Upscaler App : ಹಳೆಯ ಫೋಟೋಗಳನ್ನು ಹೊಸದರಂತಾಗಿಸುವ ಸುಲಭ ವಿಧಾನ

Upscaler App : ಫೋಟೋ ಕ್ರೇಜ್ ಯಾರಿಗೆ ಇರಲ್ಲ ಹೇಳಿ! ಒಂದು ಸುಂದರ ಫೋಟೋ ತೆಗೆಸಿಕೊಂಡು ಅದಕ್ಕೊಂದು ಕ್ಯಾಪ್ಶನ್ ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿ ಕೊಳ್ಳುವುದು ಸಧ್ಯದ ಟ್ರೆಂಡ್. ಸಂವಹನದ ಭಾಗವಾಗಿರುವ ಫೋಟೋ ಅನೇಕ ಬಗೆಯಲ್ಲಿ ಕೆಲಸ ಮಾಡುತ್ತದೆ. ಕೆಲವೊಮ್ಮೆ ನೆನಪುಗಳನ್ನು ಮರುಕಳಿಸುವಲ್ಲಿ ಯಾವುದೋ ಘಟನೆಯನ್ನು ಸುಲಭವಾಗಿ ವಿವರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಂದು ಫೋಟೋಗಳು ಇಲ್ಲದೆ ನಾವು ನಮ್ಮ ಜೀವನವನ್ನು ಕಲ್ಪನೆಯನ್ನು ಮಾಡಿಕೊಳ್ಳುವುದು ಕಷ್ಟವಾಗಿದೆ. ನಾವು ಹೋದಲ್ಲಿ, ಬಂದಲ್ಲಿ, ಕುಳಿತಲ್ಲಿ,  ನಿಂತಲ್ಲಿ ಫೋಟೋವನ್ನು ತೆಗೆದುಕೊಳ್ಳುತ್ತೇವೆ.

ಹಾಗೆ ಇಂದು  ಫೋಟೋಗ್ರಫಿ ಮಾಡುವುದು ಮೊದಲಿನಷ್ಟು ಕಷ್ಟವಲ್ಲ. ಈ ಹೊಸ ಹೊಸ ಅಳವಡಿಕೆಯ ಮೂಲಕ ಫೋಟೋಗ್ರಫಿ ತಂತ್ರಜ್ಞಾದಲ್ಲಿ ಮುನ್ನುಗ್ಗುತ್ತಿದೆ. ತಂತ್ರಜ್ಞಾನ ಮುಂದುವರೆದಂತೆ ಫೋಟೋಗ್ರಫಿಯು ತನ್ನಲ್ಲಿ ಹೊಸತನವನ್ನು ಅಳವಡಿಸಿಕೊಳ್ಳುತ್ತಾ ಬಂದಿದೆ. ಒಂದು ಫೋಟೋ ತೆಗೆದು ದಿನಗಳಗಟ್ಟಲೆ ಕಾಯುವ ಅವಶ್ಯಕತೆ ಪ್ರಸ್ತುತ ದಿನಗಳಲ್ಲಿ ಇಲ್ಲ. ಈಗ ತೆಗೆದ ಫೋಟೋವನ್ನು ಕ್ಷಣಾರ್ಧದಲ್ಲಿ ಪಡೆದುಕೊಳ್ಳಬಹುದು. ಅಲ್ಲದೇ ಆ ಫೋಟೋ ನಾವು ಅಂದುಕೊಂಡಂತೆ ಬಂದಿದೆಯೇ ಇಲ್ಲವೇ ಎಂದು ತಿಳಿದುಕೊಳ್ಳಬಹುದು. ಅಷ್ಟೇ ಅಲ್ಲ ಪ್ರಸ್ತುತದಲ್ಲಿ ಫೋಟೋಗ್ರಫಿ ಕೇವಲ ಹವ್ಯಾಸವಾಗಿ ಉಳಿಯದೆ, ಅದೆಷ್ಟೋ ಜನರಿಗೆ ಉದ್ಯೋಗದ ಕ್ಷೇತ್ರವಾಗಿದೆ.

ನಾವು ತೆಗೆದ ಫೋಟೋ ಅಥವಾ ತೆಗೆಸಿಕೊಂಡ ಫೋಟೋ ಸುಂದರವಾಗಿರಬೇಕೆನ್ನುವ ಹಂಬಲ ಪ್ರತಿಯೊಬ್ಬರಲ್ಲೂ ಇರುತ್ತದೆ. ಆದರೆ ಕೆಲವೊಮ್ಮೆ ನಾವಂದುಕೊಂಡ ರೀತಿಯಲ್ಲಿ ಫೋಟೋ ಇಲ್ಲದೇ ಇರಬಹುದು ಅಥವಾ ಬ್ಲರ್ ಆಗಿರಬಹುದು. ಸಾಮಾನ್ಯವಾಗಿ ಪ್ರಿಂಟ್ ಮಾಡಿ ಇಟ್ಟ ಫೋಟೋ ಬ್ಲರ್ ಆಗುತ್ತದೆ. ಈ ಕುರಿತು ಚಿಂತಿಸುವ ಅಗತ್ಯವಿಲ್ಲ ಕಾರಣ ಈ  ಸಮಸ್ಯೆಗೆ ಸುಲಭ ಪರಿಹಾರವಿದೆ.

ಹೌದು ಲೋ ಕ್ವಾಲಿಟಿ ಫೋಟೋಗಳನ್ನು ಹೆಚ್ ಡಿ ಫೋಟೋಗಳಾಗಿ ಬದಲಾಯಿಸಬಹುದು. ನಮ್ಮ ಫೋಟೋಗಳನ್ನು  imgupscaler.com ನಲ್ಲಿ ಅಪ್ಲೋಡ್ ಮಾಡುವ ಮೂಲಕ ಹಳೆಯ, ಕ್ಲಾರಿಟಿ ಇಲ್ಲದ ಫೋಟೋಗಳನ್ನು ಹೊಸದರಂತಾಗಿಸಬಹುದು. ಇಮೇಜ್ ಅಪ್ಸ್ಕೆಲರ್. ಕಾಮ್ (imgupscaler.com)ಗೆ ಭೇಟಿ ನೀಡಿ ನಮ್ಮ ಫೋಟೋವನ್ನು ಅಪ್ಲೋಡ್ ಮಾಡಿ ಕೆಲ ನಿಮಿಷಗಳ ಬಳಿಕ ಉತ್ತಮ ಗುಣಮಟ್ಟದ ಫೋಟೋವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಈ ಸುಲಭ ವಿಧಾನದಿಂದ ಹಲವು ವರ್ಷಗಳ ಹಿಂದಿನ ಹಳೆಯ ಫೋಟೋಗಳನ್ನು ಮತ್ತೆ ಪಡೆಯಬಹುದು. ಹೀಗೆ ಇಮೇಜ್ ಅಪ್ಸ್ಕೆಲರ್. ಕಾಮ್  ಎನ್ನುವುದು ನಮ್ಮ ಫೋಟೋವನ್ನು ಸುಂದರಗೊಳಿಸಲು ಸಹಾಯಕವಾಗಿದೆ. ಅಲ್ಲದೇ ನಾವು ಯಾವುದೇ ಚಿಂತೆ ಇಲ್ಲದೆ ನಮ್ಮ ಫೋಟೋವನ್ನು ಹೊಸ ರೂಪದಲ್ಲಿ ಪಡೆಯಬಹುದು.

ಇದನ್ನೂ ಓದಿ: Elephant kills woman : ಮಹಿಳೆಯನ್ನು ಅತ್ಯಂತ ಕ್ರೂರವಾಗಿ ಕೊಂದ ಆನೆ : ಅಂತ್ಯಕ್ರಿಯೆ ವೇಳೆ ಶವ ಛಿದ್ರಗೊಳಿಸಿದ ಗಜರಾಜ

ಇದನ್ನೂ ಓದಿ: Agnipath Yojana ಅಗ್ನಿಪಥ ಯೋಜನೆ ಯುವಕರಿಗೆ ರಾಷ್ಟ್ರಕ್ಕಾಗಿ ಸೇವೆ ಸಲ್ಲಿಸಲು ಅವಕಾಶ

Most Helpful Image Upscaler Software and APP

Comments are closed.