former cpm leader : ಗೃಹಿಣಿಯರ ಅಶ್ಲೀಲ ವಿಡಿಯೋ ಚಿತ್ರೀಕರಣ : ತಲೆಮರೆಸಿಕೊಂಡಿದ್ದ ರಾಜಕೀಯ ನಾಯಕನ ಬಂಧನ

ಕೇರಳ : former cpm leader : ಈಗೆಲ್ಲ ನಮ್ಮ ಮನೆಗಳಲ್ಲಿ ಇದ್ದರೂ ಸಹ ನಮ್ಮ ಖಾಸಗಿತನ ಎಷ್ಟರ ಮಟ್ಟಿಗೆ ರಕ್ಷಣೆಯಾಗ್ತಿದೆ ಎಂದರೆ ಇದಕ್ಕೆ ಸ್ಪಷ್ಟವಾದ ಉತ್ತರ ಸಿಗದು. ಈ ಮಾತಿಗೆ ಪ್ರತ್ಯಕ್ಷ ಉದಾಹರಣೆ ಎಂಬಂತೆ ಕೇರಳದಲ್ಲಿ ಅಕ್ಕ ಪಕ್ಕದ ಮನೆಯ ಮಹಿಳೆಯರು ಸ್ನಾನ ಮಾಡುವುದನ್ನು ಚಿತ್ರೀಕರಿಸುತ್ತಿದ್ದ ಸಿಪಿಎಂ ಪಕ್ಷದ ಮಾಜಿ ನಾಯಕನನ್ನು ಪೊಲೀಸರು ತಮಿಳುನಾಡಿನಲ್ಲಿ ಬಂಧಿಸಿದ್ದಾರೆ. ಈತ ರಹಸ್ಯ ಕ್ಯಾಮರಾದ ಮೂಲಕ ಮಹಿಳೆಯ ಖಾಸಗಿ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದ ಎನ್ನಲಾಗಿದೆ.


ಕೊಡುಂಬಾದ ನಿವಾಸಿಯಾಗಿರುವ ಆರೋಪಿ ಹಾಗೂ ಸಿಪಿಎಂ ಪಕ್ಷದ ಮಾಜಿ ನಾಯಕ ಶಹಜಹಾನ್​ ಬಾತ್​ರೂಮ್​ ಕಿಟಕಿಗಳಲ್ಲಿ ಕ್ಯಾಮರಾವನ್ನಿಟ್ಟು ಈ ರೀತಿಯ ವಿಡಿಯೋಗಳನ್ನು ಚಿತ್ರೀಕರಿಸುತ್ತಿದ್ದ ಎನ್ನಲಾಗಿದೆ. ಒಂದಿನ ಮಹಿಳೆಯೊಬ್ಬರು ಸ್ನಾನಗೃಹದಲ್ಲಿ ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯ ನೆರಳನ್ನು ನೋಡಿ ಜೋರಾಗಿ ಕಿರುಚಿದ್ದಾರೆ. ಈತ ಅಲ್ಲಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಚಿತ್ರೀಕರಣ ಂಆಡುತ್ತಿದ್ದ ಮೊಬೈಲ್​ನ್ನು ಅಲ್ಲಿಯೇ ಕಳೆದುಕೊಂಡಿದ್ದಾನೆ.


ಆದರೆ ಶಹಜಹಾನ್​ ಈ ರೀತಿಯ ತಪ್ಪು ಮಾಡಿರಲಿಕ್ಕಿಲ್ಲ ಎಂದು ನಂಬಿದ್ದ ಮಹಿಳೆಯು ಶಹಜಹಾನ್​ ಬಳಿಯಲ್ಲಿ ಹೇಳಿಕೊಂಡಿದ್ದಾರೆ. ಕಳೆದುಕೊಂಡಿದ್ದ ಮೊಬೈಲ್​ ಮಹಿಳೆಗೆ ಸಿಕ್ಕು ಇದಕ್ಕೆ ಕರೆ ಮಾಡಿ ನೋಡಿದಾಗ ಇದು ಶಹಜಹಾನ್​ಗೆ ಸೇರಿದ ಮೊಬೈಲ್​ ಎನ್ನುವುದು ಮಹಿಳೆಯ ಗಮನಕ್ಕೆ ಬಂದಿದೆ.ಅಲ್ಲದೇ ಈ ಮೊಬೈಲ್​ನಲ್ಲಿ ಇನ್ನೂ ಅನೇಕ ಮಹಿಳೆಯರ ಸ್ನಾನ ಮಾಡುವ ವಿಡಿಯೋ ಲಭ್ಯವಾಗಿದೆ.


ಮೊಬೈಲ್​ ಸಮೇತ ಪೊಲೀಸ್​ ಠಾಣೆಗೆ ತೆರಳಿದ ಮಹಿಳೆಯು ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಶಹಜಹಾನ್​ ವಿರುದ್ಧ ಪೊಲೀಸರು ಜಾಮೀನು ರಹಿತ ಕೇಸು ದಾಖಲಿಸುತ್ತಿದ್ದಂತೆಯೇ ಶಹಜಹಾನ್ ತಮಿಳುನಾಡಿಗೆ ತೆರಳಿ ತಲೆಮರೆಸಿಕೊಂಡಿದ್ದ. ಆದರೆ ಶಹಜಹಾನ್​ ಪತ್ತೆಗೆ ವಿಶೇಷ ತಂಡ ರಚಿಸಿದ್ದ ಕೇರಳ ಪೊಲೀಸರು ಕೊನೆಗೂ ತಮಿಳುನಾಡಿನಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ . ಇದೀಗ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನು ಓದಿ : KL Rahul Fitness : ಕೆ.ಎಲ್ ರಾಹುಲ್ ಗಾಯದ ಕುರಿತು ಬಿಗ್ ಅಪ್‌ಡೇಟ್ : Exclusive

ಇದನ್ನೂ ಓದಿ : Shopian Encounter Update : ಬ್ಯಾಂಕ್‌ ಮ್ಯಾನೇಜರ್‌ ಹತ್ಯೆ, ಉಗ್ರನನ್ನು ಹೊಡೆದುರುಳಿಸಿದ ಕಾಶ್ಮೀರ ಪೊಲೀಸರು

former cpm leader who planted hidden camera in housewive bathroom taken into custody

Comments are closed.