ಒಡಿಶಾ : ದುರ್ಗ್-ಪುರಿ ಎಕ್ಸ್‌ಪ್ರೆಸ್‌ನ ಎಸಿ ಕೋಚ್‌ನಲ್ಲಿ ಬೆಂಕಿ

ಭುವನೇಶ್ವರ: Durg-Puri Express : ಒಡಿಶಾದ ಬಾಲಸೋರ್‌ನಲ್ಲಿ ನಡೆದ ಕೋರಮಂಡಲ್‌ ಎಕ್ಸ್‌ಪ್ರೆಸ್‌ ರೈಲು ಹಾಗೂ ಬೆಂಗಳೂರು ಹೌರಾ ಎಕ್ಸ್‌ಪ್ರೆಸ್‌ ರೈಲಿನ ನಡುವೆ ನಡೆದಿದ್ದ ಭೀಕರ ರೈಲು ದುರಂತದ ಕಹಿನೆನಪು ಮಾಸುವ ಮುನ್ನವೇ ಮೊತ್ತೊಂದು ಘಟನೆ ಒಡಿಶಾದಲ್ಲಿ ನಡೆದಿದೆ. ಒಡಿಶಾದ ನುವಾಪಾದ ಜಿಲ್ಲೆಯಲ್ಲಿ ದುರ್ಗ್-ಪುರಿ ಎಕ್ಸ್‌ಪ್ರೆಸ್‌ನ ಹವಾನಿಯಂತ್ರಿತ ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರಯಾಣಿಕರು ಭಯಭೀತರಾಗಿದ್ದಾರೆ. ಅದರೆ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪೂರ್ವ ಕರಾವಳಿ ರೈಲ್ವೆ ತಿಳಿಸಿದೆ

ಖರಿಯಾರ್ ರಸ್ತೆ ನಿಲ್ದಾಣವನ್ನು ತಲುಪುತ್ತಿದ್ದಂತೆ ರೈಲಿನ B3 ಕೋಚ್‌ನಲ್ಲಿ ಹೊಗೆ ಕಾಣಿಸಿಕೊಂಡಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಬ್ರೇಕ್‌ನಲ್ಲಿನ ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಘರ್ಷಣೆ ಉಂಟಾಗಿ ಬ್ರೇಕ್‌ಬ್ಯಾಕ್‌ನಲ್ಲಿ ಕಾಣಿಸಿಕೊಂಡಿದ್ದ ಬೆಂಕಿ ರೈಲಿಗೆ ವ್ಯಾಪಿಸಿತ್ತು. ಸುಮಾರು ಒಂದು ಗಂಟೆಯೊಳಗೆ ಸಮಸ್ಯೆಯನ್ನು ಸರಿಪಡಿಸಲಾಯಿತು ಮತ್ತು ರೈಲು ರಾತ್ರಿ 11 ಗಂಟೆಯ ವೇಳೆಗೆ ರೈಲು ಪ್ರಯಾಣ ಬೆಳೆಸಿದೆ. ಆದರೆ ಘಟನೆಯಿಂದಾಗಿ ಪ್ರಯಾಣಿಕರು ಭಯಗೊಂಡು ರೈಲಿನಿಂದ ಹೊರಗೆ ಓಡಿ ಬಂದಿದ್ದಾರೆ.

ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್ ಅಪಘಾತದಲ್ಲಿ 288 ಜನರನ್ನು ಬಲಿತೆಗೆದುಕೊಂಡಿದ್ದು, ಸುಮಾರು 1,100 ಕ್ಕೂ ಹೆಚ್ಚು ಅಧಿಕ ಮಂದಿ ಗಾಯಗೊಂಡಿದ್ದರು. ದೇಶದಲ್ಲಿ ನಡೆದಿರುವ ರೈಲು ದುರಂತಗಳ ಪೈಕಿ ಬಾಲಸೋರ್‌ ರೈಲು ದುರಂತ ಅತ್ಯಂತ ಭೀಕರ ರೈಲು ದುರಂತ ಎಂದು ಹೇಳಲಾಗುತ್ತಿದೆ. ಈ ದುರಂತ ಸಂಭವಿಸಿದ ಐದು ದಿನಗಳಲ್ಲೇ ಸರಕು ತುಂಬಿದ ರೈಲು ಹಳಿತಪ್ಪಿತ್ತು.

ಇದನ್ನೂ ಓದಿ : LPG goods train : ಒಡಿಶಾ ರೈಲು ಅಪಘಾತ ಬೆನ್ನಲ್ಲೇ ಹಳಿ ತಪ್ಪಿದ ಎಲ್‌ಪಿಜಿ ಗ್ಯಾಸ್‌ ತುಂಬಿದ್ದ ಗೂಡ್ಸ್ ರೈಲು

ಇದನ್ನೂ ಓದಿ : ಉಚಿತ.. ಉಚಿತ.. ಉಚಿತ ಎನ್ನುತ್ತಲೇ ಗ್ರಾಹಕರಿಗೆ ವಿದ್ಯುತ್‌ ಶಾಕ್‌ ಕೊಟ್ಟ ರಾಜ್ಯ ಸರಕಾರ

Fire Breaks Out In AC Coach Durg-Puri Express In Odisha

Comments are closed.