Female constables cops bank robbers: ಬ್ಯಾಂಕ್‌ ದರೋಡೆಕೋರರ ವಿರುದ್ಧ ಹೋರಾಡಿದ ಇಬ್ಬರು ಮಹಿಳಾ ಕಾನ್ಸ್ಟೆಬಲ್ಸ್‌: ವಿಡಿಯೋ ವೈರಲ್

ಬಿಹಾರ: (Female constables cops bank robbers) ಬ್ಯಾಂಕ್‌ ದರೋಡೆ ಮಾಡಲು ಬಂದಿದ್ದ ಮೂವರು ದರೋಡೆಕೋರರನ್ನು ಇಬ್ಬರು ಧೈರ್ಯಶಾಲಿ ಮಹಿಳೆಯರು ಹೊಡೆದುರುಳಿಸಿ ಬ್ಯಾಂಕ್‌ ದರೋಡೆಯನ್ನು ತಪ್ಪಿಸಿದ ಘಟನೆ ನಡೆದಿದೆ. ಇದರ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ಸಖತ್‌ ವೈರಲ್‌ ಆಗಿದ್ದು, ಇಬ್ಬರು ಮಹಿಳಾ ಕಾನ್ಸ್ಟೆಬಲ್‌ ಗಳ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಬಿಹಾರದ ಹಾಜಿಪುರ ಜಿಲ್ಲೆಯಲ್ಲಿ ಈ ಘಟನೆ (Female constables cops bank robbers) ನಡೆದಿದೆ. ಮೂವರು ದರೋಡೆಕೋರರು ಬ್ಯಾಂಕ್‌ ಗೆ ಪ್ರವೇಶಿಸಿದ್ದು, ಬ್ಯಾಂಕಿನಲ್ಲಿ ಕಾವಲುಗಾರರಾಗಿದ್ದ ಮಹಿಳಾ ಕಾನ್ಸ್ಟೆಬಲ್‌ ಗಳು ಯಾವುದೇ ಹಿಂಜರಿಕೆಯಿಲ್ಲದೇ ಧೈರ್ಯದಿಂದ ದರೋಡೆಕೋರರೊಂದಿಗೆ ಹೋರಾಟ ನಡೆಸಿದ್ದಾರೆ. ಸದ್ಯ ಇಬ್ಬರು ಮಹಿಳಾ ಕಾನ್ಸ್ಟೆಬಲ್‌ ಗಳು ದರೋಡೆಕೋರರೊಂದಿಗೆ ಹೋರಾಡುತ್ತಿರುವ ದೃಶ್ಯ ವೈರಲ್‌ ಆಗಿದ್ದು, ಜೂಹಿ ಕುಮಾರಿ ಹಾಗೂ ಶಾಂತಿ ಬ್ಯಾಂಕ್‌ ಗೆ ಕಾವಲು ಕಾಯುತ್ತಿರುವಾಗ ಮೂವರು ಶಸ್ತ್ರಸಜ್ಜಿತ ವ್ಯಕ್ತಿಗಳು ಬ್ಯಾಂಕ್‌ ಗೆ ಬಲವಂತವಾಗಿ ನುಗ್ಗಲು ಪ್ರಯತ್ನಿಸಿದ್ದಾರೆ.

ದರೋಡೆಕೋರರು ಮುಖಕ್ಕೆ ಮುಸುಕನ್ನು ಹಾಕಿಕೊಂಡಿದ್ದು, ಬ್ಯಾಂಕಿನಲ್ಲಿ ಕಾಣಿಸಿಕೊಂಡಾಗ ಸಿಬ್ಬಂದಿಯೊಬ್ಬರು ತಮ್ಮ ದಾಖಲೆಗಳನ್ನು ನೀಡುವಂತೆ ಕೇಳಿದ್ದಾರೆ. ಆ ಸಂದರ್ಭ ಓರ್ವ ದರೋಡೆಕೋರ ತನ್ನಲ್ಲಿರುವ ಪಿಸ್ತೂಲ್‌ ಅನ್ನು ಹೊರತೆಗೆದನು. ನಂತರ ಮಹಿಳಾ ಕಾನ್ಸ್ಟೆಬಲ್‌ ಹತ್ತಿರವಿದ್ದ ರೈಫಲ್‌ ಗಳನ್ನು ಸಹ ದರೋಡೆಕೋರರು ಕಸಿದುಕೊಳ್ಳಲು ಪ್ರಯತ್ನಿಸುತ್ತಾರೆ. ಆಗ ಮಹಿಳಾ ಕಾನ್ಸ್ಟೆಬಲ್‌ ಗಳು ಹೆದರದೆ ದರೋಡೆಕೋರರೊಂದಿಗೆ ಹೋರಾಟ ನಡೆಸಿ ಯಶಸ್ವಿಯಾಗುತ್ತಾರೆ.

ಇದಾದ ಬಳಿಕ ದರೋಡೆಕೋರರು ಅಲ್ಲಿಂದ ಪರಾರಿಯಾಗಲು ಪ್ರಯತ್ನಿಸಿದ್ದು, ಜೂಹಿ ಕುಮಾರಿ ಎನ್ನುವ ಕಾನ್ಸ್ಟೆಬಲ್‌ ಕಳ್ಳರ ಮೇಲೆ ಗುಂಡು ಹಾರಿಸಿ ದರೋಡೆ ಯತ್ನವನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾಗುತ್ತಾರೆ. ಇನ್ನೂ ಈ ಹೋರಾಟದಲ್ಲಿ ಇಬ್ಬರು ಮಹಿಳಾ ಕಾನ್ಸ್ಟೆಬಲ್‌ ಗಳಿಗೂ ಗಾಯಗಳಾಗಿವೆ.

” ಮೂವರು ದರೋಡೆಕೋರರು ಬಂದಾಗ ಅವರಿಗೆ ಕೆಲಸವಿದೆಯೇ ಎಂದು ಕೇಳಿದ್ದೇವೆ. ಹೈದು ಎಂಬುದಾಗಿ ಅವರು ಹೇಳಿದಾಗ ಬ್ಯಾಂಕ್‌ ಪಾಸ್‌ ಪುಸ್ತಕವನ್ನು ತೋರಿಸಲು ಹೇಳಿದ್ದೇವೆ. ಈ ಸಂದರ್ಭದಲ್ಲಿ ಅವರು ತಮ್ಮ ಕೈಯಲ್ಲಿದ್ದ ಬಂದೂಕನ್ನು ಹೊರತೆಗೆದರು. ನಾವೂ ಅವರಿಗೆ ಗನ್‌ ತೋರಿಸಿದ್ದೇವೆ . ಆಗ ನಮ್ಮಲ್ಲಿರುವ ಗನ್‌ ಅನ್ನು ಕಸಿದುಕೊಳ್ಳಲು ಪ್ರಯತ್ನಿಸಿದರು. ಹೋರಾಟದ ಕೊನೆಯಲ್ಲಿ ಮೂವರು ಪರಾರಿಯಾಗಲು ಪ್ರಯತ್ನಿಸಿದರು ” ಎಂದು ಮಹಿಳಾ ಕಾನ್ಸ್ಟೆಬಲ್‌ ತಿಳಿಸಿದ್ದಾರೆ.

ಇದನ್ನೂ ಓದಿ : 80th old woman video viral: ಮುಂಬೈ ಮ್ಯಾರಥಾನ್‌ ನಲ್ಲಿ ಸೀರೆಯುಟ್ಟು ಓಡಿದ 80 ವರ್ಷದ ಮಹಿಳೆ

ಇದನ್ನೂ ಓದಿ : Mumbai-goa highway accident: ಕಾರು – ಟ್ರಕ್ ಭೀಕರ ಅಪಘಾತ : 9 ಮಂದಿ ಸಾವು

ಇದನ್ನೂ ಓದಿ : Pradhan Mantri Fasal Bima Yojana : ರೈತರಿಗೆ ಸಿಹಿ ಸುದ್ದಿ : ಬೆಳೆ ಹಾನಿಗೆ ಕೇಂದ್ರದಿಂದ ಸಿಗಲಿದೆ ಆರ್ಥಿಕ ನೆರವು

ಸದ್ಯ ಈ ಹೋರಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮಹಿಳೆಯರ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

Female constables cops bank robbers: Two female constables who fought against bank robbers: Video viral

Comments are closed.