನೆಂಟ್ ಆಗಿ ಆರೇ ತಿಂಗಳಿಗೆ ಹೆತ್ತ ಮಹಿಳೆ; ಆಸ್ಪತ್ರೆಯಲ್ಲಿ ಮನೆಮಂದಿ ಆಕೆ ಕೈಯಲ್ಲಿ ಕಂಡಿದ್ದೇನು ಗೊತ್ತಾ

ಲಕ್ನೋ: Fake pregnancy: ಈ ಸಮಾಜವೇ ಹೀಗೆ.. ವಿದ್ಯಾಭ್ಯಾಸ ಮುಗಿಯುವ ತನಕ ಓದು ಮುಗೀತಾ ಅನ್ನೋ ಪ್ರಶ್ನೆ.. ಅದಾದ ಮೇಲೆ ಮದುವೆ ಚಿಂತೆ.. ಅಂತೂ ಇಂತೂ ಮದುವೆ ಆಯ್ತು.. ಜನರು ತಲೆ ತಿನ್ನೋದು ಬಿಡ್ತಾರೆ ಅನ್ನೋಷ್ಟರಲ್ಲಿ ಗುಡ್ ನ್ಯೂಸ್ ಯಾವಾಗ ಅನ್ನೋ ಪ್ರಶ್ನೆಗಳು.. ಇದು ಪ್ರತಿ ಹೆಣ್ಣುಮಗಳು ಅನುಭವಿಸುವ ನೋವು.. ಸಂಬಂಧಿಕರು, ನೆರೆಹೊರೆಯವರ ಪ್ರಶ್ನೆಗೆ ಕೆಲವರು ಎದುರುತ್ತರ ಕೊಟ್ಟು ಸುಮ್ಮನಾದ್ರೆ ಇನ್ನು ಕೆಲವರು ಮನಸ್ಸಿಗೆ ಹಚ್ಕೊಂಡು ಕೊರಗುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ಕುಟುಂಬದ, ಸಮಾಜದ ಪ್ರಶ್ನೆಗಳಿಗೆ ಉತ್ತರ ಕೊಡಲಾಗದೇ ಮಾಡಿರುವ ಕೆಲಸ ನೋಡಿ ಎಲ್ಲರೂ ಬೆಚ್ಚಿಬಿದ್ದಿದ್ದಾರೆ.

ಇದನ್ನೂ ಓದಿ: Siddhant Veer Suryavanshi : ಜಿಮ್‌ನಲ್ಲಿ ವರ್ಕೌಟ್‌ ಮಾಡುವಾಗ ಕುಸಿದು ಬಿದ್ದು ಖ್ಯಾತ ಕಿರುತೆರೆ ನಟ ಸಾವು

ಉತ್ತರ ಪ್ರದೇಶದ ಎತವಾಹ್ ನಿವಾಸಿ 40 ವರ್ಷದ ಮಹಿಳೆ ಮದುವೆಯಾಗಿ 18 ವರ್ಷಗಳು ಕಳೆದಿವೆ. ಆದರೂ ಮಕ್ಕಳಾಗಿಲ್ಲ. ಮೊದಮೊದಲು ನೆರೆಹೊರೆಯವರು, ಮನೆಯವರ, ಸಂಬಂಧಿಕರ ಗುಡ್ ನ್ಯೂಸ್ ಯಾವಾಗ ಎಂಬ ಪ್ರಶ್ನೆಗಳಿಗೆ ಉತ್ತರ ಕೊಡ್ತಾ ಹೇಗೋ ಮ್ಯಾನೇಜ್ ಮಾಡ್ಕೊಂಡು ಹೋಗಿದ್ದಾಳೆ. ಆದ್ರೆ ವರ್ಷಗಳು ಕಳೆಯುತ್ತಾ ಹೋದಂತೆ ಜನ ಚುಚ್ಚುಮಾತು ಆಡೋಕೆ ಶುರುಮಾಡಿದ್ದಾರೆ. ಎಲ್ಲರ ಮೂದಲಿಕೆ, ಚುಚ್ಚುಮಾತುಗಳಿಗೆ ಬೇಸತ್ತ ಆಕೆ 6 ತಿಂಗಳ ಹಿಂದೆ ತಾನು ಗರ್ಭ ಧರಿಸಿರುವುದಾಗಿ ಹೇಳಿದ್ದಾರೆ. ಇದರಿಂದ ಆಕೆಯ ಮನೆಯವರು ಫುಲ್ ಖುಷ್ ಆಗಿದ್ದಾರೆ.

ಮಹಿಳೆ ಪ್ರತಿ ತಿಂಗಳು ವೈದ್ಯರ ಬಳಿ ತಪಾಸಣೆಗೆ ಹೋಗೋದು, ಗರ್ಭಿಣಿಯಾದ ತನಗೆ ಬೇಕಾದ ಆರೈಕೆಗಳನ್ನು ಮಾಡಿಕೊಂಡಿದ್ದಾರೆ. ಹೀಗೆ 6 ತಿಂಗಳುಗಳೇ ಕಳೆದಿವೆ. ಆದರೆ ಇತ್ತೀಚೆಗೆ ಹೊಟ್ಟೆನೋವು ಅಂತ ಹೇಳಿಕೊಂಡಿದ್ದ ಆಕೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿದ್ದಾರೆ. ಅಲ್ಲಿ ನಿಗದಿತ ಸಮಯಕ್ಕಿಂತ ಮೊದಲೇ ಅಂದರೆ, 6 ತಿಂಗಳಿಗೆ ಮಗುವಿಗೆ ಜನ್ಮ ನೀಡಿದ್ದೇನೆ ಎಂದು ಮನೆಯವರಿಗೆ ತಿಳಿಸಿದ್ದಾರೆ.

ಆದರೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಮಹಿಳೆಯನ್ನು ಪರೀಕ್ಷಿಸಿ ನೋಡಿದಾಗ ಆಕೆಯ ಬಳಿ ಇರುವುದು ಮಗುವಲ್ಲ, ಪ್ಲಾಸ್ಟಿಕ್ ಗೊಂಬೆ ಎಂದು ಹೇಳಿದ್ದಾರೆ. ಹೀಗೆ ಮಹಿಳೆ 6 ತಿಂಗಳಿನಿಂದ ಹೇಳಿಕೊಂಡು ಬಂದಿದ್ದ ಸುಳ್ಳು ಬಯಲಾಗಿದೆ. ಅಲ್ಲದೇ ಮಹಿಳೆ ತೆಗೆಸಿಕೊಂಡಿದ್ದ ಎಕ್ಸ್ ರೇ, ಸ್ಕ್ಯಾನಿಂಗ್ ಪೇಪರ್ ಗಳನ್ನು ಪರಿಶೀಲಿಸಿದ ವೈದ್ಯರೇ ಬೆಚ್ಚಿಬಿದ್ದು, ಎಲ್ಲವೂ ನಕಲಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: Manas Joshi gives birth to a baby girl : ಹೆಣ್ಣು ಮಗುವಿಗೆ ಜನ್ಮ ನೀಡಿದ ಕಿರುತೆರೆ ನಟಿ ಮಾನಸ ಜೋಶಿ

ಮಹಿಳೆ ಪ್ರತೀ ತಿಂಗಳು ಹೊಟ್ಟೆನೋವು ಎಂದು ತಪಾಸಣೆಗೆ ಬರುತ್ತಿದ್ದರೇ ಹೊರತು ಯಾವತ್ತೂ ಗರ್ಭಿಣಿ ತಪಾಸಣೆಗೆ ಬಂದಿರಲಿಲ್ಲ ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಕೀಯ ಅಧೀಕ್ಷಕ ಡಾ.ಹರ್ಷಿತ್ ಅವರು ಮಾಹಿತಿ ನೀಡಿದ್ದಾರೆ. ಸಮಾಜದ ಚುಚ್ಚುಮಾತುಗಳು, ಮೂದಲಿಕೆ ಒಬ್ಬರನ್ನು ಯಾವ ಮಟ್ಟಕ್ಕೆ ತಂದು ನಿಲ್ಲಿಸಸುತ್ತೆ ಎಂಬುದಕ್ಕೆ ಈ ಘಟನೆ ಉತ್ತಮ ನಿದರ್ಶನವಾಗಿದೆ.

Fake pregnancy: UP woman fakes pregnancy after family taunts her for not conceiving

Comments are closed.